Tokyo Olympics: ಸ್ಪರ್ಧಿಗೆ ಕಪಾಳಮೋಕ್ಷ ಮಾಡಿದ ಕೋಚ್: ವಿಡಿಯೋ ವೈರಲ್
Tokyo Olympics 2020: ಸದ್ಯ ಜರ್ಮನಿ ಕೋಚ್ನ ಕಪಾಳ ಮೋಕ್ಷದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೆಲವರು ತರಬೇತುದಾರನ ನಡೆಯನ್ನು ಸಮರ್ಥಿಸಿದ್ದಾರೆ. ಇನ್ನು ಕೆಲವರು ಈ ರೀತಿಯ ವರ್ತನೆಯ ಸ್ಪರ್ಧಿಗಳ ಮೇಲೆ ಮತ್ತಷ್ಟು ಒತ್ತಡವನ್ನು ಉಂಟು ಮಾಡುತ್ತದೆ ಎಂದಿದ್ದಾರೆ.
ಹಲವು ಕೌತುಕಗಳಿಗೆ ಸಾಕ್ಷಿಯಾಗಿರುವ ಟೋಕಿಯೋ ಒಲಿಂಪಿಕ್ಸ್ನಲ್ಲಿ ಮಂಗಳವಾರ ಅನಿರೀಕ್ಷಿತ ಘಟನೆಯೊಂದು ನಡೆಯಿತು. ಸಾಮಾನ್ಯವಾಗಿ ಕೋಚ್ ಪಂದ್ಯದ ಆರಂಭಕ್ಕೂ ಮುನ್ನ ತನ್ನ ಸ್ಪರ್ಧಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಾರೆ. ಆದರೆ ಜರ್ಮನಿಯ ಕೋಚ್ ಸ್ಪರ್ಧಿಗೆ ಕಪಾಳಕ್ಕೆ ಬಾರಿಸುವುದನ್ನು ನೋಡಿ ಎಲ್ಲರೂ ದಂಗಾಗಿದ್ದರು.
ಜುಡೋ ಸ್ಪರ್ಧಿ ಮಾರ್ಟಿನಾ ಟ್ರಾಜ್ಡೋಸ್ ಕಣಕ್ಕಿಳಿಯುವ ಮುನ್ನ ಕೋಚ್ ಕಪಾಳ ಮೋಕ್ಷ ಮಾಡಿದ್ದರು. ಸ್ಪರ್ಧಿಯ ಹಿಂದೆಯೇ ಬಂದ ಕೋಚ್ ಆಕೆಯ ಬಟ್ಟೆಯ ಕಾಲರ್ ಹಿಡಿದು ಅಲುಗಾಡಿಸಿ ಕೆನ್ನೆಗೆ ಬಾರಿಸಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಬಗ್ಗೆ ಕೆಲವರಿಂದ ಅಪಸ್ವರಗಳು ಕೇಳಿ ಬರುತ್ತಿದ್ದಂತೆ, ಕಪಾಳಮೋಕ್ಷಕ್ಕೊಳಗಾದ ಟ್ರಾಜ್ಡೋಸ್ ತನ್ನ ಕೋಚ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪಂದ್ಯದ ವೇಳೆ ಎಚ್ಚರವಾಗಿರಲು, ನನ್ನನ್ನು ರೊಚ್ಚಿಗೆಬ್ಬಿಸಲು ಕೋಚ್ಗೆ ಹಾಗೆ ಮಾಡುವಂತೆ ನಾನೇ ಕೇಳಿದ್ದೆ. ದಯವಿಟ್ಟು ಅವರನ್ನು ದೂಷಿಸಬೇಡಿ. ಕಿಚ್ಚಿನಿಂದ ಹೋರಾಡಲು ನನ್ನನ್ನು ಪ್ರೇರೆಪಿಸಲು ಹೀಗೆ ಮಾಡಲಾಗಿದೆ ಎಂದು ಟ್ರಾಜ್ಡೋಸ್ ತಿಳಿಸಿದ್ದಾರೆ.
A czo tu się odpoliczkowało w ogóle?! pic.twitter.com/mX2r9rMMTA
— Mischa Von Jadczak (@michaljadczak) July 27, 2021
ಸದ್ಯ ಜರ್ಮನಿ ಕೋಚ್ನ ಕಪಾಳ ಮೋಕ್ಷದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕೆಲವರು ತರಬೇತುದಾರನ ನಡೆಯನ್ನು ಸಮರ್ಥಿಸಿದ್ದಾರೆ. ಇನ್ನು ಕೆಲವರು ಈ ರೀತಿಯ ವರ್ತನೆಯ ಸ್ಪರ್ಧಿಗಳ ಮೇಲೆ ಮತ್ತಷ್ಟು ಒತ್ತಡವನ್ನು ಉಂಟು ಮಾಡುತ್ತದೆ ಎಂದಿದ್ದಾರೆ. ಇದಾಗ್ಯೂ ಈ ಪಂದ್ಯದಲ್ಲಿ ಹಂಗೇರಿಯಾದ ಓಜ್ಬಾಸ್ ವಿರುದ್ದ ಟ್ರಾಜ್ಡೋಸ್ ಸೋಲನುಭವಿಸಿದ್ದಾರೆ.
View this post on Instagram
ಇದನ್ನೂ ಓದಿ: ಮದ್ಯಪಾನ ಮಾಡಿ ಶತಕ ಸಿಡಿಸಿದ್ದ ಗ್ಯಾರಿ ಸೋಬರ್ಸ್..!
ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ಗೆ ಅವಕಾಶ ಕೈತಪ್ಪುವ ಆತಂಕ
(Tokyo Olympics 2020: Judo coach slaps German athlete. Here is why)