ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಇತಿಹಾಸ ಸೃಷ್ಟಿಸಿದ್ದಾರೆ. ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಅವರು ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದಾರೆ. ನೀರಜ್ ಚೋಪ್ರಾ 87.58 ಮೀಟರ್ ದೂರ ಎಸೆದು ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಸುಮಾರು 100 ವರ್ಷಗಳ ನಂತರ ಮೊದಲ ಪದಕ ನೀಡಿದರು. ಟೋಕಿಯೊದಲ್ಲಿ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ. ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ ಭಾರೀ ಬಡ್ತಿ ಪಡೆದಿದೆ. ನೀರಜ್ ಚೋಪ್ರಾ ಅವರ ಚಿನ್ನದ ಪದಕದೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 47ನೇ ಸ್ಥಾನಕ್ಕೇರಿದೆ. ಇದುವರೆಗೆ ಭಾರತ ಒಂದು ಚಿನ್ನ, 2 ಬೆಳ್ಳಿ ಹಾಗೂ 4 ಕಂಚು ಗೆದ್ದಿದ್ದೆ. ಒಟ್ಟಾರೆಯಾಗಿ ಭಾರತ 7 ಪದಕಗಳನ್ನು ತನ್ನ ಬತ್ತಳಿಕೆಗೆ ಹಾಕಿಕೊಂಡಿದೆ.
ಇನ್ನುಳಿದಂತೆ ಪದಕ ಪಟ್ಟಿಯಲ್ಲಿ ಚಿನ್ನ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಇದುವರೆಗು ಚೀನಾ 87 ಪದಕಗಳನ್ನು ಗೆದ್ದಿದ್ದು, ಇದರಲ್ಲಿ 38 ಚಿನ್ನ, 31 ಬೆಳ್ಳಿ ಹಾಗೂ 18 ಕಂಚಿನ ಪದಕವನ್ನು ಗೆದ್ದಿದೆ. ನಂತರದ ಸ್ಥಾನದಲ್ಲಿ ಅಮೆರಿಕ ಇದ್ದು ಒಟ್ಟು 108 ಪದಕಗಳನ್ನು ಗೆದ್ದಿದೆ. ಇದರಲ್ಲಿ 36 ಚಿನ್ನ, 39 ಬೆಳ್ಳಿ ಹಾಗೂ 33 ಕಂಚಿನ ಪದಕವನ್ನು ಗೆದ್ದಿದೆ. ಮೂರನೇ ಸ್ಥಾನದಲ್ಲಿ ಜಪಾನ್ ಇದ್ದು 56 ಪದಕಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಇದರಲ್ಲಿ 27 ಚಿನ್ನ, 12 ಬೆಳ್ಳಿ ಹಾಗೂ 17 ಕಂಚಿನ ಪದಕವನ್ನು ಗೆದ್ದಿದೆ.
ನೀರಜ್ ಸಾಧನೆ ಹೀಗಿದೆ
ಬಹುಶಃ ಫೈನಲ್‌ಗೆ ಅರ್ಹತೆ ಪಡೆದ ದಿನವೇ ನೀರಜ್ ಅವರ ಪದಕವನ್ನು ದೃಢಪಡಿಸಿದರು. ಟೋಕಿಯೊ ಒಲಿಂಪಿಕ್ಸ್‌ನ ಅರ್ಹತೆಗಾಗಿ 83.50 ಮೀಟರ್‌ಗಳ ಅಂತರವನ್ನು ಒಳಗೊಂಡಿದೆ. ಮೊದಲ ಪ್ರಯತ್ನದಲ್ಲೇ ನೀರಜ್ 86.65 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಅರ್ಹತೆ ಪಡೆದರು.
2019 ರಲ್ಲಿ, ಭುಜದ ಗಾಯದಿಂದಾಗಿ ನೀರಜ್ ತನ್ನ ಆಟದಿಂದ 6 ತಿಂಗಳು ದೂರ ಉಳಿಯಬೇಕಾಯಿತು. ಅವರು ಯಾವುದೇ ಸ್ಪರ್ಧೆಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ ಅವರು ಆಟಕ್ಕೆ ಹಿಂದಿರುಗಿ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಪಡೆದರು. ನೀರಜ್ ದಕ್ಷಿಣ ಆಫ್ರಿಕಾದಲ್ಲಿ ನಡೆದ ಸೆಂಟ್ರಲ್ ನಾರ್ತ್ ಈಸ್ಟ್ ಮೀಟಿಂಗ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಗೆಲ್ಲುವ ಮೂಲಕ 2020 ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು.
ನೀರಜ್ ತನ್ನ ಮೊದಲ ಒಲಿಂಪಿಕ್ಸ್‌ನಲ್ಲಿಯೇ ಇತಿಹಾಸ ಸೃಷ್ಟಿಸಿದ್ದಾರೆ. 2018 ರಲ್ಲಿ ಇಂಡೋನೇಷ್ಯಾದ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ನೀರಜ್ 88.06 ಮೀಟರ್ ಎಸೆದು ಚಿನ್ನದ ಪದಕ ಗೆದ್ದರು. ಅದೇ ವರ್ಷ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ ನೀರಜ್ 88.07 ಮೀ ಜಾವೆಲಿನ್ ಎಸೆದು ತನ್ನದೇ ದಾಖಲೆಯನ್ನು ಮುರಿದರು.