ICC Rankings: ಕ್ರಿಕೆಟ್​ನ ಮೂರು ಆಯಾಮದಲ್ಲೂ ಟಾಪ್​ ಐದರೊಳಗೆ ಸ್ಥಾನ ಪಡೆದ ಮೊದಲ ಕ್ರಿಕೆಟಿಗ ಕಿಂಗ್​ ಕೊಹ್ಲಿ!

|

Updated on: Mar 17, 2021 | 4:45 PM

ಕೊಹ್ಲಿ ಪ್ರಸ್ತುತ ಟೆಸ್ಟ್ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಕ್ರಿಕೆಟ್​ನ ಮೂರು ಆವೃತ್ತಿಯಲ್ಲೂ ಟಾಪ್​ 5ರೊಳಗಿನ ರ್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದ ಮೊದಲ ಆಟಗಾರನೆಂಬ್ಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ICC Rankings: ಕ್ರಿಕೆಟ್​ನ ಮೂರು ಆಯಾಮದಲ್ಲೂ ಟಾಪ್​ ಐದರೊಳಗೆ ಸ್ಥಾನ ಪಡೆದ ಮೊದಲ ಕ್ರಿಕೆಟಿಗ ಕಿಂಗ್​ ಕೊಹ್ಲಿ!
ವಿರಾಟ್ ಕೊಹ್ಲಿ
Follow us on

ಅಹಮದಾಬಾದ್​: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಗೆಲುವಿನ ಲಯಕಂಡುಕೊಂಡಿದ್ದ ಕೊಹ್ಲಿ ಹುಡುಗರು, 3ನೇ ಟಿ20 ಪಂದ್ಯದಲ್ಲಿ ಮತ್ತೆ ಆಂಗ್ಲರ ಮುಂದೆ ಶರಣಾಗಿದ್ದಾರೆ. ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ, ಟೀಮ್ ಇಂಡಿಯಾ 8 ವಿಕೆಟ್​ಗಳ ಅಂತರದಲ್ಲಿ ಮುಗ್ಗರಿಸಿದೆ. ಕಳೆದ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿರುವ ಆಂಗ್ಲರು, 2-1ರ ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಈ ಪಂದ್ಯದಲ್ಲಿ ಭಾರತಕ್ಕೆ ಇರುವ ಏಕೈಕ ಸಕಾರಾತ್ಮಕ ಅಂಶವೆಂದರೆ ನಾಯಕ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್, ಅವರು ಸಂಪೂರ್ಣವಾಗಿ ಫಾರ್ಮ್ಗೆ ಮರಳಿದ್ದಾರೆ.

ಏಕಾಂಗಿಯಾಗಿ ಮಾರ್ಗನ್ ಪಡೆ ಬೌಲರ್ಗಳ ಮೇಲೆ ಸವಾರಿ ಮಾಡಿದ ಕ್ಯಾಪ್ಟನ್ ಕೊಹ್ಲಿ, ಬೌಂಡರಿ ಸಿಕ್ಸರ್​ಗಳ ಸುರಿಮಳೆಗೈದು ಆಕರ್ಷಕ ಅರ್ಧಶತಕ ಸಿಡಿಸಿದ್ರು. ಕೇವಲ 46 ಬಾಲ್​ಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿದ ವಿರಾಟ್ ಅಜೇಯ 77 ರನ್ಗಳಿಸಿದ್ರು. ಈ ಆಟದಿಂದಾಗಿ ಭಾರತದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಪುರುಷರ ಟಿ 20 ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ ಐದನೇ ಸ್ಥಾನಕ್ಕೆ ಏರಿದ್ದಾರೆ.

ಮೂರು ಆವೃತ್ತಿಯಲ್ಲೂ ಟಾಪ್​ 5ರೊಳಗಿನ ರ್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದ ಮೊದಲ ಆಟಗಾರ
ಪ್ರಸ್ತುತ ಏಕದಿನ ಪಂದ್ಯಗಳ ರ್ಯಾಂಕಿಂಗ್‌ನಲ್ಲಿ ನಂ .1 ಸ್ಥಾನದಲ್ಲಿರುವ ಕೊಹ್ಲಿ ಎರಡನೇ ಮತ್ತು ಮೂರನೇ ಟಿ 20 ಪಂದ್ಯಗಳಲ್ಲಿ ಎರಡು ಬಾರಿ 70ಕ್ಕಿಂತ ಹೆಚ್ಚು ರನ್ ಬಾರಿಸಿದ ನಂತರ 47 ರೇಟಿಂಗ್ ಗಳಿಸಿದ್ದಾರೆ. ಜೊತೆಗೆ ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಟಿ20 ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಪ್ರಸ್ತುತ ಟೆಸ್ಟ್ ಶ್ರೇಯಾಂಕದಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಕ್ರಿಕೆಟ್​ನ ಮೂರು ಆವೃತ್ತಿಯಲ್ಲೂ ಟಾಪ್​ 5ರೊಳಗಿನ ರ್ಯಾಂಕಿಂಗ್‌ನಲ್ಲಿ ಸ್ಥಾನ ಪಡೆದ ಮೊದಲ ಆಟಗಾರನೆಂಬ್ಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ಟೀಂ ಇಂಡಿಯಾ ಆಟಗಾರರಲ್ಲಿ ಶ್ರೇಯಸ್ ಅಯ್ಯರ್ 32 ನೇ ಸ್ಥಾನದಿಂದ 31 ಕ್ಕೆ ಏರಿದರೆ, ರಿಷಭ್ ಪಂತ್ 30 ಸ್ಥಾನಗಳನ್ನು ಗಳಿಸಿ 80 ನೇ ಸ್ಥಾನಕ್ಕೆ ತಲುಪಿದರು. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಎರಡು ಸ್ಥಾನಗಳನ್ನು ಬಡ್ತಿ ಪಡೆದು 11ನೇ ಸ್ಥಾನಕ್ಕೆ ತಲುಪಿದರೆ, ಶಾರ್ದುಲ್ ಠಾಕೂರ್ 14 ಸ್ಥಾನಗಳ ಏರಿಕೆ ಕಂಡು 27ನೇ ಸ್ಥಾನಕ್ಕೆ ತಲುಪಿದರು. ಗಾಯದ ನಂತರ ತಂಡಕ್ಕೆ ಮರಳಿದ ಭುವನೇಶ್ವರ್ ಕುಮಾರ್ ಏಳು ಸ್ಥಾನಗಳನ್ನು ಗಳಿಸಿ 45 ನೇ ಸ್ಥಾನಕ್ಕೆ ತಲುಪಿದರು.

ನೆನ್ನೆಯ ಪಂದ್ಯದಲ್ಲಿ ಕೊಹ್ಲಿ ಮಾಡಿದ ದಾಖಲೆಗಳು

ಸಚಿನ್ ದಾಖಲೆ ಮುರಿದ ಕೊಹ್ಲಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಜೇಯ 50ಕ್ಕೂ ಹೆಚ್ಚು ರನ್‌ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಎಂಬ ವಿಶಿಷ್ಠ ದಾಖಲೆಯನ್ನು ನಾಯಕ ವಿರಾಟ್‌ ಕೊಹ್ಲಿ ಮಾಡಿದ್ದಾರೆ. ಅದ್ಭುತ ಲಯದಲ್ಲಿರುವ ವಿರಾಟ್‌ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ವೃತ್ತಿ ಜೀವನದ 27ನೇ ಅರ್ಧಶತಕ ಸಿಡಿಸಿದರು. ಆ ಮೂಲಕ ಅತಿ ಹೆಚ್ಚು ಅಜೇಯ ಅರ್ಧಶತಕಗಳನ್ನು ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್‌ ಆಗುವ ಮೂಲಕ ಕೊಹ್ಲಿ (50*) ಸಚಿನ್‌ ತೆಂಡೂಲ್ಕರ್‌(49) ಅವರನ್ನು ಹಿಂದಿಕ್ಕಿದರು.

ಸತತ ಎರಡು ಅರ್ಧಶತಕ ಸಿಡಿಸಿದ ವಿರಾಟ್
ಇಂಗ್ಲೆಂಡ್‌ ವಿರುದ್ಧ ಕಳೆದ ಎರಡು ಪಂದ್ಯಗಳಲ್ಲಿ ಸತತ ಎರಡು ಅರ್ಧಶತಕಗಳನ್ನು ಸಿಡಿಸುವ ಮೂಲಕ ವಿರಾಟ್‌ ಕೊಹ್ಲಿ ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡರು. ಟಿ20 ಕ್ರಿಕೆಟ್‌ನಲ್ಲಿ 10ನೇ ಬಾರಿ ಸತತ ಎರಡು ಅರ್ಧಶತಕ ಸಿಡಿಸಿದ ದಾಖಲೆಗೆ ಕೊಹ್ಲಿ ಮಂಗಳವಾರ ಭಾಜನರಾದರು. ವೆಸ್ಟ್ ಇಂಡೀಸ್‌ ತಂಡದ ಕ್ರಿಸ್‌ ಗೇಲ್‌ ಹಾಗೂ ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ ಆರು ಬಾರಿ ಸತತ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ.