ಟೀಮ್ ಇಂಡಿಯಾದ ಹೆಡ್ ಕೋಚ್ ರವಿ ಶಾಸ್ತ್ರಿ ಅಭಿಮಾನಿಗಳು ಅವರನ್ನು ಎಷ್ಟೇ ಸಮರ್ಥಿಸಿಕೊಂಡರೂ ಭಾರತೀಯ ಕ್ರಿಕೆಟ್ ನಿಂಯತ್ರಣ ಮಂಡಳಿ ಅವರನ್ನು ಮತ್ತೊಂದು ಅವಧಿಗೆ ವಿಸ್ತರಿಸುವುದು ದುಸ್ತರ ಎನಿಸುತ್ತಿದೆ. ಭಾರತವೇನಾದರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗೆದ್ದಿದ್ದರೆ ಅವರಿಗೆ ವಿಸ್ತರಣೆ ಸಿಗುವುದು ನಿಶ್ಚಿತವಾಗಿತ್ತು. ಮುಂಬರುವ ಟಿ20 ವಿಶ್ವಕಪ್ ನಂತರ ಶಾಸ್ತ್ರಿಯ ಟೆನ್ಯೂರ್ ಕೊನೆಗೊಳ್ಳಲಿದೆ. ಈಗ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಮತ್ತೊಂದು ಟೀಮಿನ ಕೋಚ್ ಆಗಿರುವ ಮಾಜಿ ಶ್ರೇಷ್ಠ ಆಟಗಾರ ರಾಹಲ್ ದ್ರಾವಿಡ್ ಅವರನ್ನು ಸೀನಿಯರ್ ಟೀಮಿನ್ ಕೋಚ್ ಆಗಿ ನೇಮಕ ಮಾಡಬೇಕು ಎನ್ನುವ ಕೂಗು ಜಾಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವಕಪ್ ನಂತರ ರವಿ ಶಾಸ್ತ್ರಿಗೆ ಗುಡ್ ಬೈ ಹೇಳುವ ಗುಮಾನಿ ದಟ್ಟವಾಗುತ್ತಿದೆ.
ಶಾಸ್ತ್ರಿ ಅವರ ಅವಧಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟ್ ವಿಶ್ವದ ಉತ್ತುಂಗ ತಲುಪಿದ್ದು ಸುಳ್ಳಲ್ಲ. ಅಸ್ಟ್ರೇಲಿಯಾವನ್ನು ಅದರ ಹಿತ್ತಲಲ್ಲೇ ಸೋಲಿಸಿವುದು ಸಾಮಾನ್ಯ ಸಾಧನೆಯೇನಲ್ಲ. ಹಾಗೆಯೇ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸಹ ತಲುಪಿತು. ಆದರೆ ಗಮನಿಸಬೇಕಾದ ಅಂಶವೆಂದರೆ, ಇದೇ ಅವಧಿಯಲ್ಲಿ ಭಾರತ ಐಸಿಸಿ ಪ್ರಮುಖ ಟೂರ್ನಿಗಳನ್ನು ಗೆಲ್ಲಲು ವಿಫಲವಾಯಿತು. ಶಾಸ್ತ್ರಿ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಡುವೆ ಉತ್ತಮ ಹೊಂದಾಣಿಕೆ ಇರುವುದರಿಂದ ಕೊಹ್ಲಿ ಮತ್ತೊಂದು ಅವಧಿ ವಿಸ್ತರಣೆಗೆ ಆಗ್ರಹಿಸಿದರೆ ಆಶ್ಚರ್ಯವೇನೂ ಇಲ್ಲ.
ಭಾರತದ ಮಾಜಿ ಆಲ್ರೌಂಡರ್, ರಿತೀಂದರ್ ಸಿಂಗ್ ಸೋಧಿ ಅವರು, ಭಾರತವೇನಾದರೂ, ಯುಎಈಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆದ್ದರೆ, ಶಾಸ್ತ್ರಿ, ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.
‘ಟೀಮಿನ ಹೆಡ್ ಕೋಚ್ ಆಗಿ ರವಿ ಭಾಯ್ ಅವರ ಸಾಧನೆ ಅಧ್ಬುತವಾಗಿದೆ. ಅವರು ಒಂದು ಐಸಿಸಿ ಪ್ ಗೆದ್ದುಕೊಳಿ ಎಂದು ಭಾರತೋಯರೆಲ್ಲ ಕಾಯುತ್ತಿರಿವುದು ನಿಜ. ಅದು ಸಾಧ್ಯವಾದರೆ ಅವರ ಗುರಿ ಈಡೇರಿದಂತಾಗುತ್ತದೆ. ಆದರೆ, ನಾವು ಯೋಚಿಸಬೇಕಿರುವ ಸಂಗತಿಯೆಂದರೆ, ರಾಹುಲ್ ಭಾಯ್ ಅವರನ್ನು ಭಾರತದ ಮತ್ತೊಂದು ಟೀಮಿನ ಕೋಚ್ ನೇಮಕ ಮಾಡಿ ಶ್ರೀಲಂಕಾ ಕಳಿಸಲಾಗಿದೆ. ಹಾಗೆಯೇ ಇತ್ತೀಚಿಗೆ ನಡೆದ ಇನ್ನೊಂದು ಬೆಳವಣಿಗೆಯನ್ನು ನಾವು ಗಮನಿಸಬೇಕು. ಇಂಗ್ಲೆಂಡ್ ಪ್ರವಾಸದಲ್ಲ್ಲಿರುವ ಟೀಮ್ ಇಂಡಿಯಾದ ಆರಂಭ ಆಟಗಾರ ಶುಭ್ಮನ್ ಗಿಲ್ ಗಾಯಗೊಂಡಿರುವುದರಿಂದ ಅವರಿಗೆ ಬದಲೀ ಆಟಗಾರನಾಗಿ ಮತ್ತೊಬ್ಬ ಓಪನರ್ನನ್ನು ಕಳಿಸಬೇಕೆಂದು ಟೀಮ್ ಮ್ಯಾನೇಜ್ಮೆಂಟ್ ಮಾಡಿರುವ ಮನವಿಯನ್ನು ಬಿಸಿಸಿಐ ಸಾರಾ ಸಗಟು ತಿರಸ್ಕರಿಸಿದೆ. ಇದನ್ನು ನಾವು ಆರ್ಥಮಾಡಿಕೊಳ್ಳಬೇಕಿದೆ. ನನ್ನನ್ನು ಕೇಳುವುದಾದರೆ, ರವಿ ಭಾಯ್ ಮೇಲೆ ಖಂಡಿತವಾಗಿಯೂ ಒತ್ತಡವಿದೆ,’ ಎಂದು ಸೋಧಿ ಹೇಳಿದ್ದಾರೆ
ಪ್ರಸ್ತುತವಾಗಿ ಶಾಸ್ತ್ರಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾದೊಂದಿಗಿದ್ದು ಎರಡು ರಾಷ್ಟ್ರಗಳ ನಡುವೆ 5-ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 4ರಿಂದ ನಾರ್ಥಾಂಪನ್ನಲ್ಲಿ ಆರಂಭವಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಂತರ ಮೂರು ವಾರಗಳ ರಜೆಯ ಹಿನ್ನೆಲೆಯಲ್ಲಿ ಚದುರಿರುವ ಆಟಗಾರರು ಜುಲೈ 14 ರಂದು ಜೊತೆಗೂಡಿ ತರಬೇತಿ ಆರಂಭಿಸಲಿದ್ದಾರೆ.
ಇದನ್ನೂ ಓದಿ: Ravi Shastri Age: ಗೂಗಲ್ ಪ್ರಕಾರ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರೀಯ ವಯಸ್ಸು 120