Tokyo Olympics: ಬಂಗಾರ ಗೆದ್ದ ನೀರಜ್​ಗೆ ತರಬೇತಿ ನೀಡಿದ್ದು ನಮ್ಮ ಹೆಮ್ಮೆಯ ಕನ್ನಡಿಗ ಕಾಶೀನಾಥ್ ನಾಯ್ಕ್​!

| Updated By: guruganesh bhat

Updated on: Aug 07, 2021 | 11:58 PM

Tokyo Olympics: ನೀರಜ್ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕಾಶೀನಾಥ್ ನಾಯ್ಕ್, ಆರಂಭದಲ್ಲಿ ನೀರಜ್ 70 ಮೀಟರ್​ ಥ್ರೋ ಮಾಡ್ತಿದ್ದರು. ಒಳ್ಳೆಯ ಹೈಟ್​ ಇದ್ದರು ಮತ್ತು ಒಳ್ಳೆಯ ಟ್ಯಾಲೆಂಟ್​ ಹುಡುಗ ಆಗಿದ್ದರು.

Tokyo Olympics: ಬಂಗಾರ ಗೆದ್ದ ನೀರಜ್​ಗೆ ತರಬೇತಿ ನೀಡಿದ್ದು ನಮ್ಮ ಹೆಮ್ಮೆಯ ಕನ್ನಡಿಗ ಕಾಶೀನಾಥ್ ನಾಯ್ಕ್​!
ಕಾಶೀನಾಥ್ ನಾಯ್ಕ್, ನೀರಜ್ ಚೋಪ್ರಾ
Follow us on

ಒಲಿಂಪಿಕ್ಸ್ ( Olympics) ಕ್ರೀಡಾಕೂಟ ಆರಂಭವಾಗಿ 124 ವರ್ಷಗಳು ಕಳೆದಿವೆ. ಕಳೆದ ಒಂದು ಶತಮಾನದಿಂದಲೂ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರೂ, ಪ್ರಶಸ್ತಿ ಪಟ್ಟಿಯಲ್ಲಿ ಮಹತ್ವದ ಸಾಧನೆ ಮೆರೆಯಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ವೈಯುಕ್ತಿಕ ವಿಭಾಗದಲ್ಲಿ ಇದುವೆರೆಗೆ ಭಾರತ ಗೆದ್ದ ಚಿನ್ನದ ಪದಕ ಸಂಖ್ಯೆ ಕೇವಲ ಒಂದು ಆಗಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಮತ್ತೊಮ್ಮೆ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. ಈ ಪದಕದೊಂದಿಗೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತದ ಪದಕದ ಸಂಖ್ಯೆ 7ಕ್ಕೇರಿದೆ. ಇದರೊಂದಿಗೆ ಭಾರತ ಒಲಿಂಪಿಕ್ಸ್​ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದಂತಾಗಿದೆ.

ನೀರಜ್ ಚೋಪ್ರಾ ಅವರ ಈ ಸಾದನೆಯಲ್ಲಿ ಕನ್ನಡಿಗ ಪಾಲು ಇದೆ ಎಂಬುದು ಕನ್ನಡಿಗರಿಗೆ ಇನ್ನೊಂದು ಹೆಮ್ಮೆಯ ಸಂಗತಿಯಾಗಿದೆ. ಸೈನ್ಯದಲ್ಲಿ ಸುಭೇದಾರ್ ಆಗಿ ಹಾಗೂ 2013 ರಿಂದ 19 ರವೆಗೆ ಇಂಡಿಯನ್ ಟೀಂ ಜಾವಲಿನ್​ ಥ್ರೋ ಕೋಚರ್ ಆಗಿ ಕಾರ್ಯನಿರ್ವಹಿಸಿದ್ದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬೆಂಗಳೆ ಗ್ರಾಮದ ಕಾಶೀನಾಥ್ ನಾಯ್ಕ್​, ನೀರಜ್​ಗೆ ಜಾವಲೀನ್ ಎಸೆತದ ಕೌಶಲ್ಯಗಳನ್ನು ಹೇಳಿಕೊಟ್ಟಿದ್ದರು. 2015ನಲ್ಲಿ ಕಾಶೀನಾಥ್ ನಾಯ್ಕ್ ಅಡಿಯಲ್ಲಿ ತರಬೇತಿಗೆ ನೀರಜ್​ ಚೋಪ್ರಾ ಸೇರಿಕೊಂಡಿದ್ದರು

ಒಳ್ಳೆಯ ಟ್ಯಾಲೆಂಟ್​ ಹುಡುಗ ಆಗಿದ್ದರು
ನೀರಜ್ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕಾಶೀನಾಥ್ ನಾಯ್ಕ್, ಆರಂಭದಲ್ಲಿ ನೀರಜ್ 70 ಮೀಟರ್​ ಥ್ರೋ ಮಾಡ್ತಿದ್ದರು. ಒಳ್ಳೆಯ ಹೈಟ್​ ಇದ್ದರು ಮತ್ತು ಒಳ್ಳೆಯ ಟ್ಯಾಲೆಂಟ್​ ಹುಡುಗ ಆಗಿದ್ದರು. ಮಂಗಳೂರಲ್ಲಿ ನ್ಯಾಷಿನಲ್​ ಕಾಂಪಿಟೇಷನಲ್ಲಿ ನನ್ನ ಹತ್ತಿರ ದೇವೆಂದ್ರ ಸಿಂಗ್​, ನೀರಜ್​ ತರಬೇತಿ ಪಡೆದಿದ್ರು. ಪೊಲ್ಯಾಂಡ್​ನಲ್ಲಿ ಜ್ಯೂನಿಯರ್​​ ವಿಶ್ವ ಚಾಂಪಿಯನ್​ ಸ್ಪರ್ಧೆ ಇತ್ತು. ಅದರಲ್ಲಿ ನೀರಜ್ 86.48 ಥ್ರೋ ಮಾಡಿ ಜ್ಯೂನಿಯರ್​ ವಿಶ್ವ ದಾಖಲೆ ಮಾಡಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ. ಕನ್ನಡಿಗ ಕಾಶೀನಾಥ್ ನಾಯ್ಕ್ 2010 ಕಾಮನ್​ವೆಲ್ತ್​ ಗೇಮ್ಸ್​ ಮೆಡಲಿಸ್ಟ್ ಮತ್ತು ಏಷಿಯನ್​ ಚಾಂಪಿಯನ್​ ಮೆಡಲಿಸ್ಟ್ ಆಗಿದ್ದಾರೆ.

Published On - 11:43 pm, Sat, 7 August 21