AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಿನ್ನೋದು ಎರಡೇ ಇಡ್ಲಿ, ಬಾರಿಸ್ತಾನೆ ಟನ್​ಗಟ್ಟಲೇ ರನ್!

ಟೀಂ ಇಂಡಿಯಾದಲ್ಲೀಗ ಮಯಾಂಕ್ ಅಗರ್ವಾಲ್ ಮೇನಿಯಾ ಶುರುವಾಗಿದೆ. ವೈಜಾಗ್ ಅಂಗಳದಲ್ಲಿ ಆಫ್ರಿಕಾ ಹರಣಿಗಳ ಜನ್ಮ ಜಲಾಡಿದ್ದ ಕನ್ನಡಿಗ ಮಯಾಂಕ್ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ರು. ವಿಶಾಖಪಟ್ಟಣದ ಪಂದ್ಯದ ಪ್ರದರ್ಶನವನ್ನೇ ಪುಣೆ ಟೆಸ್ಟ್​ನಲ್ಲೂ ಮುಂದುವರೆಸಿದ್ದ ಮಯಾಂಕ್, ಕಠಿಣ ಪಿಚ್​ನಲ್ಲೂ ಸರಾಗವಾಗಿ ರನ್ ಬಾರಿಸಿ, ಭರ್ಜರಿ ಶತಕ ಸಿಡಿಸಿ ಮೆರೆದಾಡಿದ್ರು. ಅಗರ್ವಾಲ್ ರನ್ ಸುನಾಮಿಯ ಅಬ್ಬರ ಕಂಡು, ಆಫ್ರಿಕನ್ನರು ಇವನ್ಯಾರಪ್ಪ. ಆಡಿದ ಮೂರನೇ ಪಂದ್ಯದಲ್ಲೇ ಈ ಪಾಟಿ ಆಡ್ತಾನಲ್ಲಪ್ಪಾ ಅಂತಾ ಅಕ್ಷರಷಃ ಥಂಡಾ ಹೊಡೆದಿದ್ರು. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ […]

ತಿನ್ನೋದು ಎರಡೇ ಇಡ್ಲಿ, ಬಾರಿಸ್ತಾನೆ ಟನ್​ಗಟ್ಟಲೇ ರನ್!
ಸಾಧು ಶ್ರೀನಾಥ್​
|

Updated on:Oct 17, 2019 | 11:41 AM

Share

ಟೀಂ ಇಂಡಿಯಾದಲ್ಲೀಗ ಮಯಾಂಕ್ ಅಗರ್ವಾಲ್ ಮೇನಿಯಾ ಶುರುವಾಗಿದೆ. ವೈಜಾಗ್ ಅಂಗಳದಲ್ಲಿ ಆಫ್ರಿಕಾ ಹರಣಿಗಳ ಜನ್ಮ ಜಲಾಡಿದ್ದ ಕನ್ನಡಿಗ ಮಯಾಂಕ್ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ರು.

ವಿಶಾಖಪಟ್ಟಣದ ಪಂದ್ಯದ ಪ್ರದರ್ಶನವನ್ನೇ ಪುಣೆ ಟೆಸ್ಟ್​ನಲ್ಲೂ ಮುಂದುವರೆಸಿದ್ದ ಮಯಾಂಕ್, ಕಠಿಣ ಪಿಚ್​ನಲ್ಲೂ ಸರಾಗವಾಗಿ ರನ್ ಬಾರಿಸಿ, ಭರ್ಜರಿ ಶತಕ ಸಿಡಿಸಿ ಮೆರೆದಾಡಿದ್ರು. ಅಗರ್ವಾಲ್ ರನ್ ಸುನಾಮಿಯ ಅಬ್ಬರ ಕಂಡು, ಆಫ್ರಿಕನ್ನರು ಇವನ್ಯಾರಪ್ಪ. ಆಡಿದ ಮೂರನೇ ಪಂದ್ಯದಲ್ಲೇ ಈ ಪಾಟಿ ಆಡ್ತಾನಲ್ಲಪ್ಪಾ ಅಂತಾ ಅಕ್ಷರಷಃ ಥಂಡಾ ಹೊಡೆದಿದ್ರು.

ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡೂ ಟೆಸ್ಟ್​ನಲ್ಲೂ ಶತಕ ಬಾರಿಸಿ ಸಂಭ್ರಮಿಸಿರೋ ಮಯಾಂಕ್, ವೀರೇಂದ್ರ ಸೆಹ್ವಾಗ್ ದಾಖಲೆಯನ್ನ ಸರಿಗಟ್ಟಿದ್ದಾನೆ. ಸಿಡಿಲ ಮರಿ ಸೆಹ್ವಾಗ್​ರಂತೆ ಅಬ್ಬರಸಿ ಬೊಬ್ಬಿರಿಯುತ್ತಿರೋ ಮರಿ ಸೆಹ್ವಾಗ್ ಮಯಾಂಕ್, ಆಫ್ರಿಕಾ ತಂಡವನ್ನ ಬೆಚ್ಚಿ ಬೀಳುವಂತೆ ಮಾಡಿದ್ದಾನೆ. ಕುತೂಹಲದ ವಿಷ್ಯ ಅಂದ್ರೆ, ಕನ್ನಡಿಗನ ಈ ಕೆಚ್ಚೆದೆಯ ಪರಾಕ್ರಮದ ಹಿಂದೆ ಇಂಟ್ರೆಸ್ಟಿಂಗ್ ಕಹಾನಿಯೊಂದಿದೆ

ಪೂಜಾರ ಜೊತೆ ಸಕ್ಸಸ್ ಸೀಕ್ರೆಟ್ ಬಿಚ್ಚಿಟ್ಟ ಮಯಾಂಕ್! ವೈಜಾಗ್ ಮತ್ತು ಪುಣೆಯಲ್ಲಿ ಕ್ಲಾಸ್ ಌಂಡ್ ಮಾಸ್ ಪರ್ಫಾಮೆನ್ಸ್ ನೀಡಿದ್ದ ಮಯಾಂಕ್ ಬ್ಯಾಟಿಂಗ್ ಸೀಕ್ರೆಟ್ ಏನು ಅನ್ನೋದು ಅಭಿಮಾನಿಗಳ ಪಾಲಿಗೆ ಪಶ್ನೆಯಾಗೇ ಉಳಿದಿತ್ತು. ಆದ್ರೀಗ ಆ ಸೀಕ್ರೆಟ್ ಅನ್ನ ಸ್ವತಃ ಮಯಾಂಕ್ ಚೇತೇಶ್ವರ್ ಪೂಜಾರ ಮುಂದೆ ಬಿಚ್ಚಿಟ್ಟಿದ್ದಾರೆ.

ತಿನ್ನೋದು ಎರಡೇ ಇಡ್ಲಿ.. ಬಾರಿಸ್ತಾನೆ ಟನ್​ಗಟ್ಟಲೇ ರನ್! ಹೌದು.. ನೀವ್ ನಂಬ್ತೀರೋ ಇಲ್ವೋ ಗೊತ್ತಿಲ್ಲ. ಮಯಾಂಕ್ ಅಗರ್ವಾಲ್ ಟನ್​ಗಟ್ಟಲೇ ರನ್ ಬಾರಿಸೋದಕ್ಕೆ ಕಾರಣವೇ ಎರಡೇ ಎರಡು ಇಡ್ಲಿ ಅಂತೆ. ಮಯಾಂಕ್ ನಿತ್ಯ ಬೆಳಗ್ಗೆ ತಿನ್ನೋದು ದಕ್ಷಿಣ ಭಾರತದ ಎರಡೇ ಎರಡು ಇಡ್ಲಿ, ತೆಂಗಿನಕಾಯಿ ಚಟ್ನಿ ಜೊತೆಗೆ ಸಾಂಬರ್ ಮಾತ್ರ. ಇದೇ ಮಯಾಂಕ್ ಮಹಾ ಸಾಧನೆಯ ಹಿಂದಿರೋ ಫಿಟ್ನೆಸ್ ಮಂತ್ರವಾಗಿದೆ.

ಟನ್​ಗಟ್ಟಲೇ ರನ್ ಕಲೆಹಾಕ್ತೀಯಾ. ಏನ್ ತಿನ್ನುತ್ತಿಯಾ ಅಂತ ಚೇತೇಶ್ವರ ಪೂಜಾರ, ಮಯಾಂಕ್​ನನ್ನ ಪ್ರಶ್ನೆ ಮಾಡ್ತಾರೆ. ಅದಕ್ಕೆ ಉತ್ತರಿಸಿದ ಮಯಾಂಕ್, ತುಂಬಾನೇ ಸರಳ. ಕೇವಲ ದಕ್ಷಣ ಭಾರತದ ಎರಡು ಇಡ್ಲಿ, ತೆಂಗಿನಕಾಯಿ ಚಟ್ನಿ, ಸಾಂಬರ್ ತಿನ್ನುತ್ತೇನೆ ಅಂತ ಹೇಳಿದ್ದಾರೆ..

ಎರಡು ಇಡ್ಲಿ ತಿಂದು ಟನ್​ಗಟ್ಟಲೇ ರನ್ ಹೊಡಿತೀನಿ ಅಂತ ಹೇಳಿದ ಮಯಾಂಕ್ ಮಾತನ್ನ, ಪೂಜಾರ ನಂಬೋದಿಲ್ಲ. ನಿಜ ಹೇಳು ಅಂತ ಮತ್ತೆ ಪೂಜಾರನನ್ನ ಒತ್ತಾಯಿಸ್ತಾರೆ. ಆಗಲೂ ಸಹ ಮಯಾಂಕ್, ನಿಜ ಹೇಳ್ತಿದ್ದೀನಿ. ಎರಡು ಇಡ್ಲಿಯನ್ನ ಮಾತ್ರ ತಿನ್ನುತ್ತೇನೆ ಅಂತ ಹೇಳ್ತಾರೆ.

ಆಸಿಸ್ ವಿರುದ್ಧ ಪದಾರ್ಪಣೆ ಮಾಡಿದ್ದ ಮಯಾಂಕ್, ಮೊದಲ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ರು. ಪದಾರ್ಪಣೆ ಪಂದ್ಯದಲ್ಲಿ ಸಕ್ಸಸ್ ಆಗಿದ್ದೇಗೆ ಅಂತ ಪೂಜಾರ ಕೇಳಿದ್ರು. ಅದಕ್ಕೆ ಉತ್ತರಿಸಿದ ಮಯಾಂಕ್, ಆಸಿಸ್ ಸರಣಿಗೂ ಮುನ್ನ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದು ಬಹಳ ಸಹಾಯವಾಯ್ತು ಅಂತ ಹೇಳಿದ್ದಾರೆ.

ಎರಡೇ ಎರಡು ಇಡ್ಲಿ ತಿಂದು, ಟನ್​ಗಟ್ಟಲೇ ರನ್ ಬಾರಿಸ್ತಿರೋ ಮಯಾಂಕ್ ಅಗರ್ವಾಲ್, ಮಾತಿಗೆ ಪೂಜಾರಾ ನಿಬ್ಬೆರಗಾಗಿದ್ದಾರೆ. ಕೇವಲ ಎರಡೇ ಎರಡು ಇಡ್ಲಿ ಈ ಪಾಟಿ ಸೌಂಡ್ ಮಾಡುತ್ತಲ್ಲಾ ಅಂತಾ ತಲೆಕೆಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ. ಮಯಾಂಕ್ ಇಡ್ಲಿ ರಹಸ್ಯ ಹೇಳುತ್ತಿದ್ದಂತೆ ಯುವ ಕ್ರಿಕೆಟಿಗರ ಚಿತ್ತವೆಲ್ಲ ಈಗ ಇಡ್ಲಿ ಸಂಬಾರ್​ನತ್ತ ನೆಟ್ಟಿದೆ.

Published On - 11:34 am, Thu, 17 October 19