ಮಹಿಳಾ ದೇಶಿ ಕ್ರಿಕೆಟ್: 17 ರನ್ಗಳಿಗೆ ಸರ್ವಪತನಗೊಂಡ ನಾಗಾಲ್ಯಾಂಡ್.. ನಾಲ್ಕೆ ಎಸೆತದಲ್ಲಿ ಪಂದ್ಯ ಗೆದ್ದ ಮುಂಬೈ!
ಕೇವಲ 4 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ, ಒಂದು ಸಿಕ್ಸರ್ ಮತ್ತು ಒಂದು ನೋ-ಬಾಲ್ ಮೂಲಕ ಎದುರಿದ್ದ 17 ರನ್ಗಳ ಟಾರ್ಗೆಟನ್ನು ಸುಲಭವಾಗಿ ಬೆನ್ನತ್ತಿದ್ದರು.
ಕ್ರಿಕೆಟ್ ಪ್ರಪಂಚದ ಜೆಂಟಲ್ಮ್ಯಾನ್ ಗೇಮ್. ಈ ಆಟದಲ್ಲಿರುವ ವಿಶೇಷತೆಗಳಿಂದಲೇ ಈ ಆಟ ಪ್ರಪಂಚದಲ್ಲಿ ಇಷ್ಟೊಂದು ಪ್ರಾಮುಖ್ಯತೆ ಪಡೆದಿದೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಕ್ರಿಕೆಟ್ ಒಂದು ಧರ್ಮವಾಗಿಬಿಟ್ಟಿದೆ. ಇಂತಹ ಆಟದಲ್ಲಿ ಒಮೊಮ್ಮೆ ವಿಚಿತ್ರ ಘಟನೆಗಳು ನಡೆದು ಹೋಗುತ್ತವೆ. ಕೆಲವೊಮ್ಮೆ ಆಟಗಾರರ ಅದ್ಭುತ ಆಟದಿಂದಾಗಿ ಈ ಹಿಂದೆ ಗಳಿಸಲಾಗದ ಅನೇಕ ದಾಖಲೆಗಳು ಕೇವಲ ಒಂದೇ ದಿನದಲ್ಲಿ ಸೃಷ್ಟಿಯಾಗಿಬಿಡುತ್ತವೆ. ಹಾಗೆಯೇ ಇನ್ನೂ ಕೆಲವೊಮ್ಮೆ ಆಟಗಾರರ ಕಳಪೆ ಪ್ರದರ್ಶನದಿಂದಾಗಿ ತಂಡ ಹೀನಾಯವಾಗಿ ಸೋಲುವುದನ್ನು ಕಾಣಬಹುದಾಗಿದೆ. ಈಗ ಅಂತಹದೆ ಘಟನೆಯೊಂದು ಭಾರತದ ಮಹಿಳಾ ದೇಶಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದಿದೆ.
ಕ್ರಿಕೆಟ್ನಲ್ಲಿ ಈ ಹಿಂದೆ ಕೆಲವು ವಿಲಕ್ಷಣ ಸ್ಕೋರ್‌ಲೈನ್‌ಗಳನ್ನು ನಾವು ಕಂಡಿದ್ದೇವೆ. 2019 ರ ಟಿ -20 ಪಂದ್ಯದಲ್ಲಿ ಮಾಲಿ ಮಹಿಳಾ ತಂಡವನ್ನು ರುವಾಂಡಾ ತಂಡ 6 ರನ್ ಗಳಿಗೆ ಆಲ್ಔಟ್ ಮಾಡಿತ್ತು, ಹೆಚ್ಚು ಪರಿಚಿತ ಉದಾಹರಣೆಯನ್ನು ತೆಗೆದುಕೊಳ್ಳಬೇಕಾದರೆ, 2020 ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಪುರುಷರ ತಂಡ ಕೇವಲ 36 ರನ್ ಗಳಿಗೆ ಆಲ್ಔಟ್ ಆಗಿತ್ತು. ಈ ರೀತಿಯಾ ಇಂತದೆ ಘಟನೆಯೊಂದು ಬುಧವಾರ, ಭಾರತದ ಮಹಿಳಾ ಹಿರಿಯ ಏಕದಿನ ಟ್ರೋಫಿಯಲ್ಲಿ ಮುಂಬೈ ಮತ್ತು ನಾಗಾಲ್ಯಾಂಡ್ ನಡುವಿನ ಪಂದ್ಯದಲ್ಲಿ ನಡೆದಿದೆ.
ಬರೊಬ್ಬರಿ 17.4 ಓವರ್ಗಳನ್ನು ಎದುರಿಸಿದ ನಾಗಾಲ್ಯಾಂಡ್.. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ನಾಗಾಲ್ಯಾಂಡ್ ತಂಡ ಬರೊಬ್ಬರಿ 17.4 ಓವರ್ಗಳನ್ನು ಎದುರಿಸಿ, ಕೇವಲ 17 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್ಔಟ್ ಆಗಿದೆ. 9 ರನ್ ಗಳಿಸಿದ ಸರಿಬಾ ಅವರು ತಂಡದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. ಮುಂಬೈ ಪರ ಮಿಂಚಿದ ತಂಡದ ನಾಯಕಿ ಸಯಾಲಿ ಸತ್ಘರೆ 8.4 ಓವರ್ಗಳಲ್ಲಿ ಕೇವಲ 5 ರನ್ ನೀಡಿ ಪ್ರಮುಖ 7 ವಿಕೆಟ್ ಪಡೆದುಕೊಂಡರು
ನಾಲ್ಕು ಎಸೆತಗಲ್ಲಿ ಪಂದ್ಯವನ್ನು ಗೆದ್ದು ಬೀಗಿತು.. ನಾಗಾಲ್ಯಾಂಡ್ ತಂಡ ನೀಡಿದ 17 ರನ್ಗಳ ಟಾರ್ಗೆಟನ್ನು ಬೆನ್ನತ್ತಿದ ಮುಂಬೈ ತಂಡ ಕೇವಲ ನಾಲ್ಕು ಎಸೆತಗಲ್ಲಿ ಪಂದ್ಯವನ್ನು ಗೆದ್ದು ಬೀಗಿತು. ಮುಂಬೈ ತಂಡದ ಆರಂಭಿಕ ಆಟಗಾರ್ತಿಯರು ಕೇವಲ 4 ಎಸೆತಗಳನ್ನು ಎದುರಿಸಿ ಮೂರು ಬೌಂಡರಿ, ಒಂದು ಸಿಕ್ಸರ್ ಮತ್ತು ಒಂದು ನೋ-ಬಾಲ್ ಮೂಲಕ ಎದುರಿದ್ದ 17 ರನ್ಗಳ ಟಾರ್ಗೆಟನ್ನು ಸುಲಭವಾಗಿ ಬೆನ್ನತ್ತಿದ್ದರು. ಇದರೊಂದಿಗೆ ಇನ್ನಿಂಗ್ಸ್‌ನಲ್ಲಿ ಇನ್ನೂ 296 ಎಸೆತಗಳು ಬಾಕಿ ಇದ್ದಾಗಲೇ ಮುಂಬೈ ತಂಡ ಜಯದ ಮಾಲೆಯನ್ನು ಮೂಡಿಗೆರಿಸಿಕೊಂಡಿತು.
ಇದನ್ನೂ ಓದಿ:ರೂಪಾಂತರಿ ಕೊರೊನಾ ಭಯ: ಐಪಿಎಲ್ ಹೊರತುಪಡಿಸಿ, ಎಲ್ಲಾ ವಯೋಮಾನದವರ ದೇಶಿ ಪಂದ್ಯಾವಳಿಗಳಿಗೆ ಬ್ರೇಕ್ ಹಾಕಿದ BCCI!