ಚಾಂಪಿಯನ್ಸ್ ಲೀಗ್: ರಸ್ತೆಯಲ್ಲೇ ಬಡಿದಾಡಿಕೊಂಡ ಎರಡು ಫುಟ್ಬಾಲ್ ತಂಡದ ಅಭಿಮಾನಿಗಳು; ವಿಡಿಯೋ ನೋಡಿ

| Updated By: Skanda

Updated on: May 29, 2021 | 9:41 AM

ಎರಡೂ ತಂಡಗಳ ಈ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಎರಡು ಕ್ಲಬ್‌ಗಳ ಅಭಿಮಾನಿಗಳು ಪೋರ್ಟೊದ ಬೀದಿಯಲ್ಲಿ ಪರಸ್ಪರ ಬಡಿದುಕೊಳ್ಳುವುದರ ಜೊತೆಗೆ ಕುರ್ಚಿಗಳನ್ನು ಎಸೆದಾಡಿಕೊಂಡಿದ್ದಾರೆ.

ಚಾಂಪಿಯನ್ಸ್ ಲೀಗ್: ರಸ್ತೆಯಲ್ಲೇ ಬಡಿದಾಡಿಕೊಂಡ ಎರಡು ಫುಟ್ಬಾಲ್ ತಂಡದ ಅಭಿಮಾನಿಗಳು; ವಿಡಿಯೋ ನೋಡಿ
ಪೋರ್ಟೊದಲ್ಲಿ ಅಭಿಮಾನಿಗಳ ಗುಂಡಾಗಿರಿ
Follow us on

ಫುಟ್ಬಾಲ್ ಕ್ಲಬ್‌ಗಳ ಅಭಿಮಾನಿಗಳ ನಡುವಿನ ಕದನ ಹೊಸತಲ್ಲ. ಆಗಾಗ್ಗೆ, ಅಭಿಮಾನಿಗಳು ಎರಡು ತಂಡಗಳ ನಡುವಿನ ಪಂದ್ಯದ ಮೊದಲು ಅಥವಾ ನಂತರ ಮತ್ತು ಕೆಲವೊಮ್ಮೆ ಪಂದ್ಯದ ಸಮಯದಲ್ಲಿ ಜಗಳ ಪ್ರಾರಂಭಿಸುತ್ತಾರೆ. ಇದು ಸಾಮಾನ್ಯ ದಿನಗಳಲ್ಲಿಯೂ ನಡೆಯುತ್ತದೆ, ಆದರೆ ಕೊವಿಡ್ -19 ರ ಕಾರಣದಿಂದಾಗಿ ಪ್ರಪಂಚದಾದ್ಯಂತ ಪರಿಸ್ಥಿತಿಯ ಹೊರತಾಗಿಯೂ, ಅಭಿಮಾನಿಗಳ ನಡುವಿನ ಹೋರಾಟದ ಈ ಉತ್ಸಾಹವು ಕಡಿಮೆಯಾಗಿಲ್ಲ ಎಂದು ತೋರುತ್ತದೆ. ಗುರುವಾರ ಇಂಗ್ಲೆಂಡ್‌ನ ಎರಡು ದೊಡ್ಡ ಕ್ಲಬ್‌ಗಳ ಬೆಂಬಲಿಗರ ನಡುವೆ ಇದೇ ರೀತಿಯ ಘರ್ಷಣೆ ಕಂಡುಬಂದಿದೆ. ಮ್ಯಾಂಚೆಸ್ಟರ್ ಸಿಟಿ ಮತ್ತು ಚೆಲ್ಸಿಯಾ (ಮ್ಯಾಂಚೆಸ್ಟರ್ ಸಿಟಿ ವರ್ಸಸ್ ಚೆಲ್ಸಿಯಾ) ಅಭಿಮಾನಿಗಳು ಪೋರ್ಚುಗೀಸ್ ನಗರ ಪೋರ್ಟೊದಲ್ಲಿ ನಡೆದ ಯುಇಎಫ್ಎ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದ ಮುನ್ನ ಭಾರಿ ಗಲಭೆ ನಡೆಸಿದ್ದಾರೆ.

ಯುರೋಪಿಯನ್ ಕ್ಲಬ್ ಫುಟ್‌ಬಾಲ್‌ನ ಅತಿದೊಡ್ಡ ಪಂದ್ಯಾವಳಿಯಾದ ಚಾಂಪಿಯನ್ಸ್ ಲೀಗ್‌ನ ಫೈನಲ್ ಪಂದ್ಯವು ಮೇ 29 ರ ಶನಿವಾರ ಪೋರ್ಚುಗಲ್‌ನ ಪೋರ್ಟೊ ನಗರದಲ್ಲಿ ನಡೆಯಲಿದೆ. ಈ ಫೈನಲ್‌ನಲ್ಲಿ ಇಂಗ್ಲೆಂಡ್‌ನ ಎರಡೂ ಕ್ಲಬ್‌ಗಳು ಈ ಬಾರಿ ಸೆಣಸಾಡುತ್ತಿವೆ. ಪ್ರಶಸ್ತಿಗಾಗಿ ಮ್ಯಾಂಚೆಸ್ಟರ್ ಸಿಟಿ ಮತ್ತು ಚೆಲ್ಸಿಯಾ ನಡುವೆ ಈ ಯುದ್ಧ ನಡೆಯಲಿದೆ.

ಪೋರ್ಟೊದಲ್ಲಿ ಅಭಿಮಾನಿಗಳ ಗುಂಡಾಗಿರಿ
ಎರಡೂ ತಂಡಗಳ ಈ ಬೆಂಬಲಿಗರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಎರಡು ಕ್ಲಬ್‌ಗಳ ಅಭಿಮಾನಿಗಳು ಪೋರ್ಟೊದ ಬೀದಿಯಲ್ಲಿ ಪರಸ್ಪರ ಬಡಿದುಕೊಳ್ಳುವುದರ ಜೊತೆಗೆ ಕುರ್ಚಿಗಳನ್ನು ಎಸೆದಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಎರಡೂ ತಂಡದ ಅಭಿಮಾನಿಗಳು ಜಗಳ ಮಾಡಿಕೊಂಡಿದಲ್ಲದೆ, ಪೋರ್ಟೊ ಪೊಲೀಸರೊಂದಿಗೆ ಘರ್ಷಣೆ ಇಳಿದಿದ್ದಾರೆ ಎಂಬುದು ವರದಿಯಾಗಿದೆ.

ಕೊರೊನಾವೈರಸ್‌ನಿಂದಾಗಿ ಚಾಂಪಿಯನ್ಸ್ ಲೀಗ್‌ನ ಈ ಫೈನಲ್ ಅನ್ನು ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಿಂದ ಪೋರ್ಟೊಗೆ ಬದಲಾಯಿಸಲಾಯಿತು. ಫೈನಲ್ ಪಂದ್ಯವನ್ನು ಪೋರ್ಟೊದ ಎಸ್ಟಾಡಿಯೋ ಡೊ ಡ್ರಾಗಾವೊದಲ್ಲಿ ಆಡಲಾಗುವುದು ಮತ್ತು ಒಟ್ಟು 16500 ಪ್ರೇಕ್ಷಕರಿಗೆ ಕ್ರೀಡಾಂಗಣಕ್ಕೆ ಅವಕಾಶ ನೀಡಲಾಗಿದೆ. ಇದರಲ್ಲಿ ಉಭಯ ತಂಡಗಳ 6-6 ಸಾವಿರ ಅಭಿಮಾನಿಗಳು ಹಾಜರಿರುತ್ತಾರೆ.

ಮೊದಲ ಶೀರ್ಷಿಕೆಯ ಮೇಲೆ ಸಿಟಿ ಕಣ್ಣು
ಮ್ಯಾಂಚೆಸ್ಟರ್ ಸಿಟಿ ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ ಫೈನಲ್ ತಲುಪಿದೆ. ಇತ್ತೀಚೆಗೆ ಇಂಗ್ಲಿಷ್ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದ ಸಿಟಿ, ತಮ್ಮ ಮೊದಲ ಯುರೋಪಿಯನ್ ಚಾಂಪಿಯನ್‌ಶಿಪ್ ಪ್ರಶಸ್ತಿಗಾಗಿ ಬಲಿಷ್ಠ ಚೆಲ್ಸಿಯಾವನ್ನು ಎದುರಿಸಲಿದೆ. ಚೆಲ್ಸಿಯಾ ಈ ವರ್ಷ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಸಿಟಿಯನ್ನು ಸೋಲಿಸಿದೆ. ಚೆಲ್ಸಿಯಾ ತಂಡವು 2012 ರಿಂದ ಮೊದಲ ಬಾರಿಗೆ ಈ ಸ್ಪರ್ಧೆಯ ಫೈನಲ್ ತಲುಪಿದೆ. 2012 ರಲ್ಲಿ ಚೆಲ್ಸಿಯಾ ಮೊದಲ ಬಾರಿಗೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಇದನ್ನೂ ಓದಿ:
ಕೊರೊನಾ ಕಂಟಕ: ಜಪಾನ್​ನಲ್ಲಿ ತುರ್ತು ಪರಿಸ್ಥಿತಿ ವಿಸ್ತರಣೆ; ಪ್ರೇಕ್ಷಕರಿಲ್ಲದೆ ಒಲಿಂಪಿಕ್ಸ್ ಆಯೋಜಿಸಲು ಚಿಂತನೆ