Tokyo Olympics 2020 Closing Ceremony: ಟೋಕಿಯೋ ಒಲಿಂಪಿಕ್ಸ್ ಮಹಾಕೂಟಕ್ಕೆ ಇಂದು ತೆರೆ: ಎಷ್ಟು ಗಂಟೆಗೆ?, ಹೇಗೆ ಲೈವ್ ವೀಕ್ಷಿಸುವುದು?

Tokyo Olympics 2020: ಒಟ್ಟಾರೆಯಾಗಿ 7 ಪದಕಗಳೊಂದಿಗೆ ಭಾರತ ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ 47ನೇ ಸ್ಥಾನ ಪಡೆದುಕೊಂಡಿದೆ. ಅತಿ ಹೆಚ್ಚು ಚಿನ್ನ ಗೆದ್ದ ಸಾಲಿನಲ್ಲಿ ಚೀನಾ (38 ಚಿನ್ನ) ಮೊದಲ ಸ್ಥಾನದಲ್ಲಿದ್ದರೆ, ಅತಿ ಹೆಚ್ಚು ಪದಕ ಗೆದ್ದ ಸಾಲಿನಲ್ಲಿ ಅಮೆರಿಕಾ (108 ಪದಕ) ಟಾಪ್ ಒನ್​ನಲ್ಲಿದೆ.

Tokyo Olympics 2020 Closing Ceremony: ಟೋಕಿಯೋ ಒಲಿಂಪಿಕ್ಸ್ ಮಹಾಕೂಟಕ್ಕೆ ಇಂದು ತೆರೆ: ಎಷ್ಟು ಗಂಟೆಗೆ?, ಹೇಗೆ ಲೈವ್ ವೀಕ್ಷಿಸುವುದು?
Tokyo Olympics 2020
Follow us
TV9 Web
| Updated By: Vinay Bhat

Updated on: Aug 08, 2021 | 8:08 AM

ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2020 ಕ್ಕೆ ಇಂದು ವರ್ಣರಂಜಿತ ತೆರೆ ಬೀಳಲಿದೆ. ಈ ಮೂಲಕ 15 ದಿನಗಳ ಕ್ರೀಡಾಹಬ್ಬ ಇಂದು ಮುಕ್ತಾಯಗೊಳ್ಳಲಿದೆ. ಕೊರೋನಾ ವೈರಸ್ ಕಾರಣದಿಂದಾಗಿ ಹೆಚ್ಚಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವುದು ಅನುಮಾನ. ಬದಲು ಬೆಳಕಿನ ಚಿತ್ತಾರದ ಸಿಡಿಮದ್ದು ಪ್ರದರ್ಶನ ಮಾಡುವ ಮೂಲಕ ಕ್ರೀಡಾ ಉತ್ಸವ ಒಲಿಂಪಿಕ್ಸ್​​ಗೆ ವಿದ್ಯುಕ್ತ ತೆರೆ ಬೀಳಲಿದೆ.

ಜಗತ್ತಿನ 210 ದೇಶಗಳಿಂದ 11 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಬಾರಿಯ ಒಲಿಂಪಿಕ್​ನಲ್ಲಿ ಭಾಗವಹಿಸಿದ್ದರು. ಅದರಲ್ಲೂ ಭಾರತದಿಂದ 228 ಸದಸ್ಯರ ತಂಡ ಪಾಲ್ಗೊಂಡಿತ್ತು. ಇದರಲ್ಲಿ 22 ರಾಜ್ಯಗಳ 127 ಕ್ರೀಡಾಪಟುಗಳು ವಿವಿಧ ಕ್ರೀಡೆಯಲ್ಲಿದ್ದರು. ಭಾರತಕ್ಕೆ ಈ ಒಲಿಂಪಿಕ್ಸ್ ತುಂಬಾನೆ ವಿಶೇಷವಾಗಿದೆ. ಯಾಕಂದ್ರೆ ಒಲಿಂಪಿಕ್ ವೊಂದರಲ್ಲಿ ಒಟ್ಟು 7 ಪದಕಗಳನ್ನು ಜಯಿಸಿ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತವು ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿದೆ.

ಭಾರತವು 2012ರ ಲಂಡನ್ ಒಲಿಂಪಿಕ್ಸ್ ಪದಕದ ಸಾಧನೆ (6 ಪದಕ)ಯನ್ನು ಈ ಬಾರಿ ಮೀರಿ ನಿಂತಿದೆ. ಭಾರತ ಟೋಕಿಯೋ ಒಲಿಂಪಿಕ್ಸ್‌ನಲ್ಲಿ 1 ಚಿನ್ನ, 2 ಬೆಳ್ಳಿ ಹಾಗೂ 4 ಕಂಚಿನ ಪದಕವನ್ನು ಜಯಿಸಿದೆ. ವೇಟ್ ಲಿಫ್ಟರ್ ಮೀರಾಬಾಯಿ ಚಾನು ಭಾರತದ ಪದಕದ ಖಾತೆ ತೆರೆದಿದ್ದರು. ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧೂ ಕಂಚಿನ ಪದಕ ತನ್ನದಾಗಿಸಿಕೊಂಡರು.

ಕುಸ್ತಿಪಟು ರವಿ ಕುಮಾರ ದಹಿಯಾ ನಿರೀಕ್ಷೆಗೂ ಮೀರಿ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದುಕೊಂಡರು. ನಿರೀಕ್ಷೆ ಮೂಡಿಸಿದ್ದ ಬಜರಂಗ್ ಪುನಿಯಾ ಹಾಗೂ ವಿನೇಶ್ ಫೋಗಟ್ ಪೈಕಿ ಪುನಿಯಾ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಪುರುಷರ ತಂಡ ಕಂಚಿನ ಪದಕ ಪಂದ್ಯದಲ್ಲಿ ಜರ್ಮನಿಯನ್ನು ಸೋಲಿಸಿ 41 ವರ್ಷಗಳ ಬಳಿಕ ದೇಶಕ್ಕೆ ಮೊದಲ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟಿತ್ತು.

ಒಟ್ಟಾರೆಯಾಗಿ 7 ಪದಕಗಳೊಂದಿಗೆ ಭಾರತ ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ 47ನೇ ಸ್ಥಾನ ಪಡೆದುಕೊಂಡಿದೆ. ಅತಿ ಹೆಚ್ಚು ಚಿನ್ನ ಗೆದ್ದ ಸಾಲಿನಲ್ಲಿ ಚೀನಾ (38 ಚಿನ್ನ) ಮೊದಲ ಸ್ಥಾನದಲ್ಲಿದ್ದರೆ, ಅತಿ ಹೆಚ್ಚು ಪದಕ ಗೆದ್ದ ಸಾಲಿನಲ್ಲಿ ಅಮೆರಿಕಾ (108 ಪದಕ) ಟಾಪ್ ಒನ್​ನಲ್ಲಿದೆ.

ಇನ್ನೂ ಇಂದು ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್​ನ ಸಮಾರೋಪ ಸಮಾರಂಭ ಭಾರತದ ಕಾಲಮಾನದ ಪ್ರಕಾರ ಸಂಜೆ 4:30ಕ್ಕೆ ಆರಂಭವಾಗಲಿದೆ. ಸೋನಿ ಸ್ಫೋರ್ಟ್​ ನೆಟ್​ವರ್ಕ್​, ಅಥವಾ ಸೋನಿ ಲೈವ್ ಆ್ಯಪ್​ನಲ್ಲಿ ಲೈವ್ ವೀಕ್ಷಿಸಬಹುದು.

ಮುಂದಿನ 2024ರ ಒಲಿಂಪಿಕ್ಸ್​ ಪ್ಯಾರಿಸ್​ನಲ್ಲಿ ನಡೆಯಲಿದೆ. ಇದಕ್ಕಾಗಿ ತಮ್ಮ ಭವ್ಯ ಯೋಜನೆಗಳನ್ನು ಪ್ಯಾರಿಸ್ ಈಗಾಗಲೇ ಶುರುಮಾಡಿದೆ. ಟೋಕಿಯೊದಿಂದ ಫ್ರಾನ್ಸ್ ರಾಜಧಾನಿ ಪ್ಯಾರಿಸ್​ಗೆ ಒಲಿಂಪಿಕ್ಸ್ ಹಸ್ತಾಂತರದ ಭಾಗವಾಗಿ, ಐಫೆಲ್ ಟವರ್ ನಿಂದ ಬೃಹತ್ ಧ್ವಜವನ್ನು ಬಿಡುಗಡೆ ಮಾಡುವುದಾಗಿ ಪ್ಯಾರಿಸ್ -2024 ಒಲಿಂಪಿಕ್ಸ್ ಸಂಘಟನಾ ಸಮಿತಿ ತಿಳಿಸಿದೆ.

Tokyo Olympics: ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಬಿಸಿಸಿಐಯಿಂದ ಬಂಪರ್ ಆಫರ್

(Tokyo Olympics 2020 Closing Ceremony Here is When And Where To Watch It Live)