Tokyo Olympics: ರೋಚಕ ಘಟ್ಟದಲ್ಲಿ ಹಾಕಿ ಪಂದ್ಯ: ರೋಯಿಂಗ್ ಇತಿಹಾಸದಲ್ಲಿ ಭಾರತದ ವಿಶೇಷ ಸಾಧನೆ

ಇಂದು ಮುಂಜಾನೆ ರೋಯಿಂಗ್ ವಿಭಾಗದ ಡಬಲ್ಸ್ ಸ್ಕಲ್ಸ್ ಫೈನಲ್ ಬಿಯಲ್ಲಿ ಭಾಗವಹಿಸಿದ ಅರ್ಜುನ್ ಮತ್ತು ಅರವಿಂದ್ ಜೋಡಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಒಟ್ಟಾರೆ 11ನೇ ಸ್ಥಾನವನ್ನು ಪಡೆದುಕೊಂಡಿರುವ ಅರ್ಜುನ್ ಮತ್ತು ಅರವಿಂದ್ 6:29.66 ಟೈಮ್ ಮಾರ್ಕ್‌ನಲ್ಲಿ ಗುರಿಯನ್ನು ತಲುಪಿದರು.

Tokyo Olympics: ರೋಚಕ ಘಟ್ಟದಲ್ಲಿ ಹಾಕಿ ಪಂದ್ಯ: ರೋಯಿಂಗ್ ಇತಿಹಾಸದಲ್ಲಿ ಭಾರತದ ವಿಶೇಷ ಸಾಧನೆ
Indian rowers
Follow us
TV9 Web
| Updated By: Vinay Bhat

Updated on:Jul 29, 2021 | 7:15 AM

ಟೋಕಿಯೋ ಒಲಿಂಪಿಕ್ಸ್​ನಲ್ಲಿ (Tokyo Olympics) ನಿನ್ನೆ ಬುಧವವಾರ ಕಳಪೆ ಪ್ರದರ್ಶನ ತೋರಿದ್ದ ಭಾರತ ಇಂದು ಕಠಿಣ ಪೈಪೋಟಿ ನೀಡುತ್ತಿದೆ. ಒಂದು ಕಡೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ ಅವರು ಡೆನ್ಮಾರ್ಕ್​ನ ಮಿಯಾ ಬಿಲ್ಚ್​​ಫೆಲ್ಡ್ಟ್ ವಿರುದ್ಧ ರೌಂಡ್ 16 ಪಂದ್ಯವನ್ನು ಆಡುತ್ತಿದ್ದಾರೆ. ಈ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸುತ್ತಿದೆ. ಇನ್ನೊಂದೆಡೆ ಭಾರತ ಪುರುಷರ ಹಾಕಿ ತಂಡ ಅರ್ಜೆಂಟಿನಾ ವಿರುದ್ಧ ಸೆಣೆಸಾಡುತ್ತಿದೆ.

ಇದರ ನಡುವೆ ರೋಯಿಂಗ್ ವಿಭಾಗದಲ್ಲಿ ಭಾರತ ಹೊಸ ದಾಖಲೆ ಬರೆದಿದೆ. ಅರ್ಜುನ್ ಮತ್ತು ಅರವಿಂದ್ ಜೋಡಿಯ ಭಾರತದ ರೋಯಿಂಗ್ ತಂಡ 25 ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮಾಡಿರದ ದಾಖಲೆಯನ್ನು ನಿರ್ಮಿಸಿದ್ದಾರೆ.

ಇಂದು ಮುಂಜಾನೆ ರೋಯಿಂಗ್ ವಿಭಾಗದ ಡಬಲ್ಸ್ ಸ್ಕಲ್ಸ್ ಫೈನಲ್ ಬಿಯಲ್ಲಿ ಭಾಗವಹಿಸಿದ ಅರ್ಜುನ್ ಮತ್ತು ಅರವಿಂದ್ ಜೋಡಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಒಟ್ಟಾರೆ 11ನೇ ಸ್ಥಾನವನ್ನು ಪಡೆದುಕೊಂಡಿರುವ ಅರ್ಜುನ್ ಮತ್ತು ಅರವಿಂದ್ 6:29.66 ಟೈಮ್ ಮಾರ್ಕ್‌ನಲ್ಲಿ ಗುರಿಯನ್ನು ತಲುಪಿದರು.

ಭಾರತಕ್ಕೆ ಇಲ್ಲಿ ಪದಕ ಗೆಲ್ಲುವ ಅವಕಾಶ ಕೈತಪ್ಪಿತಾದರೂ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಭಾರತದ ಯಾವುದೇ ರೋವರ್ಸ್ ಮುಟ್ಟದಂತಹ ಸ್ಥಾನವನ್ನು ಅರ್ಜುನ್ ಮತ್ತು ಅರವಿಂದ್ ಜೋಡಿ ಮುಟ್ಟಿ ನೂತನ ದಾಖಲೆ ಬರೆದರು.

ಇಂದಾದರೂ ಭಾರತೀಯರ ಕಡೆಯಿಂದ ಎರಡನೇ ಪದಕ ನಿರೀಕ್ಷಿಸಲಾಗುತ್ತಿದೆ. ಹಾಕಿಯಲ್ಲಿ ಭಾರತ ಹಾಗೂ ಅರ್ಜೆಂಟಿನಾ ಪಂದ್ಯ ನಡೆಯುತ್ತಿದೆ. ಮತ್ತೊಂದೆಡೆ ಬ್ಯಾಡ್ಮಿಂಟನ್‌ನಲ್ಲಿ ಪಿವಿ ಸಿಂಧು ಆಡುತ್ತಿದ್ದು ಗೆದ್ದರೆ ಮುಂದಿನ ಸುತ್ತಿಗೆ ಎಂಟ್ರಿ ಕೊಡಲಿದ್ದಾರೆ. ಭಾರೀ ಕುತೂಹಲ ಕೆರಳಿಸಿರುವ ಬಾಕ್ಸರ್ ಮೇರಿ ಕೋಮ್ ಕೂಡ ಇಂದು ತಮ್ಮ ಅಗ್ನಿ ಪರೀಕ್ಷೆಯನ್ನು ಎದುರಿಸಲಿದ್ದಾರೆ.

Tokyo Olympics 2020: ಪುರುಷರ ಬ್ಯಾಡ್ಮಿಂಟನ್​ನಲ್ಲಿ ಚಿನ್ನ ಗೆಲ್ಲುವರೆಂದು ನಿರೀಕ್ಷಿಸಲಾಗಿದ್ದ ವಿಶ್ವ ಚಾಂಪಿಯನ್ ಮೊಮೊಟಾ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದರು!

Tokyo Olympics: ಸ್ಪರ್ಧಿಗೆ ಕಪಾಳ‌ಮೋಕ್ಷ ಮಾಡಿದ ಕೋಚ್: ವಿಡಿಯೋ ವೈರಲ್

(Tokyo Olympics Indian rowers finish at 11th position producing best-ever result at the Games)

Published On - 7:11 am, Thu, 29 July 21

‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ