ಸಾವಿರಾರು ಖಾಲಿ ಆಸನಗಳ ಮುಂದೆ ಬಹುನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ 2020ಕ್ಕೆ (Tokyo Olympics 2020) ಶುಕ್ರವಾರ ಅಧಿಕೃತ ಚಾಲನೆ ದೊರೆತಿದೆ. ಕೊರೋನ ಸಾಂಕ್ರಾಮಿಕ ರೋಗದಿಂದಾಗಿ ಒಂದು ವರ್ಷ ಮುಂದೂಡಿಕೆಯಾಗಿದ್ದ ಒಲಿಂಪಿಕ್ ಗೇಮ್ಸ್ಗೆ ಕ್ವಿಕ್ ಸ್ಟಾರ್ಟ್ ಸಿಕ್ಕಿದೆ. 68,000 ಪ್ರೇಕ್ಷಕರ ಸಾಮರ್ಥ್ಯದ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡದ ಸಮಾರಂಭದಲ್ಲಿ ಜಪಾನ್ ಚಕ್ರವರ್ತಿ ನರುಹಿಟೊ, ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಹಾಗೂ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಸೇರಿದಂತೆ ಕೆಲವೇ ನೂರು ಅಧಿಕಾರಿಗಳು ಮತ್ತು ಗಣ್ಯರು ಹಾಜರಿದ್ದರು.
ಉದ್ಘಾಟನಾ ಸಮಾರಂಭದಲ್ಲಿ ಭಾರತದ ಪರವಾಗಿ ಕೇವಲ 19 ಅಥ್ಲೀಟ್‌ಗಳು ಮಾತ್ರವೇ ಭಾಗಿಯಾದರು. ಇವರ ಜೊತೆಗೆ 6 ಅಧಿಕಾರಿಗಳು ಕೂಡ ಸಾಥ್ ನೀಡದರು. ಭಾರತದ ಬಾಕ್ಸಿಂಗ್ ತಾರೆ ಮೇರಿ ಕೋಮ್ ಹಾಗೂ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜವನ್ನು ಹಿಡಿಯುವ ಗೌರವ ಪಡೆದುಕೊಂಡರು.
ನಾಳೆ ಶನಿವಾರದಿಂದ ಕ್ರೀಡಾಕೂಟದ ಕಾವು ಹೆಚ್ಚಲಿದ್ದು ಭಾರತಕ್ಕೆ ಕಠಿಣ ಸವಾಲು ಎದುರಾಗಲಿದೆ. ಒಲಿಂಪಿಕ್ಸ್ ಕ್ರೀಡಾಕೂಟದ ಎರಡನೇ ದಿನ ಭಾರತದ ಕ್ರೀಡಾಪಟುಗಳು ಸುಮಾರು 10 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಭಾರತದ ಪಾಲಿಗೆ ಶೂಟಿಂಗ್ ದೊಡ್ಡ ಸ್ಪರ್ಧೆಯಾಗಿರಲಿದೆ. ಯಾಕೆಂದರೆ ಪುರುಷರ ಹಾಗೂ ಮಹಿಳೆಯರ 10ಮೀ ಏರ್‌ರೈಫಲ್ ಮೆಡಲ್ ಇಂಟೆಂಟ್ ನಡೆಯಲಿದೆ. ಇದರಲ್ಲಿ ಭಾರತ ಮೊದಲ ಪದಕವನ್ನು ನಿರೀಕ್ಷಿಸಲಾಗಿದೆ.
ಭಾರತದ ಶೂಟರ್‌ಗಳ ಪೈಕಿ ದಿವ್ಯಾನ್ಶ್ ಸಿಂಗ್ ಪನ್ವಾರ್ ಹಾಗೂ ಯಶಸ್ವಿನಿ ದೇಸ್ವಾಲ್ ಈ ಇಬ್ಬರು ಪದಕದ ಮೇಲೆ ಗುರಿಯಿಡುವ ನಿರೀಕ್ಷೆಯನ್ನು ಮೂಡಿಸಿದ್ದಾರೆ. ಹೀಗಾಗಿ ಬೆಳಗ್ಗೆ 5 ಗಂಟೆಗೆ ಆರಂಭವಾಗುವ ಈ ಸ್ಪರ್ಧೆ ಸಾಕಷ್ಟು ಕುತೂಹಲ ಕೆರಳಿಸಿದೆ.
ಭಾರತೀಯ 10 ಎಂ ಏರ್ ರೈಫಲ್ ಶೂಟಿಂಗ್ನಲ್ಲಿ ಅಂಜುಮ್ ಮೌದ್ಗಿಲ್, ಅಪೂರ್ವಿ ಚಾಂಡೆಲ್, ದಿವ್ಯಾನ್ಶ್ ಸಿಂಗ್ ಪನ್ವಾರ್, ದೀಪಕ್ ಕುಮಾರ್, ಮನು ಭಾಕರ್, ಯಶಸ್ವಿನಿ ದೇಸ್ವಾಲ್, ಸೌರಭ್ ಚೌಧರಿ, ಅಭಿಷೇಕ್ ವರ್ಮಾ ಪಾಲ್ಗೊಳ್ಳಲಿದ್ದಾರೆ. ಇತ್ತ ಭಾರತ ಹಾಕಿ ತಂಡವು ನ್ಯೂಜಿಲೆಂಡ್ ವಿರುದ್ಧ ಹೋರಾಟ ಆರಂಭಿಸಲಿದೆ.
ಜುಲೈ 24 ರಂದು ನಡೆಯಲಿರುವ ಭಾರತದ ಕ್ರೀಡಾಪಟುಗಳ ವೇಳಾಪಟ್ಟಿ ಹೀಗಿದೆ:
Tokyo Olympics 2020: ಪುರುಷರ ಆರ್ಚರಿಯಲ್ಲಿ ಭಾರತಕ್ಕೆ ನಿರಾಸೆ: ದೀಪಿಕಾಗೆ 9ನೇ ಸ್ಥಾನ