Tokyo Olympics 2020: ಸೋತು ಹತಾಷರಾದ ಭವಾನಿ ದೇವಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯಿಂದ ಸಾಂತ್ವನ
ಟುನಿಶಿಯಾದ ನಾಡಿಯಾ ಬೆನ್ ಅಜೀಜಿ ಅವರು ವಿರುದ್ಧ 15-3 ಅಂಕಗಳ ಗೆಲುವು ಸಾಧಿಸಿ 27 ವರ್ಷ ವಯಸ್ಸಿನ ಭವಾನಿ ದೇವಿ ಆವರು ಒಲಂಪಿಕ್ಸ್ನಲ್ಲಿ ತಮ್ಮ ಅಭಿಯಾನವನ್ನು ಉತ್ತಮವಾಗಿಯೇ ಆರಂಭಿಸಿದರು. ಆದರೆ ಎರಡನೇ ಸುತ್ತಿನಲ್ಲಿ ಅವರು ಬ್ರೂನೆಟ್ ಅವರನ್ನು ಎದುರಿಸಬೇಕಾಯಿತು.
ಒಲಂಪಿಕ್ಸ್ನಲ್ಲಿ ಭಾಗವಹಿಸಿದ ಭಾರತದ ಮೊಟ್ಟಮೊದಲ ಫೆನ್ಸರ್ ಎಂಬ ಹೆಗ್ಗಳಿಕೆಯೊಂದಿಗೆ ಒಲಂಪಿಕ್ ಕ್ರೀಡಾಕೂಟದಲ್ಲಿ ತನ್ನ ಮೊದಲ ಸುತ್ತಿನ ಪಂದ್ಯವನ್ನು ಗೆದ್ದು ಎರಡನೇ ಸುತ್ತಿನಲ್ಲಿ ವಿಶ್ವದ ಮೂರನೇ ಶ್ರೇಯಾಂಕದ ಫೆನ್ಸರ್ ಫ್ರಾನ್ಸಿನ ಬ್ರೂನೆಟ್ಗೆ ಸೋತು ತಮ್ಮ ಹತಾಷೆ ವ್ಯಕ್ತಪಡಿಸಿರುವ ಸಿ ಎ ಭವಾನಿ ದೇವಿ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಾಂತ್ವನ ಹೇಳಿ ಹುರುದುಂಬಿಸಿದ್ದಾರೆ. ಬ್ರೂನೆಟ್ಗೆ ಸೋತ ನಂತರ ಭವಾನಿ ದೇವಿ, ‘ನನ್ನ ಸಾಮರ್ಥ್ಯಕ್ಕೆ ಮೀರಿದ ಪ್ರಯತ್ನ ನೀಡಿದಾಗ್ಯೂ ಸೋಲಬೇಕಾಯಿತು, ಐ ಯಾಮ್ ಸಾರಿ,’ ಎಂದು ಟ್ವೀಟ್ ಮಾಡಿದ್ದಾರೆ.
ಅವರ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು, ‘ನಿಮ್ಮ ಸಾಮರ್ಥ್ಯಕ್ಕೆ ಮಿಗಿಲಾದ ಪ್ರಯತ್ನವನ್ನು ನೀವು ಮಾಡಿರುವಿರಿ, ಗಣನೆಗೆ ಬರೋದು ನಮ್ಮ ಪ್ರಯತ್ನವೇ ಹೊರತು ಫಲಿತಾಂಶವಲ್ಲ. ಸೋಲು ಗೆಲುವು ಬದುಕಿನ ಅವಿಭಾಜ್ಯ ಅಂಗವಾಗಿವೆ. ಕ್ರೀಡೆಗೆ ನೀವು ನೀಡಿರುವ ಕಾಣಿಕೆ ಬಗ್ಗೆ ಭಾರತಕ್ಕೆ ಗೌರವವಿದೆ. ನಮ್ಮ ದೇಶದ ಎಲ್ಲ ನಾಗರಿಕರಿಗೆ ನೀವು ಪ್ರೇರಣೆಯಾಗಿರುವಿರಿ,’ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
You gave your best and that is all that counts.
Wins and losses are a part of life.
India is very proud of your contributions. You are an inspiration for our citizens. https://t.co/iGta4a3sbz
— Narendra Modi (@narendramodi) July 26, 2021
ಟುನಿಶಿಯಾದ ನಾಡಿಯಾ ಬೆನ್ ಅಜೀಜಿ ಅವರು ವಿರುದ್ಧ 15-3 ಅಂಕಗಳ ಗೆಲುವು ಸಾಧಿಸಿ 27 ವರ್ಷ ವಯಸ್ಸಿನ ಭವಾನಿ ದೇವಿ ಆವರು ಒಲಂಪಿಕ್ಸ್ನಲ್ಲಿ ತಮ್ಮ ಅಭಿಯಾನವನ್ನು ಉತ್ತಮವಾಗಿಯೇ ಆರಂಭಿಸಿದರು. ಆದರೆ ಎರಡನೇ ಸುತ್ತಿನಲ್ಲಿ ಅವರು ಬ್ರೂನೆಟ್ ಅವರನ್ನು ಎದುರಿಸಬೇಕಾಯಿತು. ಫ್ರೆಂಚ್ ಮಹಿಳೆ ಈ ಪೈಪೋಟಿಯನ್ನು 15-7 ರಿಂದ ಗೆದ್ದರು. ಬ್ರೂನೆಟ್ ರಿಯೋ ಒಲಂಪಿಕ್ಸ್ನಲ್ಲಿ ಸೆಮಿಫೈನಲ್ ಹಂತ ತಲುಪಿದ್ದರು.
ಇದನ್ನೂ ಓದಿ: ಟೊಕಿಯೋ ಒಲಂಪಿಕ್ಸ್ 2020: ಕ್ವಾರ್ಟರ್ ಫೈನಲ್ ಹಂತ ತಲುಪಬೇಕಾದರೆ ಮಂಗಳವಾರ ಸ್ಪೇನನ್ನು ಭಾರತ ಮಣಿಸಲೇಬೇಕು.
Published On - 2:00 am, Tue, 27 July 21