Tokyo Olympics 2020: ಹಾಕಿಯಲ್ಲಿ ಭಾರತ ಭರ್ಜರಿ ಕಮ್ಬ್ಯಾಕ್: ಸ್ಪೇನ್ ವಿರುದ್ಧ 3-0 ಅಂತರದ ಗೆಲುವು
ಪಂದ್ಯ ಆರಂಭವಾದ 14ನೇ ನಿಮಿಷದಲ್ಲಿ ಸಿಮ್ರಂಜಿತ್ ಸಿಂಗ್ ಗೋಲು ಬಾರಿಸುವ ಮೂಲಕ ಭಾರತದ ಖಾತೆ ತೆರೆದರು.
ಟೋಕಿಯೋ ಒಲಿಂಪಿಕ್ಸ್ನ (Tokyo Olympics 2020) ನಾಲ್ಕನೇ ದಿನ ಭಾರತ ಉತ್ತಮ ಆಟ ಆರಂಭಿಸಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಹಾಕಿ ತಂಡ ಸ್ಪೇನ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮನ್ಪ್ರೀತ್ ಪಡೆ ಸ್ಪೇನ್ ವಿರುದ್ಧ 3-0 ಅಂತರದ ಗೋಲು ದಾಖಲಿಸಿ ಮುಂದಿನ ಸುತ್ತಿಗೆ ಎಂಟ್ರಿಕೊಟ್ಟಿದೆ. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಲು ಒಂದು ಹೆಜ್ಜೆ ಮುಂದಿಟ್ಟಿದೆ.
ಒಲಿಂಪಿಕ್ಸ್ನ ಚೊಚ್ಚಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಅಂತರದ ಪ್ರಯಾಸಕರ ಗೆಲುವು ದಾಖಲಿಸಿದ್ದ ಮನ್ಪ್ರೀತ್ ಸಿಂಗ್ ಪಡೆ ಎರಡನೇ ಪಂದ್ಯದಲ್ಲಿ ಆಸೀಸ್ ವಿರುದ್ಧ 1-7 ಅಂತರದ ಹೀನಾಯ ಸೋಲು ಅನುಭವಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಭಾರತ ಕಮ್ಬ್ಯಾಕ್ ಮಾಡಬೇಕಾದ ಒತ್ತಡದಲ್ಲಿತ್ತು.
ಅದರಂತೆ ಪಂದ್ಯ ಆರಂಭವಾದ 14ನೇ ನಿಮಿಷದಲ್ಲಿ ಸಿಮ್ರಂಜಿತ್ ಸಿಂಗ್ ಗೋಲು ಬಾರಿಸುವ ಮೂಲಕ ಭಾರತದ ಖಾತೆ ತೆರೆದರು. ಇದಾದ ಮುಂದಿನ ನಿಮಿಷದಲ್ಲೇ ರುಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಮೂಲಕ ಮತ್ತೊಂದು ಗೋಲು ಸಿಡಿಸಿದರು. ಮೊದಲನೇ ಕ್ವಾರ್ಟರ್ನಲ್ಲೇ ಭಾರತ 2-0 ಮುನ್ನಡೆ ಸಾಧಿಸಿತು.
Simranjeet….that was neat! ??#IND’s first goal against #ESP in their third #Hockey pool match put the team in a stylish early lead. ?#BestOfTokyo | #Tokyo2020 | #StrongerTogether | #UnitedByEmotion pic.twitter.com/3EifN5gNAt
— #Tokyo2020 for India (@Tokyo2020hi) July 27, 2021
ನಂತರ ಕಮ್ಬ್ಯಾಕ್ ಮಾಡಲು ಸ್ಪೇನ್ ಹರಸಾಹಸ ಪಟ್ಟಿತಾದರು ಭಾರತ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ರುಪಿಂದರ್ ಪಾಲ್ ಪೆನಾಲ್ಟಿ ಕಾರ್ನರ್ ಮೂಲಕ ಮತ್ತೊಂದು ಗೋಲು ಬಾರಿಸಿ ಭಾರತ 3-0 ಮುನ್ನಡೆ ಸಾಧಿಸುವಂತೆ ಮಾಡಿದರು. ಅಂತಿಮವಾಗಿ ಭಾರತ 3-0 ಅಂತರದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿದೆ.
ಇನ್ನೂ10 ಮೀಟರ್ ಏರ್ ಪಿಸ್ತೂಲ್ ಮಿಶ್ರಿತ ಗುಂಪು ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದ ಮನು ಭಾಕರ್ ಹಾಗೂ ಸೌರಭ್ ಚೌಧರಿಗೆ ಸೋಲಾಗಿದೆ. ಈ ಮೂಲಕ ಭಾರತ ಮತ್ತೊಂದು ಗೆಲ್ಲುವ ಆಸೆ ಕಳೆದುಕೊಂಡಿದೆ. 10 ಮೀ. ಏರ್ ಪಿಸ್ತೂಲ್ನ ಅರ್ಹತಾ ಸುತ್ತಿನಲ್ಲಿ ಈ ಜೋಡಿ 582 ಅಂಕಗಳನ್ನು ಗಳಿಸಿ ಟಾಪ್ 1ನೇ ಸ್ಥಾನವನ್ನು ಪಡೆದುಕೊಂಡಿತ್ತು.
ಇನ್ನೂ ಮೊದಲ ಸುತ್ತಿನಲ್ಲೇ ಪಾಲ್ಗೊಂಡಿದ್ದ ಭಾರತದ ಮತ್ತೊಂದು ಜೋಡಿ ಅಭಿಷೇಕ್ ಶರ್ಮಾ ಮತ್ತು ಯಶಸ್ವಿನಿ ದೆಸ್ವಾಲ್ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಲಿಲ್ಲ. ಈ ಜೋಡಿ 564 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
Tokyo Olympics 2020: ನಾಲ್ಕನೇ ದಿನ ಭಾರತ ಉತ್ತಮ ಆರಂಭ: ಮುಂದಿನ ಸುತ್ತಿಗೆ ಮನು-ಸೌರಭ್
The Hundred: ಹಂಡ್ರೆಡ್ನಲ್ಲಿ ಮಿಂಚುತ್ತಿರುವ ಜೆಮಿಯಾ ರೊಡ್ರಿಗಸ್: ಮತ್ತೊಂದು ಸ್ಫೋಟಕ ಆಟ, ಮತ್ತೊಂದು ಗೆಲುವು
(Tokyo Olympics 2020 India beat Spain 3-0 in hockey Manu-Saurabh finish 7th)