Neeraj Chopra: ಗಣಿನಾಡಿನಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ: ಚಿನ್ನದ ಹುಡುಗನಿಗೆ ಜಿಂದಾಲ್ ಪ್ರಾಯೋಜಕತ್ವ

| Updated By: Vinay Bhat

Updated on: Aug 08, 2021 | 9:04 AM

Tokyo Olympics: ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ಜಿಂದಾಲ್ ಕಂಪನಿ 2017 ರಲ್ಲಿ Inspire Institute of Sports ಆರಂಭಿಸಿದೆ. ಈ ಇನ್ಸ್ ಟ್ಯೂಟ್​ನಲ್ಲಿ ದೇಶದ ವಿವಿಧ ರಾಜ್ಯದ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ.

Neeraj Chopra: ಗಣಿನಾಡಿನಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ: ಚಿನ್ನದ ಹುಡುಗನಿಗೆ ಜಿಂದಾಲ್ ಪ್ರಾಯೋಜಕತ್ವ
neeraj chopra
Follow us on

ಬಳ್ಳಾರಿ: ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ (Tokyo Olympics) ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ಚಿನ್ನದ ಹುಡುಗ ನೀರಜ್ ಜೋಪ್ರಾ ( Neeraj Chopra) ಈಗ ಈಡೀ ವಿಶ್ವದ ಗಮನ ಸೆಳೆದಿದ್ದಾರೆ. ಪ್ರತಿಯೊಬ್ಬ ಭಾರತೀಯ ಕೂಡ ನೀರಜ್ ಚೋಪ್ರಾ ಸಾಧನೆಯನ್ನ ಕೊಂಡಾಡುತ್ತಿದ್ದಾರೆ. ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರಾ ಜಾವೆಲಿನ್ ತರಬೇತಿ ಪಡೆದಿದ್ದು ಗಣಿನಾಡು ಬಳ್ಳಾರಿಯಲ್ಲಿ ಅನ್ನೋದು ಮತ್ತೊಂದು ವಿಶೇಷ.

ಹೌದು, ಹರಿಯಾಣ ಮೂಲದ ನೀರಜ್ ಚೋಪ್ರಾ ಜಿಂದಾಲ್ ಕಂಪನಿಯಲ್ಲಿರುವ Inspire Institute of Sports ನಲ್ಲಿ ತರಬೇತಿ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲು ಬಳಿಯ ಜಿಂದಾಲ್ ಕಂಪನಿ 2017 ರಲ್ಲಿ Inspire Institute of Sports ಆರಂಭಿಸಿದೆ. ಈ ಇನ್ಸ್ ಟ್ಯೂಟ್​ನಲ್ಲಿ ದೇಶದ ವಿವಿಧ ರಾಜ್ಯದ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಒಲಿಂಪಿಕ್ಸ್​ನಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಈ ಇನ್ಸ್ ಟ್ಯೂಟ್​ನಲ್ಲಿ ತರಬೇತಿ ನೀಡಲಾಗುತ್ತಿದೆ. ದೇಶ-ವಿದೇಶಗಳ ತರಬೇತಿದಾರರು ಇಲ್ಲಿನ ಕ್ರೀಡಾಪಟುಗಳಿಗೆ ತರಬೇತಿ ನೀಡುತ್ತಿದ್ದಾರೆ. ಈಗ ಇದೇ ಇನ್ಸ್ ಟ್ಯೂಟ್ ನಲ್ಲಿಯೇ ಚಿನ್ನದ ಹುಡುಗ ನೀರಜ್ ಚೋಪ್ರಾ ಕೂಡ ಜಾವೆಲಿನ್ ಥ್ರೋ ತರಬೇತಿ ಪಡೆದಿದ್ದಾರೆ.

ಹರಿಯಾಣದ ಪಾನಿಪತ್​ನ ಖಾಂದ್ರ ಗ್ರಾಮದ 23 ವರ್ಷದ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ತರಬೇತಿಗಾಗಿ 2017 ರಲ್ಲಿ ಬಳ್ಳಾರಿ ಜಿಲ್ಲೆ ಜಿಂದಾಲ್ ಕಂಪನಿಯಲ್ಲಿರುವ inspire institute of sports ಗೆ ಸೇರಿಕೊಂಡಿದ್ದರು. 2017 ರಿಂದ 2020 ರವರೆಗೆ ಕೂಡ ನೀರಜ್ ಚೋಪ್ರಾ ಇಲ್ಲಿಯೇ ತರಬೇತಿ ಪಡೆದಿದ್ದಾರೆ. ಜೊತೆಗೆ ದೇಶದ ವಿವಿಧ ಕಡೆ ನಡೆದ ಜಾವೆಲಿನ್ ಥ್ರೋ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಜಿಂದಾಲ್ ಕಂಪನಿಯ ಪ್ರಯೋಜಕತ್ವದಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ ಪಟಿಯಾಲದಲ್ಲಿರುವ ಸ್ಪೋರ್ಟ್ ಆಥಾರಿಟಿ ಆಫ್ ಇಂಡಿಯಾ ದಲ್ಲಿ ಕೂಡ ತರಬೇತಿ ಪಡೆದಿದ್ದಾರೆ. ಅಲ್ಲದೇ ಜಿಂದಾಲ್ ಕಂಪನಿಯ ಪ್ರಯೋಜಕತ್ವದಲ್ಲಿ ಯುರೋಪ್​ನಲ್ಲಿ ಕೂಡ ಕೆಲದಿನಗಳ ಕಾಲ ಅಭ್ಯಾಸ ಮಾಡಿದ್ದಾರೆ.

ಇನ್ನೂ ಜಿಂದಾಲ್ ಕಂಪನಿಯ  inspire institute of sports ನಲ್ಲಿ ತರಬೇತಿ ಪಡೆಯುತ್ತಿದ್ದ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ನಲ್ಲಿ ನಿರಂತರ ಅಭ್ಯಾಸ ಮಾಡುತ್ತಿದ್ದರು. ಮೈದಾನದಲ್ಲಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ವೇಳೆ ನಿರಂತರವಾಗಿ ಅಭ್ಯಾಸ ಮಾಡಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲಲೇಬೇಕು ಅಂತಾ ಕನಸು ಕಂಡಿದ್ದರಂತೆ. ಬೆಳಿಗ್ಗೆ 8 ಗಂಟೆಯಿಂದ ಬೆಳಿಗ್ಗೆ 10:30 ರವರೆಗೆ ಮೈದಾನದಲ್ಲಿ ಜಾವೆಲಿನ್ ಥ್ರೋ ಅಭ್ಯಾಸ ಮಾಡುತ್ತಿದ್ದರು. ಇದಾದ ಬಳಿಕ ಬೆಳಿಗ್ಗೆ 10:30 ರಿಂದ 11:30 ರವರೆಗೆ ಫಿಜಿಯೋಥೆರಪಿ ಮಾಡಿಸಿಕೊಳ್ಳುತ್ತಿದ್ದರು. ಮಧ್ಯಾಹ್ನ ವಿಶಾಂತ್ರಿಯ ಬಳಿಕ ಮತ್ತೆ ಸಂಜೆಯವರೆಗೂ ಮೈದಾನದಲ್ಲಿಯೇ ನಿರಂತರವಾಗಿ ನೀರಜ್ ಚೋಪ್ರಾ ಪ್ರ್ಯಾಕ್ಟೀಸ್​ನಲ್ಲಿ ತೊಡಗಿಕೊಳ್ಳುತ್ತಿದ್ದರು. inspire institute of sports ಜಿಂದಾಲ್ ತರಬೇತಿ ಪಡೆಯುವ ವೇಳೆ ಫ್ರಾನ್ಸ್ ಮೂಲದ ಆಂಥೋನಿ ತರಬೇತಿ ನೀಡುತ್ತಿದ್ದರಂತೆ.

ಜಿಂದಾಲ್ inspire institute of sports ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಂಬಂಧ 170 ಕ್ಕೂ ದೇಶದ ವಿವಿಧ ರಾಜ್ಯಗಳ ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಇದೇ ಇನ್ಸ್ ಟ್ಯೂಟ್ ನಲ್ಲಿ ತರಬೇತಿ ಪಡೆದ ನೀರಜ್ ಚೋಪ್ರಾ ಈಗ ಜಾವೆಲಿನ್ ಥ್ರೋ ನಲ್ಲಿ ಚಿನ್ನದ ಪದ ಗೆದ್ದಿದ್ದಕ್ಕೆ ಇನ್ಸ್ ಟ್ಯೂಟ್ ನಲ್ಲಿ ಸಂಭ್ರಮ ಮನೆ ಮಾಡಿದೆ.

ವರದಿ :  ಬಸವರಾಜ ಹರನಹಳ್ಳಿ

Tokyo Olympics 2020 Closing Ceremony: ಟೋಕಿಯೋ ಒಲಿಂಪಿಕ್ಸ್ ಮಹಾಕೂಟಕ್ಕೆ ಇಂದು ತೆರೆ: ಎಷ್ಟು ಗಂಟೆಗೆ?, ಹೇಗೆ ಲೈವ್ ವೀಕ್ಷಿಸುವುದು?