Tokyo Olympics: ಒಲಿಂಪಿಕ್ಸ್‌ನಲ್ಲಿರುವ ಭಾರತೀಯ ಕ್ರೀಡಾಪಟುಗಳಿಗೆ ವಿಶೇಷ ಸಂದೇಶ ರವಾನಿಸಿದ ವಿರಾಟ್- ದ್ರಾವಿಡ್
Tokyo Olympics: ಇಡೀ ದೇಶದ ನಿರೀಕ್ಷೆಗಳ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಆ ಭರವಸೆಗಳನ್ನು ವಿಜಯವನ್ನಾಗಿ ಪರಿವರ್ತಿಸುವ ಕೌಶಲ್ಯ ಮೀರಾಬಾಯಿ ಚಾನು ಅವರಿಗೆ ಚೆನ್ನಾಗಿ ತಿಳಿದಿದೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ತಮ್ಮ ಶಕ್ತಿಯನ್ನು ತೋರಿಸುತ್ತಿದ್ದಾರೆ. ಮೀರಾಬಾಯಿ ಚಾನು ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಿದ್ದಾರೆ. ಉಳಿದ ಆಟಗಾರರು ಕೂಡ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಇಡೀ ದೇಶ ಪ್ರೋತ್ಸಾಹ ನೀಡುತ್ತಿದೆ. ಈಗ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಕ್ರೀಡಾಪಟುಗಳ ಉತ್ಸಾಹವನ್ನು ಹೆಚ್ಚಿಸುವಂತೆ ದೇಶವಾಸಿಗಳಿಗೆ ವಿಶೇಷ ರೀತಿಯಲ್ಲಿ ಮನವಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಈಗ ಇಂಗ್ಲೆಂಡ್‌ನಲ್ಲಿದ್ದು ಮುಂಬರುವ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಿದ್ದಾರೆ. ಇವರಲ್ಲದೆ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡದ ಕೋಚ್ ಕೂಡ ವಿಶೇಷ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಇದುವರೆಗೆ ಒಂದು ಪದಕ ಗೆದ್ದಿದೆ. ಟೋಕಿಯೊ ಒಲಿಂಪಿಕ್ಸ್‌ನ ಎರಡನೇ ದಿನ ವೇಟ್‌ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದರು. ಅಂದಿನಿಂದ, ಇದುವರೆಗೆ ಭಾರತೀಯ ಆಟಗಾರರಿಂದ ಯಾವುದೇ ಪದಕ ಬಂದಿಲ್ಲ.
ವಿರಾಟ್ ವಿಶೇಷ ಸಂದೇಶ ವಿರಾಟ್ ಕೊಹ್ಲಿ ತಮ್ಮ ವಿಡಿಯೋ ಸಂದೇಶದಲ್ಲಿ, ಇಡೀ ದೇಶದ ನಿರೀಕ್ಷೆಗಳ ಭಾರವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಆ ಭರವಸೆಗಳನ್ನು ವಿಜಯವನ್ನಾಗಿ ಪರಿವರ್ತಿಸುವ ಕೌಶಲ್ಯ ಮೀರಾಬಾಯಿ ಚಾನು ಅವರಿಗೆ ಚೆನ್ನಾಗಿ ತಿಳಿದಿದೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ನಮ್ಮ ಭಾರತೀಯ ಕ್ರೀಡಾಪಟುವಿನ ಸಾಧನೆಯನ್ನೊಮ್ಮೆ ನೋಡಿ ಎಂದು ಹೇಳಿದ್ದಾರೆ.
#TeamIndia captain @imVkohli has a special message for weightlifter @mirabai_chanu, who won India's first medal at @Tokyo2020. ?? ? ?@IndiaSports | @Media_SAI | @WeAreTeamIndia pic.twitter.com/suRbQmB4bd
— BCCI (@BCCI) July 26, 2021
ಕ್ರೀಡಾಪಟುಗಳ ಉತ್ಸಾಹವನ್ನು ಹೆಚ್ಚಿಸಿ- ರಾಹುಲ್ ದ್ರಾವಿಡ್ ಶ್ರೀಲಂಕಾ ಪ್ರವಾಸಕ್ಕೆ ತೆರಳಿರುವ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ತಮ್ಮ ವಿಡಿಯೋ ಸಂದೇಶದಲ್ಲಿ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಟೀಮ್ ಇಂಡಿಯಾವನ್ನು ಬೆಂಬಲಿಸಲು ಒಗ್ಗೂಡಿ ಅವರನ್ನು ಪ್ರೋತ್ಸಾಹಿಸಿ ಎಂದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಇಬ್ಬರ ವಿಡಿಯೋ ಸಂದೇಶಗಳನ್ನು ಬಿಸಿಸಿಐನ ಟ್ವಿಟರ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ.
Rahul Dravid – batting legend & #TeamIndia's Head Coach for the Sri Lanka series – is cheering for our athletes at @Tokyo2020. ? ?
Let's join him & #Cheer4India ?? ? ?@IndiaSports | @Media_SAI | @WeAreTeamIndia pic.twitter.com/eJzXjM3IJN
— BCCI (@BCCI) July 26, 2021
ಶ್ರೀಲಂಕಾದಲ್ಲಿ ದ್ರಾವಿಡ್, ಇಂಗ್ಲೆಂಡ್‌ನಲ್ಲಿ ವಿರಾಟ್ ರಾಹುಲ್ ದ್ರಾವಿಡ್ ಶ್ರೀಲಂಕಾಕ್ಕೆ ಭೇಟಿ ನೀಡಿರುವ ಭಾರತೀಯ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯುವಜನರಿಂದ ಕೂಡಿರುವ ಟೀಮ್ ಇಂಡಿಯಾ ಏಕದಿನ ಸರಣಿಯಲ್ಲಿ ಶ್ರೀಲಂಕಾವನ್ನು ಸೋಲಿಸಿದೆ ಮತ್ತು ಟಿ 20 ಸರಣಿಯ ಮೊದಲ ಪಂದ್ಯವನ್ನೂ ಗೆದ್ದಿದೆ. ಮತ್ತೊಂದೆಡೆ, ವಿರಾಟ್ ಕೊಹ್ಲಿ ಅವರ ನೇತೃತ್ವದಲ್ಲಿ, ಭಾರತ ತಂಡ ಆಗಸ್ಟ್ 4 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ.
Published On - 4:36 pm, Mon, 26 July 21