Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರನೇ ಪದಕ; ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ವಿನೋದ್ ಕುಮಾರ್

| Updated By: ಪೃಥ್ವಿಶಂಕರ

Updated on: Aug 29, 2021 | 6:49 PM

Tokyo Paralympics: ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ವಿನೋದ್ ಕುಮಾರ್ ಭಾನುವಾರ ಅತ್ಯುತ್ತಮ ಪ್ರದರ್ಶನ ನೀಡಿ ದೇಶಕ್ಕಾಗಿ ಕಂಚಿನ ಪದಕ ಗೆದ್ದಿದ್ದಾರೆ. ವಿನೋದ್ ಕುಮಾರ್ ಡಿಸ್ಕಸ್ ಥ್ರೋನ ಎಫ್ 52 ವಿಭಾಗದಲ್ಲಿ 19.98 ಮೀಟರ್ ಎಸೆತದು ಏಷ್ಯನ್ ದಾಖಲೆ ಬರೆದರು.

Tokyo Paralympics: ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತಕ್ಕೆ ಮೂರನೇ ಪದಕ; ಡಿಸ್ಕಸ್ ಥ್ರೋನಲ್ಲಿ ಕಂಚು ಗೆದ್ದ ವಿನೋದ್ ಕುಮಾರ್
ವಿನೋದ್ ಕುಮಾರ್
Follow us on

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ವಿನೋದ್ ಕುಮಾರ್ ಭಾನುವಾರ ಅತ್ಯುತ್ತಮ ಪ್ರದರ್ಶನ ನೀಡಿ ದೇಶಕ್ಕಾಗಿ ಕಂಚಿನ ಪದಕ ಗೆದ್ದಿದ್ದಾರೆ. ವಿನೋದ್ ಕುಮಾರ್ ಡಿಸ್ಕಸ್ ಥ್ರೋನ ಎಫ್ 52 ವಿಭಾಗದಲ್ಲಿ 19.98 ಮೀಟರ್ ಎಸೆದು ಏಷ್ಯನ್ ದಾಖಲೆ ಬರೆದರು. ವಿನೋದ್ ತನ್ನ ಆರು ಪ್ರಯತ್ನಗಳಲ್ಲಿ 17.46 ಮೀಟರ್ ಎಸೆತದಿಂದ ಆರಂಭಿಸಿದರು. ಇದರ ನಂತರ, ಅವರು 18.32 ಮೀಟರ್, 17.80 ಮೀಟರ್, 19.20 ಮೀಟರ್, 19.91 ಮೀಟರ್, 19.81 ಮೀಟರ್ ಎಸೆದರು. ಅವರ ಐದನೇ ಎಸೆತವನ್ನು 19.91 ಮೀಟರ್‌ಗಳ ಅತ್ಯುತ್ತಮ ಎಸೆತವೆಂದು ಪರಿಗಣಿಸಲಾಗಿದೆ. ಈ ಅಂತರದಿಂದ ವಿನೋದ್ ಕುಮಾರ್ ಏಷ್ಯನ್ ದಾಖಲೆ ಬರೆದರು.

ಫೈನಲ್‌ನಲ್ಲಿ ಭಾಗವಹಿಸಿದ ಎಂಟು ಆಟಗಾರರಲ್ಲಿ ಏಳು ಆಟಗಾರರು ಪ್ರಯತ್ನಿಸಿದ ನಂತರ ವಿನೋದ್ ಮೂರನೇ ಸ್ಥಾನಕ್ಕೇರಿದರು. 2016 ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಲಾಟ್ವಿಯಾದ ಅಪಿನಿಸ್ ಎಗ್ಗರ್ಸ್ ಕೊನೆಯ ಸ್ಥಾನ ಪಡೆದರು. ಆದಾಗ್ಯೂ, ಆರು ಪ್ರಯತ್ನಗಳಲ್ಲಿ ಅವರ ಅತ್ಯುತ್ತಮ ಪ್ರದರ್ಶನ 19.54. ಈ ಹಿಂದೆ ವಿನೋದ್ ಕುಮಾರ್ ಎರಡನೇ ಸ್ಥಾನದಲ್ಲಿದ್ದರು ಆದರೆ ಕ್ರೊಯೇಷಿಯಾದ ಸ್ಯಾಂಡರ್ ವೆಲಿಮಿರ್ ತನ್ನ ಐದನೇ ಪ್ರಯತ್ನದಲ್ಲಿ 19.98 ಮೀಟರ್ ಎಸೆದರು. ಹೀಗಾಗಿ ಸ್ಯಾಂಡರ್ ಹೆಸರಿಗೆ ಬೆಳ್ಳಿ ಒಲಿಯಿತು. ಪೋಲೆಂಡ್‌ನ ಕೊಸೆವಿಚ್ ಪಿಯೊಟರ್‌ 20.02 ಮೀಟರ್ ಎಸೆದು ಚಿನ್ನದ ಪದಕಕ್ಕೆ ಭಾಜನರಾದರು.

ವಿನೋದ್ ಕುಮಾರ್ ವಿಶ್ವ ಶ್ರೇಯಾಂಕದಲ್ಲಿ ಆರನೇ ಸ್ಥಾನ
ವಿನೋದ್ ಕುಮಾರ್ ಅವರ ವಿಭಾಗದಲ್ಲಿ ವಿಶ್ವದ 6 ನೇ ಸ್ಥಾನದಲ್ಲಿದ್ದಾರೆ. ಅವರು 2016 ರಲ್ಲಿ ಪ್ಯಾರಾ ಗೇಮ್ಸ್‌ಗೆ ಸೇರಿ, ಮೊದಲ ಪ್ಯಾರಾಲಿಂಪಿಕ್ಸ್‌ನಲ್ಲಿಯೇ ಪದಕ ಗೆದ್ದರು. ಈ ವರ್ಷದ ಫೆಬ್ರವರಿಯಲ್ಲಿ, ಅವರು ಫಾಜಾ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. ಅದೇ ಸಮಯದಲ್ಲಿ, 2019 ರಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಾಲ್ಕನೇ ಸ್ಥಾನ ಪಡೆದರು. ಭಾನುವಾರ ವಿನೋದ್ ಕುಮಾರ್ ಅವರ ಪದಕ ಭಾರತದ ಮೂರನೇ ಪದಕವಾಗಿದೆ. ಈ ಹಿಂದೆ ಭಾವಿನಾ ಪಟೇಲ್ ಟೇಬಲ್ ಟೆನಿಸ್​ನಲ್ಲಿ ದೇಶಕ್ಕೆ ಬೆಳ್ಳಿ ಪದಕ ನೀಡಿದ್ದರು. ಇದರ ನಂತರ ನಿಶಾದ್ ಕುಮಾರ್ ಹೈಜಂಪ್ ವಿಭಾಗದಲ್ಲಿ ದೇಶಕ್ಕಾಗಿ ಪದಕ ಗೆದ್ದರು. ವಿನೋದ್ ಕುಮಾರ್ ಪದಕದೊಂದಿಗೆ ದಿನ ಕೊನೆಗೊಂಡಿತು.

Published On - 6:30 pm, Sun, 29 August 21