Tokyo Olympics: ಜೊಕೊವಿಕ್ ಗೋಲ್ಡನ್ ಸ್ಲಾಮ್ ಕನಸು ಭಗ್ನ.. ಮಿಂಚಿದ ಯುವ ಪ್ರತಿಭೆಗಳು; ಟೆನಿಸ್‌ನಲ್ಲಿ ಪದಕ ಗೆದ್ದವರ ವಿವರ ಹೀಗಿದೆ

| Updated By: ಪೃಥ್ವಿಶಂಕರ

Updated on: Aug 04, 2021 | 9:03 PM

Tokyo Olympics: ಈ ಬಾರಿ ಅಭಿಮಾನಿಗಳು 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಟೆನಿಸ್‌ನಲ್ಲಿ ಅನೇಕ ದೊಡ್ಡ ತಾರೆಯರನ್ನು ನೋಡಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಯುವ ಮತ್ತು ಪ್ರತಿಭಾವಂತ ಮುಖಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸುವ ಅವಕಾಶವನ್ನು ಪಡೆದುಕೊಂಡವು.

Tokyo Olympics: ಜೊಕೊವಿಕ್ ಗೋಲ್ಡನ್ ಸ್ಲಾಮ್ ಕನಸು ಭಗ್ನ.. ಮಿಂಚಿದ ಯುವ ಪ್ರತಿಭೆಗಳು; ಟೆನಿಸ್‌ನಲ್ಲಿ ಪದಕ ಗೆದ್ದವರ ವಿವರ ಹೀಗಿದೆ
ಅಲೆಕ್ಸಾಂಡರ್ ಜ್ವೆರೆವ್
Follow us on

ಈ ಬಾರಿ ಅಭಿಮಾನಿಗಳು 2020 ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಟೆನಿಸ್‌ನಲ್ಲಿ ಅನೇಕ ದೊಡ್ಡ ತಾರೆಯರನ್ನು ನೋಡಲು ಸಾಧ್ಯವಾಗಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅನೇಕ ಯುವ ಮತ್ತು ಪ್ರತಿಭಾವಂತ ಮುಖಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸುವ ಅವಕಾಶವನ್ನು ಪಡೆದುಕೊಂಡವು. ಈ ಬಾರಿ ಯಾವುದೇ ಒಂದು ದೇಶದ ಪ್ರಾಬಲ್ಯ ಟೆನಿಸ್ ನಲ್ಲಿ ಕಾಣಲಿಲ್ಲ. ಟೆನಿಸ್‌ನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಐದು ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಪ್ರತಿ ಸ್ಪರ್ಧೆಯಲ್ಲಿ, ಚಿನ್ನದ ಪದಕ ಬೇರೆ ಬೇರೆ ದೇಶದ ಹೆಸರಿನಲ್ಲಿತ್ತು. ROC ಆಗಿ ಭಾಗವಹಿಸುವ ರಷ್ಯಾ ಒಂದು ಚಿನ್ನ ಮತ್ತು ಎರಡು ಬೆಳ್ಳಿ ಗೆದ್ದಿತು. ಇದರ ಹೊರತಾಗಿ, ಕ್ರೊಯೇಷಿಯಾ, ಜೆಕ್ ಗಣರಾಜ್ಯ ಮತ್ತು ಸ್ವಿಜರ್ಲ್ಯಾಂಡ್ ತಲಾ 2 ಪದಕಗಳನ್ನು ಗೆದ್ದುಕೊಂಡವು.

ವರ್ಷದ ಆರಂಭದಿಂದಲೂ ಅತ್ಯುತ್ತಮ ಫಾರ್ಮ್ ನಲ್ಲಿದ್ದ ನೊವಾಕ್ ಜೊಕೊವಿಕ್ ಇಲ್ಲಿ ಹಿನ್ನಡೆ ಅನುಭವಿಸಬೇಕಾಯಿತು. ಅಲೆಕ್ಸಾಂಡರ್ ಜ್ವೆರೆವ್ ಜೊಕೊವಿಚ್ ಅವರನ್ನು ಸೋಲಿಸುವ ಮೂಲಕ ಗೋಲ್ಡನ್ ಸ್ಲಾಮ್ ಪೂರ್ಣಗೊಳಿಸಿದ ಮೊದಲ ಪುರುಷ ಆಟಗಾರ ಎಂಬ ಕನಸನ್ನು ಭಗ್ನಗೊಳಿಸಿದರು. ಚಿನ್ನದ ಪದಕವನ್ನೂ ಪಡೆದರು. ಅದೇ ಸಮಯದಲ್ಲಿ, ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಸ್ವಿಟ್ಜರ್ಲೆಂಡ್‌ನ ಬೆಲಿಂಡಾ ಬೆಂಚಿಚ್‌ಗೆ ಸಿಕ್ಕಿತು. 20 ಗ್ರಾಂಡ್ ಸ್ಲಾಮ್ ಗೆದ್ದ ರೋಜರ್ ಫೆಡರರ್ ಕೂಡ ಮಾಡಲಾಗದ ಸಾಧನೆಯನ್ನು ಅವರು ಮಾಡಿದರು.

ಪುರುಷರ ಸಿಂಗಲ್ಸ್
ಚಿನ್ನ – ಅಲೆಕ್ಸಾಂಡರ್ ಜ್ವೆರೆವ್ – ಜರ್ಮನಿ
ಬೆಳ್ಳಿ – ಕೀರನ್ ಖಚಾನೋವ್ – ಆರ್ಒಸಿ
ಕಂಚು – ಪ್ಯಾಬ್ಲೊ ಬುಸ್ಟಾ ಕ್ಯಾರೆನೊ – ಕಂಚಿನ ಪದಕ

ಮಹಿಳಾ ಸಿಂಗಲ್ಸ್
ಚಿನ್ನ – ಬೆಲಿಂಡಾ ಬೇಸಿಕ್ – ಸ್ವಿಜರ್ಲ್ಯಾಂಡ್
ಬೆಳ್ಳಿ – ಜೆಕ್ ಗಣರಾಜ್ಯ – ಮಾರ್ಕೆಟಾ ವೊಂಡ್ರುಸೋವಾ
ಕಂಚು – ಎಲಿನಾ ಸ್ವಿಟೋಲಿನಾ – ಉಕ್ರೇನ್

ಪುರುಷರ ಡಬಲ್ಸ್
ಚಿನ್ನ – ಮೆಕ್ಟಿಕ್ ನಿಕೋಲಾ ಮತ್ತು ಪವಿಕ್ ಮೇಟ್ – ಕ್ರೊಯೇಷಿಯಾ
ಬೆಳ್ಳಿ – ಮರಿನ್ ಚಿಲಿಚ್ ಮತ್ತು ಡೊಡಿಗ್ ಚಿಲಿಚ್ – ಕ್ರೊಯೇಷಿಯಾ
ಕಂಚು – ಮಾರ್ಕಸ್ ಡ್ಯಾನಿಲ್ ಮತ್ತು ವಿನಾಸ್ ಮೈಕೆಲ್ – ನ್ಯೂಜಿಲ್ಯಾಂಡ್

ಮಹಿಳೆಯರ ಡಬಲ್ಸ್
ಚಿನ್ನ – ಬಾರ್ಬೊರಾ ಕರೆಜಿಕೋವಾ ಮತ್ತು ಕಟರೀನಾ ಸಿನ್ನಿಕೋವಾ – ಜೆಕ್ ಗಣರಾಜ್ಯ
ಬೆಳ್ಳಿ – ಬೆಲಿಂಡಾ ಬೆಂಚಿಚ್ ಮತ್ತು ವಿಕ್ಟೋರಿಜಾ ಗ್ಲುಬಿಕ್ – ಸ್ವಿಜರ್ಲ್ಯಾಂಡ್
ಕಂಚು – ಲಾರಾ ಪಿಗೋಸಿ ಮತ್ತು ಲೂಸಾ ಸ್ಟೆಫಾನಿ – ಬ್ರೆಜಿಲ್

ಮಿಶ್ರ ಡಬಲ್ಸ್
ಚಿನ್ನ – ಆಂಡ್ರೆ ರುಬ್ಲೆವ್ ಮತ್ತು ಅನಸ್ತಾಸಿಯಾ ಪಾವ್ವುಚೆಂಕೋವಾ – ಆರ್ಒಸಿ
ಬೆಳ್ಳಿ – ಅಸ್ಲಾನ್ ಕರಸ್ಟೆವ್ ಮತ್ತು ಎಲಿನಾ ವೆಸ್ನಿನಾ – ಆರ್ಒಸಿ
ಕಂಚು – ಆಶ್ಲೇ ಬಾರ್ಟಿ ಮತ್ತು ಜಾನ್ ಪಿಯರ್ಸ್ – ಆಸ್ಟ್ರೇಲಿಯಾ