ಅಹಮದಬಾದ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮ ಅವರಿಬ್ಬರೂ ವೃದ್ಧಿಮಾನ್ ಸಾಹ ಅವರ ಮಗನ ಮೊದಲ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಶುಭ ಕೋರಿದರು. ವೃದ್ಧಿಮಾನ್ ಸಾಹ ಮಗನ ಹುಟ್ಟುಹಬ್ಬ ಅಹಾಮದಾಬಾದ್ನ ಭಾಷಾ ನಗರದಲ್ಲಿ ನಡೆಯಿತು.
ಇತ್ತೀಚೆಗೆ ನಡೆದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಜಯ ದಾಖಲಿಸಿತು. ಈ ಗೆಲವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ನಲ್ಲಿ ಭಾರತಕ್ಕೆ ಸ್ಥಾನ ಗಳಿಸಲು ನೆರವಾಯಿತು. ವೃದ್ಧಿಮಾನ್ ಸಾಹ ತಂಡದ ಭಾಗವಾಗಿದ್ದರೂ ಯಾವುದೇ ಪಂದ್ಯವನ್ನೂ ಆಡಲಿಲ್ಲ. ಆದರೆ ರಿಷಭ್ ಪಂತ್ ವಿಕೆಟ್ ಕೀಪರ್ಗೆ ಆದ್ಯತೆ ನೀಡಿದರು.
ಸದ್ಯ ವೃದ್ಧಿಮಾನ್ ಸಾಹ ತನ್ನ ಮಗನ ಹುಟ್ಟುಹಬ್ಬದ ಸಂಭ್ರದಲ್ಲಿದ್ದಾರೆ. ಮೊದಲ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದು, ಇದಕ್ಕೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳನ್ನು ವೃದ್ಧಿಮಾನ್ ಸಾಹ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹಂಚಿಕೊಂಡ ಫೋಟೋವೊಂದರಲ್ಲಿ ಹುಟ್ಟು ಹಬ್ಬದ ಕೇಕ್ ಕತ್ತರಿಸುವ ವೇಳೆ ಭಾರತ ಕ್ರಿಕೆಟ್ ತಂಡದ ನಾಯಕ ತನ್ನ ಮಡದಿ ಅನುಷ್ಕಾ ಜೊತೆ ನಿಂತುಕೊಂಡಿದ್ದಾರೆ. ವಿರಾಟ್ ಕೊಯ್ಲಿ ಬಿಳಿ ಟೀ ಶರ್ಟ್ ಜೊತೆ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಇನ್ನು ಅನುಷ್ಕಾ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಜೊತೆಗೆ ಬಿಳಿ ಟಾಪ್ನಲ್ಲಿ ಸುಂದರವಾಗಿ ಕಾಣಿಸಿಕೊಂಡರು.
ಅಪ್ಪನಾದ ವಿರಾಟ್ ಕೊಹ್ಲಿ
ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ 2017ರ ಡಿಸೆಂಬರ್ 11 ರಂದು ವಿವಾಹವಾದರು. ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಯ ಆರತಕ್ಷತೆ ಭಾರತದಲ್ಲಿ ಅದ್ದೂರಿಯಾಗಿ ನಡೆದಿತ್ತು. ದೇಶದ ಪ್ರಧಾನಿ ಸೇರಿದಂತೆ ಬಾಲಿವುಡ್ ತಾರೆಯರು ಮತ್ತು ಕ್ರಿಕೆಟ್ ಆಟಗಾರರು ಆರತಕ್ಷತೆಗೆ ಸಾಕ್ಷಿಯಾದರು. ಇನ್ನು 2021 ರ ಜನವರಿ12 ಕ್ಕೆ ಅನುಷ್ಕಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅಪ್ಪನಾದ ಭಾರತ ಕ್ರಿಕೆಟ್ ತಂಡನ ನಾಯಕನಿಗೆ ಅಭಿಮಾನಿಗಳು ಶುಭವನ್ನು ಕೋರಿದ್ದರು. ಸದ್ಯ ಇವರ ಮಗುವಿಗೆ 2 ತಿಂಗಳಾಗಿದ್ದು, ಕೆಲವು ದಿನಗಳ ಹಿಂದೆ ಮಗುವಿನ ಪಾದಗಳ ಫೋಟೋವನ್ನು ವಿರಾಟ್ ಕೊಹ್ಲಿ ಸಹೋದರ ಹಂಚಿಕೊಂಡಿದ್ದರು.
ಇದನ್ನೂ ಓದಿ
ಮಾಲೂರಿನಲ್ಲಿ ‘ಸಲಗ ಕಪ್’ ಹವಾ: ಅಭಿಮಾನಿಗಳೊಟ್ಟಿಗೆ ಕ್ರಿಕೆಟ್ ಆಡಿದ ದುನಿಯಾ ವಿಜಿ!
ಆಟಗಾರರಿಗೆ ಕೊರೊನಾ ಸೋಂಕು; ಪಾಕಿಸ್ತಾನ ಸೂಪರ್ ಲೀಗ್ ತಾತ್ಕಾಲಿಕ ಸ್ಥಗಿತ