ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಆಟಗಾರ ಗ್ಲೆನ್ ಪಿಲಿಪ್ಸ್ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟಿ-20 ವಿಟಾಲಿಟಿ ಬ್ಲಾಸ್ಟ್ 2021 ಟೂರ್ನಿಯಲ್ಲಿ ಗ್ಲೌಸ್ಸ್ಟೆರ್ಶೈರ್ ತಂಡದ ಪರ ಆಡುತ್ತಿದ್ದು, ಅದ್ಭುತ ಕ್ಯಾಚ್ ಹಿಡಿದಿರುವ ವಿಡಿಯೋ ವೈರಲ್ ಆಗುತ್ತಿದೆ. ಮಿಡಲ್ಸ್ಎಕ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಪಿಲಿಪ್ಸ್ ಕ್ಯಾಚ್ಗೆ ಕ್ರಿಕೆಟ್ ಪಂಡಿತರೇ ಬೆರಗಾಗಿದ್ದಾರೆ.
ಮೊದಲು ಬ್ಯಾಟ್ ಮಾಡಿದ ಗ್ಲೌಸ್ಸ್ಟೆರ್ಶೈರ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು. ರಿಯಾನ್ ಹಿಗ್ಗಿನ್ಸ್ ಕೇವಲ 25 ಎಸೆತಗಳಲ್ಲಿ 43ರನ್ ಚಚ್ಚಿದರೆ, ಲಾನ್ ಕಾಕ್ಬಿನ್ 34 ರನ್ ಬಾರಿಸಿದರು.
172 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ಮಿಡಲ್ಸ್ಎಕ್ಸ್ ತಂಡಕ್ಕೆ ಆರಂಭದಲ್ಲೇ ಶಾಕ್ ನೀಡಿದ್ದು ಗ್ಲೆನ್ ಪಿಲಿಪ್ಸ್. ಓಪನರ್ ಸ್ಟೀವ್ ಎಸ್ಕಿನಾಜಿ 9 ರನ್ ಗಳಿಸಿರುವಾಗ ಚೆಂಡನ್ನು ಬೌಂಡರಿಗೆಂದು ಅಟ್ಟಿದರು. ಆದರೆ, ಬ್ಯಾಕ್ವರ್ಡ್ ಪಾಯಿಂಟ್ನಿಂದ ಓಡಿ ಬಂದ ಪಿಲಿಪ್ಸ್ ಡೈವ್ ಹೊಡೆದು ಸ್ಟನ್ನಿಂಗ್ ಕ್ಯಾಚ್ ಹಿಡಿದರು. ಇದರ ವಿಡಿಯೋವನ್ನು ವಿಟಾಲಿಟಿ ಬ್ಲಾಸ್ಟ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
WHAT A WORLDIE ?
Glenn Phillips take a bow ?
Watch #Blast21 LIVE: https://t.co/YlrUmoId41 pic.twitter.com/tRDw651orZ
— Vitality Blast (@VitalityBlast) July 9, 2021
ಈ ಪಂದ್ಯದಲ್ಲಿ ಮಿಡಲ್ಸ್ಎಕ್ಸ್ ತಂಡ ತಂಡ 20 ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡು 161 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಕೊಂಡಿತು. ತಂಡದ ಪರ ಮ್ಯಾಕ್ಸ್ ಹೋಲ್ಡೆನ್ 34 ಎಸೆತಗಳಲ್ಲಿ 50 ರನ್ ಗಳಿಸಿ ಅಜೇಯರಾಗಿ ಉಳಿದರು.
ಗ್ಲೆನ್ ಪಿಲಿಪ್ಸ್ ಅವರು ಈ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆಡಿದ 10 ಪಂದ್ಯಗಳಲ್ಲಿ 423 ರನ್ ಗಳಿಸಿ 60 ಸರಾಸರಿ ಕಾಪಾಡಿಕೊಂಡಿದ್ದಾರೆ. ಮೂರು ಅರ್ಧಶತಕ ಕೂಡ ಸೇರಿದ್ದು, 160ಕ್ಕಿಂತ ಅಧಿಕ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ನ್ಯೂಜಿಲೆಂಡ್ ಪರ ಪಿಲಿಪ್ಸ್ ಅವರು 25 ಅಂತರರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. 506 ರನ್ ಗಳಿಸಿದ್ದು, 2 ಅರ್ಧಶತಕ ಕೂಡ ಸೇರಿದೆ. ನ್ಯೂಜಿಲೆಂಡ್ ತಂಡದ ಪರ ಟೆಸ್ಟ್ ಪಂದ್ಯಗಳಲ್ಲೂ ಇವರು ಕಣಕ್ಕಿಳಿದಿದ್ದಾರೆ.
Ashleigh Barty: ಚೊಚ್ಚಲ ವಿಂಬಲ್ಡನ್ ಗೆದ್ದ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ ಕ್ರಿಕೆಟರ್ ಎಂಬುದು ನಿಮಗೆ ಗೊತ್ತೇ?
Copa America Final: ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಅರ್ಜೆಂಟಿನಾ
Published On - 11:56 am, Sun, 11 July 21