ಟೋಕಿಯೋ ಒಲಿಂಪಿಕ್ಸ್ನಲ್ಲಿ (Tokyo Olympics) ಭಾರತ ಗುರುವಾರ ಉತ್ತಮ ಆಟ ಪ್ರದರ್ಶಿಸುತ್ತಿದೆ. ಮಹಿಳೆಯರ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ (PV Sindhu) ಅವರು ಡೆನ್ಮಾರ್ಕ್ನ ಮಿಯಾ ಬ್ಲಿಚ್ಫೆಲ್ಡ್ಟ್ ವಿರುದ್ಧ ರೌಂಡ್ 16 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.
ಸಾಕಷ್ಟು ರೋಚಕತೆ ಸೃಷ್ಟಿಸಿದ್ದ ಈ ಪಂದ್ಯದಲ್ಲಿ ಮಿಯಾ ವಿರುದ್ಧ 21-15, 21-13 ಅಂಕಗಳ ಅಂತರದಲ್ಲಿ ಸಿಂಧೂ ಅವರು ಮೇಲುಗೈ ಸಾಧಿಸಿದರು. ಸುಮಾರು 40 ನಿಮಿಷಗಳ ಕಾಲ ಈ ಪಂದ್ಯ ನಡೆಯಿತು.
ಪಂದ್ಯದ ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದ ಸಿಂಧೂ ಮೊದಲ ಸೆಟ್ ನಲ್ಲಿ 21-15ರಲ್ಲಿ ಮುನ್ನಡೆ ಸಾಧಿಸಿದರು. ಬಳಿಕ 2ನೇ ಸೆಟ್ ನಲ್ಲಿ ಮಿಯಾ ಕೊಂಚ ವಿರೋಧ ತೋರಿದರಾದೂ 2ನೇ ಸೆಟ್ ಅನ್ನೂ ಕೂಡ ಸಿಂಧು 21-13 ಅಂತರದಲ್ಲಿ ತಮ್ಮದಾಗಿಸಿಕೊಂಡು ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಇನ್ನೂ ರೋಯಿಂಗ್ ವಿಭಾಗದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಅರ್ಜುನ್ ಮತ್ತು ಅರವಿಂದ್ ಜೋಡಿಯ ಭಾರತದ ರೋಯಿಂಗ್ ತಂಡ 25 ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮಾಡಿರದ ದಾಖಲೆಯನ್ನು ನಿರ್ಮಿಸಿದ್ದಾರೆ.
ಇಂದು ಮುಂಜಾನೆ ರೋಯಿಂಗ್ ವಿಭಾಗದ ಡಬಲ್ಸ್ ಸ್ಕಲ್ಸ್ ಫೈನಲ್ ಬಿಯಲ್ಲಿ ಭಾಗವಹಿಸಿದ ಅರ್ಜುನ್ ಮತ್ತು ಅರವಿಂದ್ ಜೋಡಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಒಟ್ಟಾರೆ 11ನೇ ಸ್ಥಾನವನ್ನು ಪಡೆದುಕೊಂಡಿರುವ ಅರ್ಜುನ್ ಮತ್ತು ಅರವಿಂದ್ 6:29.66 ಟೈಮ್ ಮಾರ್ಕ್‌ನಲ್ಲಿ ಗುರಿಯನ್ನು ತಲುಪಿದರು.
ಭಾರತಕ್ಕೆ ಇಲ್ಲಿ ಪದಕ ಗೆಲ್ಲುವ ಅವಕಾಶ ಕೈತಪ್ಪಿತಾದರೂ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮುಟ್ಟದಂತಹ ಸ್ಥಾನವನ್ನು ಅರ್ಜುನ್ ಮತ್ತು ಅರವಿಂದ್ ಜೋಡಿ ಮುಟ್ಟಿ ನೂತನ ದಾಖಲೆ ಬರೆದರು.
Tokyo Olympics: ರೋಚಕ ಘಟ್ಟದಲ್ಲಿ ಹಾಕಿ ಪಂದ್ಯ: ರೋಯಿಂಗ್ ಇತಿಹಾಸದಲ್ಲಿ ಭಾರತದ ವಿಶೇಷ ಸಾಧನೆ
(Badminton: PV Sindhu defeats Mia Blichfeldt in straight sets, books place in quarter-final)
Published On - 7:20 am, Thu, 29 July 21