ನನಗೂ ಅದಕ್ಕೂ ಸಂಬಂಧವಿಲ್ಲ; ರಾಯುಡು ತ್ರಿಡಿ ಪ್ಲೇಯರ್ ಟ್ಯಾಗ್ ಬಗ್ಗೆ ವಿಜಯ್ ಶಂಕರ್​ ಹೇಳಿದ್ದೇನು?

|

Updated on: May 19, 2021 | 5:19 PM

ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ತ್ರಿಡಿ ಪ್ಲೇಯರ್ ಎಂಬ ಟ್ಯಾಗ್ ಅನ್ನ ನನ್ನ ಹೆಸರಿಗೆ ತಳುಕು ಹಾಕಿದ್ರು. ನನ್ನ ಮತ್ತು ರಾಯುಡು ನಡುವೆ ಯಾವುದೇ ದ್ವೇಷವಿಲ್ಲ ಎಂದಿದ್ದಾರೆ.

ನನಗೂ ಅದಕ್ಕೂ ಸಂಬಂಧವಿಲ್ಲ; ರಾಯುಡು ತ್ರಿಡಿ ಪ್ಲೇಯರ್ ಟ್ಯಾಗ್ ಬಗ್ಗೆ ವಿಜಯ್ ಶಂಕರ್​ ಹೇಳಿದ್ದೇನು?
ವಿಜಯ್ ಶಂಕರ್, ಅಂಬಟಿ ರಾಯುಡು
Follow us on

ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದು ತ್ರಿಡಿ ಪ್ಲೇಯರ್ ಎಂದು ಟ್ರೋಲ್ ಆಗ್ತಿದ್ದ ವಿಜಯ್ ಶಂಕರ್ ಮೊದಲ ಬಾರಿಗೆ, ತ್ರಿಡಿ ಬಗ್ಗೆ ಬಾಯ್ಬಿಟ್ಟಿದ್ದಾರೆ. ತ್ರಿಡಿ ಡೈಮನ್ಷನ್.. 2019ರ ಏಕದಿನ ವಿಶ್ವಕಪ್ ಸಮಯದಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ಪದಗಳಿವು. ಅಂಬಟಿ ರಾಯುಡು ಬದಲು.. ವಿಜಯ್ ಶಂಕರ್ನನ್ನ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದ್ದ ಎಮ್ಎಸ್ಕೆ ಪ್ರಸಾದ್, ಬಾಯಿಂದ ಹೊರಬಿದ್ದ ಅಣಿ ಮುತ್ತುಗಳಿವು.

ಶಂಕರ್ ಮೂರು ಆಯಾಮಗಳಲ್ಲಿ ಆಡುವ ಆಟಗಾರ. ಯಾಕಂದ್ರೆ ಆತ ಬ್ಯಾಟಿಂಗ್ ಬೌಲಿಂಗ್ ಮಾಡ್ತಾನೆ. ಇಂಗ್ಲೆಂಡ್ನ ಕಂಡೀಷನ್ ಕೂಡ ಆತನಿಗೆ ಸೂಕ್ತವಾಗುತ್ತೆ.
-ಎಂ.ಎಸ್.ಕೆ ಪ್ರಸಾದ್, ಸೆಲೆಕ್ಷನ್ ಕಮಿಟಿ ಮಾಜಿ ಮುಖ್ಯಸ್ಥ

ಎಮ್ಎಸ್ಕೆ ಪ್ರಸಾದ್ ಹೇಳಿದ ಈ ಮಾತಿಗೆ ಅಂಬಟಿ ರಾಯುಡು ಕೆಂಡಾಮಂಡಲವಾಗಿದ್ರು. ಈ ಬಾರಿಯ ವಿಶ್ವಕಪ್ ಟೂರ್ನಿ ನೋಡಲು 3D ಕನ್ನಡಕ ಬೇಕು ಎಂದು ಟ್ವೀಟ್ ಮಾಡಿ ಆಯ್ಕೆ ಸಮಿತಿ ಕಾಲೆಳೆದಿದ್ದರು. ನಂತರ ವಿಜಯ್ ಶಂಕರ್ ಪ್ಲಾಫ್ ಆದಾಗಲೆಲ್ಲಾ, ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ಶಂಕರ್ ತ್ರಿಡಿ ಟ್ಯಾಗ್ ಬಳಸಿ ಟ್ರೋಲ್ ಮಾಡಲು ಶುರುಮಾಡಿದ್ರು.

ಆದ್ರೀಗ ಮೂರು ವರ್ಷಗಳ ಬಳಿಕ ವಿಜಯ್ ಶಂಕರ್ ತ್ರಿಡಿ ಪ್ಲೇಯರ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಸುಖಾಸುಮ್ಮನೆ ತ್ರಿಡಿ ಪ್ಲೇಯರ್ ಎಂಬ ಟ್ಯಾಗ್ ಅನ್ನ ನನ್ನ ಹೆಸರಿಗೆ ತಳುಕು ಹಾಕಿದ್ರು. ನನ್ನ ಮತ್ತು ರಾಯುಡು ನಡುವೆ ಯಾವುದೇ ದ್ವೇಷವಿಲ್ಲ ಎಂದಿದ್ದಾರೆ..

ನನಗೂ ಅದಕ್ಕು ಸಂಬಂಧವಿಲ್ಲ.
ನನಗೂ ಅದಕ್ಕೂ ಸಂಬಂಧವೇ ಇಲ್ಲ. 3D ಪ್ಲೇಯರ್ ಎಂಬ ಟ್ಯಾಗ್‌ನ್ನು ಸುಮ್ಮನೆ ನನ್ನ ಹೆಸರಿನ ಜೊತೆ ತಳುಕು ಹಾಕಿದರು ಮತ್ತು ಅದನ್ನು ವೈರಲ್ ಮಾಡಿದರು. ವಿಶ್ವಕಪ್ ಟೂರ್ನಿಗೆ ಆಯ್ಕೆಯಾದ ನಂತರ ಟೀಮ್ ಇಂಡಿಯಾ ಪರ 3 ಪಂದ್ಯಗಳನ್ನಾಡಿ ಒಳ್ಳೆಯ ಪ್ರದರ್ಶನವನ್ನೂ ನೀಡಿದೆ, ನಾನೇನು ಕೆಟ್ಟ ಪ್ರದರ್ಶನವನ್ನು ನೀಡಲಿಲ್ಲ.’’
– ವಿಜಯ್ ಶಂಕರ್, ಟೀಮ್ ಇಂಡಿಯಾ ಆಟಗಾರ

ಇಷ್ಟೇ ಅಲ್ಲ.. ನನ್ನ ಮತ್ತು ರಾಯುಡು ನಡುವೆ ಯಾವುದೇ ವೈಮನಸ್ಸಿಲ್ಲ. ನಾವು ಭೇಟಿಯಾದಾಗ ಚೆನ್ನಾಗಿ ಮಾತನಾಡುತ್ತೇವೆ ಎಂದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ನನ್ನ ಮತ್ತು ರಾಯುಡು ಬ್ಯಾಟಿಂಗ್ ಕ್ರಮಾಂಕಕ್ಕೂ ತುಂಬಾ ವ್ಯತ್ಯಾಸವಿದೆ. ಅದನ್ನ ಗಮನಿಸದೆ ಮನರಂಜನೆಗೋಸ್ಕರ ತಮಗೆ ಬೇಕಾದ ರೀತಿಯಲ್ಲಿ ಟ್ರೋಲ್ ಮಾಡುತ್ತಾರೆ ಎಂದಿದ್ದಾರೆ.