Tokyo Olympics: ಬಂಗಾರ ಗೆದ್ದ ನೀರಜ್​ಗೆ ತರಬೇತಿ ನೀಡಿದ್ದು ನಮ್ಮ ಹೆಮ್ಮೆಯ ಕನ್ನಡಿಗ ಕಾಶೀನಾಥ್ ನಾಯ್ಕ್​!

Tokyo Olympics: ನೀರಜ್ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕಾಶೀನಾಥ್ ನಾಯ್ಕ್, ಆರಂಭದಲ್ಲಿ ನೀರಜ್ 70 ಮೀಟರ್​ ಥ್ರೋ ಮಾಡ್ತಿದ್ದರು. ಒಳ್ಳೆಯ ಹೈಟ್​ ಇದ್ದರು ಮತ್ತು ಒಳ್ಳೆಯ ಟ್ಯಾಲೆಂಟ್​ ಹುಡುಗ ಆಗಿದ್ದರು.

Tokyo Olympics: ಬಂಗಾರ ಗೆದ್ದ ನೀರಜ್​ಗೆ ತರಬೇತಿ ನೀಡಿದ್ದು ನಮ್ಮ ಹೆಮ್ಮೆಯ ಕನ್ನಡಿಗ ಕಾಶೀನಾಥ್ ನಾಯ್ಕ್​!
ಕಾಶೀನಾಥ್ ನಾಯ್ಕ್, ನೀರಜ್ ಚೋಪ್ರಾ
Follow us
TV9 Web
| Updated By: guruganesh bhat

Updated on:Aug 07, 2021 | 11:58 PM

ಒಲಿಂಪಿಕ್ಸ್ ( Olympics) ಕ್ರೀಡಾಕೂಟ ಆರಂಭವಾಗಿ 124 ವರ್ಷಗಳು ಕಳೆದಿವೆ. ಕಳೆದ ಒಂದು ಶತಮಾನದಿಂದಲೂ ಒಲಿಂಪಿಕ್ಸ್​ನಲ್ಲಿ ಭಾರತೀಯ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿದ್ದರೂ, ಪ್ರಶಸ್ತಿ ಪಟ್ಟಿಯಲ್ಲಿ ಮಹತ್ವದ ಸಾಧನೆ ಮೆರೆಯಲು ಸಾಧ್ಯವಾಗಿರಲಿಲ್ಲ. ಅದರಲ್ಲೂ ವೈಯುಕ್ತಿಕ ವಿಭಾಗದಲ್ಲಿ ಇದುವೆರೆಗೆ ಭಾರತ ಗೆದ್ದ ಚಿನ್ನದ ಪದಕ ಸಂಖ್ಯೆ ಕೇವಲ ಒಂದು ಆಗಿತ್ತು. ಆದರೆ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಥ್ರೋ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಮತ್ತೊಮ್ಮೆ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. ಈ ಪದಕದೊಂದಿಗೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಭಾರತದ ಪದಕದ ಸಂಖ್ಯೆ 7ಕ್ಕೇರಿದೆ. ಇದರೊಂದಿಗೆ ಭಾರತ ಒಲಿಂಪಿಕ್ಸ್​ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ನೀಡಿದಂತಾಗಿದೆ.

ನೀರಜ್ ಚೋಪ್ರಾ ಅವರ ಈ ಸಾದನೆಯಲ್ಲಿ ಕನ್ನಡಿಗ ಪಾಲು ಇದೆ ಎಂಬುದು ಕನ್ನಡಿಗರಿಗೆ ಇನ್ನೊಂದು ಹೆಮ್ಮೆಯ ಸಂಗತಿಯಾಗಿದೆ. ಸೈನ್ಯದಲ್ಲಿ ಸುಭೇದಾರ್ ಆಗಿ ಹಾಗೂ 2013 ರಿಂದ 19 ರವೆಗೆ ಇಂಡಿಯನ್ ಟೀಂ ಜಾವಲಿನ್​ ಥ್ರೋ ಕೋಚರ್ ಆಗಿ ಕಾರ್ಯನಿರ್ವಹಿಸಿದ್ದ ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬೆಂಗಳೆ ಗ್ರಾಮದ ಕಾಶೀನಾಥ್ ನಾಯ್ಕ್​, ನೀರಜ್​ಗೆ ಜಾವಲೀನ್ ಎಸೆತದ ಕೌಶಲ್ಯಗಳನ್ನು ಹೇಳಿಕೊಟ್ಟಿದ್ದರು. 2015ನಲ್ಲಿ ಕಾಶೀನಾಥ್ ನಾಯ್ಕ್ ಅಡಿಯಲ್ಲಿ ತರಬೇತಿಗೆ ನೀರಜ್​ ಚೋಪ್ರಾ ಸೇರಿಕೊಂಡಿದ್ದರು

ಒಳ್ಳೆಯ ಟ್ಯಾಲೆಂಟ್​ ಹುಡುಗ ಆಗಿದ್ದರು ನೀರಜ್ ಸಾಧನೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಕಾಶೀನಾಥ್ ನಾಯ್ಕ್, ಆರಂಭದಲ್ಲಿ ನೀರಜ್ 70 ಮೀಟರ್​ ಥ್ರೋ ಮಾಡ್ತಿದ್ದರು. ಒಳ್ಳೆಯ ಹೈಟ್​ ಇದ್ದರು ಮತ್ತು ಒಳ್ಳೆಯ ಟ್ಯಾಲೆಂಟ್​ ಹುಡುಗ ಆಗಿದ್ದರು. ಮಂಗಳೂರಲ್ಲಿ ನ್ಯಾಷಿನಲ್​ ಕಾಂಪಿಟೇಷನಲ್ಲಿ ನನ್ನ ಹತ್ತಿರ ದೇವೆಂದ್ರ ಸಿಂಗ್​, ನೀರಜ್​ ತರಬೇತಿ ಪಡೆದಿದ್ರು. ಪೊಲ್ಯಾಂಡ್​ನಲ್ಲಿ ಜ್ಯೂನಿಯರ್​​ ವಿಶ್ವ ಚಾಂಪಿಯನ್​ ಸ್ಪರ್ಧೆ ಇತ್ತು. ಅದರಲ್ಲಿ ನೀರಜ್ 86.48 ಥ್ರೋ ಮಾಡಿ ಜ್ಯೂನಿಯರ್​ ವಿಶ್ವ ದಾಖಲೆ ಮಾಡಿದ್ದರು ಎಂಬುದನ್ನು ಹೇಳಿಕೊಂಡಿದ್ದಾರೆ. ಕನ್ನಡಿಗ ಕಾಶೀನಾಥ್ ನಾಯ್ಕ್ 2010 ಕಾಮನ್​ವೆಲ್ತ್​ ಗೇಮ್ಸ್​ ಮೆಡಲಿಸ್ಟ್ ಮತ್ತು ಏಷಿಯನ್​ ಚಾಂಪಿಯನ್​ ಮೆಡಲಿಸ್ಟ್ ಆಗಿದ್ದಾರೆ.

Published On - 11:43 pm, Sat, 7 August 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್