AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

US Open 2025: ಮತ್ತೊಮ್ಮೆ ಟ್ರೋಫಿಗೆ ಮುತ್ತಿಟ್ಟ ಅರಿನಾ ಸಬಲೆಂಕಾ

US Open 2025: ಮತ್ತೊಮ್ಮೆ ಟ್ರೋಫಿಗೆ ಮುತ್ತಿಟ್ಟ ಅರಿನಾ ಸಬಲೆಂಕಾ

ಝಾಹಿರ್ ಯೂಸುಫ್
|

Updated on: Sep 07, 2025 | 8:54 AM

Share

Aryna Sabalenka: 2024 ರ ಫೈನಲ್​ನಲ್ಲಿ ಜೆಸ್ಸಿಕಾ ಪೆಗುಲಾ ಅವೆರನ್ನು ಮಣಿಸಿ ಅರಿನಾ ಸಬಲೆಂಕಾ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಎಂದರೆ 27 ವರ್ಷದ ಅರಿನಾ ಸಬಲೆಂಕಾ ಅವರಿಗೆ ಇದು ನಾಲ್ಕನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ.

ಯುಎಸ್ ಓಪನ್ ಮಹಿಳಾ ಸಿಂಗಲ್ಸ್ ಫೈನಲ್​ನಲ್ಲಿ ಅಮಂಡಾ ಅನಿಸಿಮೋವಾ ಅವರನ್ನು ಸೋಲಿಸಿ ಅರಿನಾ ಸಬಲೆಂಕಾ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. USTA ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಸೆಂಟರ್​ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬೆಲಾರಸ್‌ನ ಅರಿನಾ ಸಬಲೆಂಕಾ ಅವರು ವಿಶ್ವದ ಏಳನೇ ಶ್ರೇಯಾಂಕದ ಅಮೆರಿಕದ ಅಮಂಡಾ ಅನಿಸಿಮೋವಾ ಅವರನ್ನು 6-3, 7-6 (7-3) ನೇರ ಸೆಟ್‌ಗಳಿಂದ ಸೋಲಿಸಿದರು. ಈ ಮೂಲಕ ಮತ್ತೊಮ್ಮೆ ಯುಎಸ್​ ಓಪನ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದರೆ 2024 ರ ಫೈನಲ್​ನಲ್ಲಿ ಜೆಸ್ಸಿಕಾ ಪೆಗುಲಾ ಅವೆರನ್ನು ಮಣಿಸಿ ಅರಿನಾ ಸಬಲೆಂಕಾ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಎಂದರೆ 27 ವರ್ಷದ ಅರಿನಾ ಸಬಲೆಂಕಾ ಅವರಿಗೆ ಇದು ನಾಲ್ಕನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ.

ಇದಕ್ಕೂ ಮುನ್ನ ಅರಿನಾ 2023, 2024ರ ಆಸ್ಟ್ರೇಲಿಯನ್ ಓಪನ್, 2024ರ ಯುಎಸ್ ಓಪನ್ ಗೆದ್ದಿದ್ದರು. ಇದೀಗ ಮತ್ತೊಮ್ಮೆ ಯುಎಸ್ ಓಪನ್​ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವಲ್ಲಿ ಬೆಲಾರಸ್​ನ ಟೆನಿಸ್ ತಾರೆ ಯಶಸ್ವಿಯಾಗಿದ್ದಾರೆ.