Tokyo Olympics: ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಲೊವ್ಲಿನಾ: ಮುಂದಿನ ಪಂದ್ಯ ಗೆದ್ದರೆ ಪದಕ ಖಚಿತ
Lovlina Borgohain: ಕೊಕುಗಿಕನ್ ಅರೆನಾದಲ್ಲಿ ನಡೆದ 16 ನೇ ಸುತ್ತಿನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಲೊವ್ಲಿನಾ, ನಾಡಿನ್ ಅವರನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ನ (Tokyo Olympics 2020) ನಾಲ್ಕನೇ ದಿನ ಭಾರತ ಉತ್ತಮ ಆಟವಾಡುತ್ತಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಭಾರತ ಹಾಕಿ ತಂಡ ಸ್ಪೇನ್ ವಿರುದ್ಧ ಭರ್ಜರಿ ಜಯ ಸಾಧಿಸಿದರೆ, ಮಹಿಳೆಯರ 69 ಕೆಜಿ ಕುಸ್ತಿ ವಿಭಾಗದ ಪಂದ್ಯದಲ್ಲಿ ಲೊವ್ಲಿನಾ ಬೊರ್ಗೊಹೈನ್ (Lovlina Borgohain) ಜರ್ಮನಿಯ ನಾಡಿನ್ ಅಪೆಟ್ಜ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ.
ಕೊಕುಗಿಕನ್ ಅರೆನಾದಲ್ಲಿ ನಡೆದ 16 ನೇ ಸುತ್ತಿನಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಲೊವ್ಲಿನಾ, ನಾಡಿನ್ ಅವರನ್ನು 3-2 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಈ ಮೂಲಕ ಲೊವ್ಲಿನಾ ಮುಂದಿನ ಒಂದು ಪಂದ್ಯ ಗೆದ್ದರೆ ಭಾರತಕ್ಕೆ ಒಂದು ಪದಕ ಸಿಗುವುದು ಖಚಿತವಾಗಿದೆ. ಚೈನಿಸ್ ತೈಪೆ ವಿರುದ್ಧ ಜುಲೈ 30 ರಂದು ನಡೆಯುವ ಪಂದ್ಯದಲ್ಲಿ ಜಯಗಳಿಸಿದ್ದಲ್ಲಿ ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿಕೊಳ್ಳಲಿದ್ದಾರೆ.
Onwards! ??
Power packed punching from Lovlina Borgohain lands her a last eight slot as she wins 3-2 against Nadine Apetz of #GER in the women’s 69kg welterweight category! ? #IND #Tokyo2020 | #StrongerTogether | #UnitedByEmotion | @LovlinaBorgohai pic.twitter.com/Y9rserNmyR
— #Tokyo2020 for India (@Tokyo2020hi) July 27, 2021
ಇನ್ನೂ ಸಾಕಷ್ಟು ರೋಚಕತೆಯಿಂದ ಕೂಡಿದ್ದ ಭಾರತ ಹಾಗೂ ಸ್ಪೇನ್ ನಡುವಣ ಹಾಕಿ ಪಂದ್ಯದಲ್ಲಿ ಮನ್ಪ್ರೀತ್ ಪಡೆ 3-0 ಅಂತರದ ಗೋಲು ದಾಖಲಿಸಿ ಮುಂದಿನ ಸುತ್ತಿಗೆ ಎಂಟ್ರಿಕೊಟ್ಟಿದೆ. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಲು ಒಂದು ಹೆಜ್ಜೆ ಮುಂದಿಟ್ಟಿದೆ.
ಆದರೆ, ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಪ್ರಿ ಕ್ವಾರ್ಟರ್ ಫೈನಲ್ ಸುತ್ತಿನಲ್ಲಿ ಚೀನಾದ ಎಂ ಎ ಲಾಂಗ್ ವಿರುದ್ಧ ಸೋಲನುಭವಿಸಿದ್ದಾರೆ. ಎಂ ಎ ಲಾಂಗ್ ಭಾರತದ ಶರತ್ ಕಮಲ್ ವಿರುದ್ಧ 11-7, 8-11, 13-11, 11-4 ಹಾಗೂ 11-4 ಸೆಟ್‌ಗಳ ಅಂತರದಲ್ಲಿ ಜಯ ಸಾಧಿಸಿದ್ದಾರೆ.
10 ಮೀಟರ್ ಏರ್ ಪಿಸ್ತೂಲ್ ಮಿಶ್ರಿತ ಗುಂಪು ಹಂತದ ಮೊದಲ ಸುತ್ತಿನ ಪಂದ್ಯದಲ್ಲಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದ ಮನು ಭಾಕರ್ ಹಾಗೂ ಸೌರಭ್ ಚೌಧರಿಗೆ ಸೋಲಾಗಿದೆ. ಈ ಮೂಲಕ ಭಾರತ ಮತ್ತೊಂದು ಗೆಲ್ಲುವ ಆಸೆ ಕಳೆದುಕೊಂಡಿದೆ. 10 ಮೀ. ಏರ್ ಪಿಸ್ತೂಲ್ನ ಅರ್ಹತಾ ಸುತ್ತಿನಲ್ಲಿ ಈ ಜೋಡಿ 582 ಅಂಕಗಳನ್ನು ಗಳಿಸಿ ಟಾಪ್ 1ನೇ ಸ್ಥಾನವನ್ನು ಪಡೆದುಕೊಂಡಿತ್ತು.
IND vs SL: 2ನೇ ಟಿ-20 ಪಂದ್ಯಕ್ಕೆ ಇದೆಯೇ ಮಳೆಯ ಕಾಟ: ಹವಾಮಾನ ವರದಿ ಏನು ಹೇಳುತ್ತೆ?
(Tokyo Olympics Indian Boxer Lovlina Borgohain enters quarterfinals one win away from confirming a medal)
Published On - 1:00 pm, Tue, 27 July 21