MS Dhoni ಕೆಲ ಕ್ಷಣಗಳ ಕಾಲ ಎಂಎಸ್ ಧೋನಿ ಟ್ವಿಟರ್ ಖಾತೆಯಿಂದ ಮಾಯವಾಗಿದ್ದ ಬ್ಲೂ ಟಿಕ್ ಮತ್ತೆ ಬಂತು

Blue Tick: ಅಧಿಕೃತ ಟ್ವಿಟರ್ ಖಾತೆಗಿರುವ ಬ್ಲೂ ಬ್ಯಾಡ್ಜ್ ತೆಗೆದು ಹಾಕಿದ್ದರ ಬೆನ್ನಲ್ಲೇ ನೆಟ್ಟಿಗರು ಧೋನಿ ಪರ ವಾದಿಸಿದ್ದಲ್ಲದೆ ಹಲವಾರು ಮೀಮ್​​ಗಳನ್ನು ಶೇರ್ ಮಾಡಿದ್ದಾರೆ.

MS Dhoni ಕೆಲ ಕ್ಷಣಗಳ ಕಾಲ ಎಂಎಸ್ ಧೋನಿ ಟ್ವಿಟರ್ ಖಾತೆಯಿಂದ ಮಾಯವಾಗಿದ್ದ ಬ್ಲೂ ಟಿಕ್ ಮತ್ತೆ ಬಂತು
ಎಂಎಸ್ ಧೋನಿ
Edited By:

Updated on: Aug 06, 2021 | 5:34 PM

ದೆಹಲಿ: ಅಮೆರಿಕದ ಮೈಕ್ರೋ ಬ್ಲಾಗಿಂಗ್ ಮತ್ತು ಸಾಮಾಜಿಕ ಜಾಲತಾಣ ಟ್ವಿಟರ್, ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರ ಟ್ವಿಟರ್ ಖಾತೆಯಿಂದ ಕೆಲವು ಕ್ಷಣಗಳ ಕಾಲ ನೀಲಿ ಟಿಕ್ ಮಾಯವಾಗಿದ್ದು  ಮತ್ತೆ ಬಂದಿದೆ . ಧೋನಿ ಕೊನೆಯದಾಗಿ ಜನವರಿ 8, 2021 ರಂದು ಟ್ವೀಟ್ ಮಾಡಿದ್ದರು.

ಅಧಿಕೃತ ಟ್ವಿಟರ್ ಖಾತೆಗಿರುವ ಬ್ಲೂ ಬ್ಯಾಡ್ಜ್ ತೆಗೆದು ಹಾಕಿದ್ದರ ಬೆನ್ನಲ್ಲೇ ನೆಟ್ಟಿಗರು ಧೋನಿ ಪರ ವಾದಿಸಿದ್ದಲ್ಲದೆ ಹಲವಾರು ಮೀಮ್​​ಗಳನ್ನು ಶೇರ್ ಮಾಡಿದ್ದಾರೆ.


ಸಾಮಾಜಿಕ ಮಾಧ್ಯಮ ಖಾತೆ ಅಧಿಕೃತ ಎಂದು ಟ್ವಿಟರ್ ಹ್ಯಾಂಡಲ್‌ನಲ್ಲಿರುವ ನೀಲಿ ಟಿಕ್ ಸೂಚಿಸುತ್ತದೆ. ನೀಲಿ ಬ್ಯಾಡ್ಜ್ ಪಡೆಯುವುದಕ್ಕಾಗಿ ವ್ಯಕ್ತಿಯ ಖಾತೆಯು ಅಧಿಕೃತವಾಗಿರಬೇಕು, ಗಮನಾರ್ಹವಾಗಿರಬೇಕು ಮತ್ತು ಸಕ್ರಿಯವಾಗಿರಬೇಕು ಎಂದು ಟ್ವಿಟರ್ ಹೇಳುತ್ತದೆ.


ಆಗಸ್ಟ್ 15, 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ನಂತರ, ಧೋನಿ ಈಗ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಯುಎಇ ಐಪಿಎಲ್ ಸೆಪ್ಟೆಂಬರ್‌ನಲ್ಲಿ ಪುನರಾರಂಭಗೊಂಡಾಗ ಮತ್ತೆ ಆಡಲಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಉಳಿದ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. 27 ದಿನಗಳ ಅವಧಿಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ.

ಐಪಿಎಲ್ 2021 ಅನ್ನು ಪುನರಾರಂಭವಾದರೆ ಮುಂಬೈ ಇಂಡಿಯನ್ಸ್ ಸೆಪ್ಟೆಂಬರ್ 19 ರಂದು ಸಿಎಸ್‌ಕೆ ವಿರುದ್ಧ ಕಣಕ್ಕಿಳಿಯಲಿದೆ. ಲೀಗ್ ಹಂತದ ಅಂತಿಮ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ಅಕ್ಟೋಬರ್ 8 ರಂದು ನಡೆಯಲಿದೆ.

ಅಕ್ಟೋಬರ್ 10 ರಂದು 1 ನೇ ಕ್ವಾಲಿಫೈಯರ್ ದುಬೈನಲ್ಲಿ ನಡೆಯಲಿದೆ. ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಶಾರ್ಜಾದಲ್ಲಿ ಕ್ರಮವಾಗಿ ಅಕ್ಟೋಬರ್ 11 ಮತ್ತು 13 ರಂದು ನಡೆಯಲಿದ್ದು, ಈ ವರ್ಷ ಅಕ್ಟೋಬರ್ 15 ರಂದು ಐಪಿಎಲ್ 2021 ರ ಫೈನಲ್ ಪಂದ್ಯವನ್ನು ದುಬೈ ಆಯೋಜಿಸಲಿದೆ.

ಇದನ್ನೂ ಓದಿ:  MS Dhoni: ಒಲಿಂಪಿಕ್ಸ್‌ನಲ್ಲಿ ಹಾಕಿ ತಂಡದ ಐತಿಹಾಸಿಕ ಸಾಧನೆ: 7 ವರ್ಷಗಳ ನಂತರ ವೈರಲ್ ಆಯ್ತು ಧೋನಿಯ ಅದೊಂದು ಟ್ವೀಟ್

(Twitter removes blue verified badge from Cricketer MS Dhoni’s account and restored)