Tokyo Olympics: ಭಾರತ ಭರ್ಜರಿ ಪ್ರದರ್ಶನ: ಪಿವಿ ಸಿಂಧೂ ಬಳಿಕ ಮೇರಿ ಕೋಮ್, ಮನಿಕಾಗೆ ಗೆಲುವು

|

Updated on: Jul 25, 2021 | 2:24 PM

Mary Kom: ಭಾರತದ ಖ್ಯಾತ ಬಾಕ್ಸಿಂಗ್ ತಾರೆ ಮೇರಿ ಕೋಮ್ ಕೂಡ ಡೊಮಿನಿಕನ್ ರಿಪಬ್ಲಿಕ್ ದೇಶದ ಮಿಗುಯೆಲಿನ ಹೆರ್ನಾಂಡೆಜ್ ವಿರುದ್ಧ 4-1 ಅಂತರದಿಂದ ಗೆದ್ದು ರೌಂಡ್ 16ಕ್ಕೆ ತೇರ್ಗಡೆಗೊಂಡಿದ್ದಾರೆ.

Tokyo Olympics: ಭಾರತ ಭರ್ಜರಿ ಪ್ರದರ್ಶನ: ಪಿವಿ ಸಿಂಧೂ ಬಳಿಕ ಮೇರಿ ಕೋಮ್, ಮನಿಕಾಗೆ ಗೆಲುವು
ಮೇರಿ ಕೋಮ್
Follow us on

ಟೋಕಿಯೋ ಒಲಿಂಪಿಕ್ಸ್ (Tokyo Olympics) ನಲ್ಲಿ ರವಿವಾರ ಭಾರತ ಉತ್ತಮ ಪ್ರದರ್ಶನ ತೋರುತ್ತಿದೆ. ಬೆಳಗಿನ ಜಾವ ಪಿವಿ ಸಿಂಧೂ (PV Sindhu) ಇಸ್ರೇಲಿನ ಸಿನಿಯಾ ಪೊಲಿಕಾರ್ಪೋವಾ ವಿರುದ್ಧ 21-7, 21-10 ಅಂಕಗಳ ಅಂತರದಿಂದ ಭಾರೀ ದೊಡ್ಡ ಜಯ ಸಾಧಿಸಿದರು. ಸದ್ಯ ಭಾರತದ ಖ್ಯಾತ ಬಾಕ್ಸಿಂಗ್ ತಾರೆ ಮೇರಿ ಕೋಮ್ (Mary Kom) ಮತ್ತು ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಬಾತ್ರಾ (Manika Batra) ಭರ್ಜರಿ ಜಯ ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದಿದ್ದಾರೆ.

ಭಾರತೀಯರ ನಿರೀಕ್ಷೆಯನ್ನು ಹುಸಿ ಮಾಡದ ಮೇರಿ ಕೋಮ್ ಡೊಮಿನಿಕನ್ ರಿಪಬ್ಲಿಕ್ ದೇಶದ ಮಿಗುಯೆಲಿನ ಹೆರ್ನಾಂಡೆಜ್ ವಿರುದ್ಧ 4-1 ಅಂತರದಿಂದ ಗೆದ್ದು ರೌಂಡ್ 16ಕ್ಕೆ ತೇರ್ಗಡೆಗೊಂಡರು. ಮೇರಿ ಅವರ ಮುಂದಿನ ಪಂದ್ಯ ಜುಲೈ 29 ರಂದು ನಡೆಯಲಿದ್ದು ಕೊಲಂಬಿಯಾದ ಇಂಗ್ರಿಟ್ ಲೊರೆನಾ ವಿರುದ್ಧ ಹೋರಾಡಲಿದ್ದಾರೆ.

 

ಇತ್ತ ಟೇಬಲ್ ಟೆನಿಸ್ ಮಹಿಳಾ ಸಿಂಗಲ್ಸ್ ವಿಭಾಗದ 2ನೇ ಸುತ್ತಿನಲ್ಲಿ ಮಣಿಕಾ ಬಾತ್ರಾ 4-11, 4-11, 11-7, 12-10, 8-11, 11-5, 11-7 ಅಂತರದಿಂದ ಉಕ್ರೇನ್ನ ಮಾರ್ಗರಿಟಾ ಪೆಸೊಟ್ಕಾ ಅವರನ್ನು ಸೋಲಿಸಿ ಮುಂದಿನ ಸುತ್ತಿಗೆ ಲಗ್ಗೆಯಿಟ್ಟರು.

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಮಣಿಕಾ ಆರಂಭದಲ್ಲಿ 0-2 ಹಿನ್ನಡೆ ಅನುಭವಿಸಿದ್ದರು. ಬಳಿಕ ಚೇತರಿಸಿಕೊಂಡ ಬಾತ್ರಾ 57 ನಿಮಿಷಗಳಲ್ಲಿ ಸ್ಪರ್ಧೆಯನ್ನು 4-3 ಅಂತರದಿಂದ ಗೆದ್ದುಕೊಂಡರು. ಬಾತ್ರಾ ಮೂರನೇ ಸುತ್ತಿಗೆ ತೇರ್ಗಡೆಗೊಂಡಿದ್ದಾರೆ.

ಇನ್ನೂ ಟೇಬಲ್ ಟೆನಿಸ್ ಪುರುಷರ ವಿಭಾಗದಲ್ಲಿ ಸಥಿಯಾನ್ ಜ್ಞಾನಶೇಖರನ್ ಸೋಲು ಕಂಡಿದ್ದಾರೆ. ಹಾಂಕಾಂಗ್‌ನ ಲಾಮ್ ಸಿಯು ಹಾಂಗ್ ವಿರುದ್ಧ ಏಳು ಸುತ್ತುಗಳಲ್ಲಿ 3-4 ಅಂತರದಿಂದ ಶರಣಾದರು. 37ನೇ ಶ್ರೇಯಾಂಕದ ಸಥಿಯಾನ್ ಹಾಂಕಾಂಗ್‌ನ 95ನೇ ಶ್ರೇಯಾಂಕದ ಲಾಮ್ ಸಿಯು ಹಾಂಗ್ ವಿರುದ್ಧ ಉತ್ತಮ ಆರಂಭದ ಹೊರತಾಗಿಯೂ ಗೆಲುವು ಪಡೆಯಲು ವಿಫಲರಾದರು.

Tokyo Olympics: ಬೆಳ್ಳಿ ಹುಡುಗಿ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಫ್ರೀ ಪಿಜ್ಜಾ

The Hundred: 43 ಬಾಲ್​, ಅಜೇಯ 92 ರನ್: ಜೆಮಿಮಾ ರೊಡ್ರಿಗಸ್ ಏಕಾಂಗಿ ಹೋರಾಟ: ರೋಚಕ ಜಯ

(Mary Kom beats Miguelina Garcia in Tokyo Olympics opener, moves to last-16)

Published On - 1:58 pm, Sun, 25 July 21