ಬಯೋ ಬಬಲ್ ನಿಯಮ ಮುರಿದು ಬೇಗ ಮನೆಗೆ ಬಾ.. ‘ಸರಣಿ ಪುರುಷೋತ್ತಮ’ ಅಶ್ವಿನ್​ ಪತ್ನಿ ತನ್ನ ಪತಿರಾಯನ ಮುಂದೆ ಈ ರೀತಿಯ ಮನವಿ ಇಟ್ಟರಲ್ಲಾ

ಅಶ್ವಿನ್ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ಸ್ವೀಕರಿಸಿದ ಚಿತ್ರವನ್ನು ಹಂಚಿಕೊಂಡ ಪ್ರೀತಿ, ಹೃದಯದ ಎಮೋಜಿಯನ್ನು ಬಳಸಿ, ಬಯೋ-ಬಬಲ್ ನಿಯಮವನ್ನು ಮುರಿದು ಮನೆಗೆ ಮರಳುವಂತೆ ತನ್ನ ಪತಿರಾಯನಿಗೆ ವಿನಂತಿಸಿದ್ದಾರೆ

ಬಯೋ ಬಬಲ್ ನಿಯಮ ಮುರಿದು ಬೇಗ ಮನೆಗೆ ಬಾ.. ‘ಸರಣಿ ಪುರುಷೋತ್ತಮ’ ಅಶ್ವಿನ್​ ಪತ್ನಿ ತನ್ನ ಪತಿರಾಯನ ಮುಂದೆ ಈ ರೀತಿಯ ಮನವಿ ಇಟ್ಟರಲ್ಲಾ
ಪತ್ನಿ ಪ್ರೀತಿ ಮತ್ತು ಮಕ್ಕಳೊಂದಿಗೆ ಅಶ್ವಿನ್​
Follow us
ಪೃಥ್ವಿಶಂಕರ
|

Updated on:Mar 08, 2021 | 3:15 PM

ನಾಲ್ಕನೇ ಟೆಸ್ಟ್‌ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು ಸೋಲಿಸಿ ಸರಣಿಯನ್ನು 3-1 ರಿಂದ ಗೆದ್ದುಕೊಂಡಿದ್ದರಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಟೀಂ ಇಂಡಿಯಾ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೇರಲು ಸಹಕರಿಸಿದ ಅಶ್ವಿನ್ ಅವರಿಗೆ, ಪತ್ನಿ ಪ್ರೀತಿ ತಮ್ಮ ಪತಿಗೆ ಟ್ವಿಟರ್​ನಲ್ಲಿ ಮನವಿಯೊಂದನ್ನ ಸಲ್ಲಿಸಿದ್ದಾರೆ. ಅಶ್ವಿನ್ ಪ್ಲೇಯರ್ ಆಫ್ ದಿ ಸೀರೀಸ್ ಪ್ರಶಸ್ತಿಯನ್ನು ಸ್ವೀಕರಿಸಿದ ಚಿತ್ರವನ್ನು ಹಂಚಿಕೊಂಡ ಪ್ರೀತಿ, ಹೃದಯದ ಎಮೋಜಿಯನ್ನು ಬಳಸಿ, ಬಯೋ-ಬಬಲ್ ನಿಯಮವನ್ನು ಮುರಿದು ಮನೆಗೆ ಮರಳುವಂತೆ ತನ್ನ ಪತಿರಾಯನಿಗೆ ವಿನಂತಿಸಿದ್ದಾರೆ.

ಬಯೋ-ಬಬಲ್ ಬಗ್ಗೆ ಅಶ್ವಿನ್​ ಮೆಚ್ಚುಗೆ ಅಶ್ವಿನ್​ ಪತ್ನಿಯದು ಒಂದು ರೀತಿಯದ್ದಾರೆ, ಆರ್​ ಅಶ್ವಿನ್​ ಮಾತ್ರ ಬಯೋಬಬಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾರೂ ಕೂಡ ಭಾರತೀಯ ತಂಡದ ಬಯೋಬಬಲ್‌ ನಿಯಮಗಳಿಂದ ಆಚೆ ಹೋಗುವ ಪ್ರಯತ್ನವನ್ನು ಮಾಡಲಿಲ್ಲ. ಕಳೆದ 8 ತಿಂಗಳು ನಮಗೆ ಬಹಳ ಕಠಿಣವಾಗಿತ್ತು. ತಂಡದಲ್ಲಿ ನಾವು ಸೃಷ್ಟಿಸಿಕೊಂಡಿರುವ ಈ ಬಾಂಧವ್ಯವನ್ನು ಈ ಹಿಂದೆ ಇಷ್ಟು ಚೆನ್ನಾಗಿ ಅನುಭವಿಸಲಿರಲಿಲ್ಲ. ಎಲ್ಲರನ್ನೂ ಅರ್ಥ ಮಾಡಿಕೊಳ್ಳಲು ಬಯೋಬಬಲ್ ಬಹಳ ಸಹಕಾರಿಯಾಯಿತು. ಬಯೋಬಬಲ್ ವಾತಾವರಣವನ್ನು ನಾವು ತುಂಬಾ ಚೆನ್ನಾಗಿ ಅನುಭವಿಸಿದ್ದೇವೆ. ನನ್ನ ತಂಡದ ಎಲ್ಲಾ ಸದಸ್ಯರೊಂದಿಗೆ ಇಷ್ಟು ಸಮಯವನ್ನು ಹಾಗೂ ಇಷ್ಟು ಉತ್ತಮವಾದ ಬಾಂಧವ್ಯವನ್ನು ಹೊಂದುತ್ತೇನೆ ಎಂದು ಭಾವಿಸಿರಲಿಲ್ಲ” ಎಂದಿದ್ದಾರೆ ಆರ್ ಅಶ್ವಿನ್.

ತಂಡದ ಸದಸ್ಯಗೆ ಉಂಟಾದ ಸಮಸ್ಯೆಗಳ ಬಗ್ಗೆ ಅನೇಕ ಬಾರಿ ಆಡಳಿತ ಮಂಡಳಿ ಮಧ್ಯಪ್ರವೇಶ ಮಾಡಿ ಪರಿಹರಿಸಲು ಪ್ರಯತ್ನಿಸಿದೆ. ಆಟಗಾರರಿಗೆ ಅನುಕೂಲವಾಗುವಂತೆ ಯಾವುದು ಉತ್ತಮ ನಿರ್ಧಾರ ಎಂಬುದನ್ನು ನಿರ್ಧರಿಸಿ ತಂಡದ ಬೆಂಬಲಕ್ಕೆ ನಿಂತು ಆಹಾರವೂ ಸೇರಿದಂತೆ ಇತರ ಸಮಸ್ಯೆಗಳನ್ನು ಪರಿಹರಿಸಿದೆ. ಇವೆಲ್ಲಾ ತುಂಬಾ ಸಣ್ಣ ಸಣ್ಣ ವಿಚಾರಗಳು ಎಂದಿದ್ದಾರೆ ಆರ್ ಅಶ್ವಿನ್. ಇನ್ನು ಇಷ್ಟೆಲ್ಲಾ ಸವಾಲುಗಳ ಮಧ್ಯೆಯೂ ಬಯೋ ಬಬಲ್‌ ವಾತಾವರಣವನ್ನು ಅನುಭವಿಸಿದ್ದೇವೆ ಎಂದಿದ್ದಾರೆ. ಅದಕ್ಕೆ ತಂಡದ ಆಟಗಾರರ ಮಧ್ಯೆ ಇರುವ ಬಂಧ ಅತ್ಯಂತ ಸಹಕಾರಿಯಾಯಿತು ಎಂದು ಆರ್ ಅಶ್ವಿನ್ ಹೇಳಿಕೊಂಡಿದ್ದಾರೆ.

ಆರ್​ ಅಶ್ವಿನ್, ಪತ್ನಿ ಪ್ರೀತಿ

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ ಅಶ್ವಿನ್.. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ ಅಶ್ವಿನ್​, 30 ವಿಕೆಟ್ ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಅವರು 30 ವಿಕೆಟ್​ಗಳನ್ನು ಪಡೆದಿದ್ದು, 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ 31 ವಿಕೆಟ್ ಪಡೆದಿದ್ದರು.

ಇಂಗ್ಲೆಂಡ್ ವಿರುದ್ಧ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆರ್.ಅಶ್ವಿನ್ ಅವರ ಕರಾರುವಕ್ ದಾಳಿಗೆ ನಲುಗಿದ ಆಂಗ್ಲರು ಇನ್ನಿಂಗ್ಸ್ ಹಾಗೂ 25 ರನ್​ಗಳಿಂದ ಸೋಲು ಕಂಡಿದ್ದು, ಭಾರತ ಲಂಡನ್​ನಲ್ಲಿ ನಡೆಯುವ ಐಸಿಸಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್​ಗೆ ಪ್ರವೇಶ ಪಡೆದಿದೆ.

ashwin-siraj 2ನೇ ಟೆಸ್ಟ್‌ನಲ್ಲಿ ಅಶ್ವಿನ್​ ಶತಕ.. ಇಂಗ್ಲೆಂಡ್‌ ವಿರುದ್ಧ ಎರಡನೇ ಟೆಸ್ಟ್‌ ಮೂರನೇ ದಿನ ವೃತ್ತಿ ಜೀವನದ ಐದನೇ ಟೆಸ್ಟ್ ಶತಕ ಸಿಡಿಸಿದ ಆರ್‌ ಅಶ್ವಿನ್‌ ವಿಶಿಷ್ಠ ದಾಖಲೆಯೊಂದನ್ನು ಮಾಡಿದರು. ಭಾರತ ದ್ವಿತೀಯ ಇನಿಂಗ್ಸ್‌ನಲ್ಲಿ 106 ರನ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡಿದ್ದ ವೇಳೆ ಕ್ರೀಸ್‌ಗೆ ಬಂದ ಆರ್‌ ಅಶ್ವಿನ್‌ ಮುರಿಯದ 7ನೇ ವಿಕೆಟ್‌ಗೆ ನಾಯಕ ವಿರಾಟ್‌ ಕೊಹ್ಲಿ ಜತೆ 96 ರನ್‌ ಜತೆಯಾಟವಾಡುವ ಮೂಲಕ ಭಾರತ 400 ರನ್‌ಗಳ ಮುನ್ನಡೆ ಸಾಧಿಸುವಲ್ಲಿ ನೆರವಾಗಿದ್ದರು.

Ravichandran Ashwin

ಶತಕ ಬಾರಿಸಿದ ಆರ್​ ಅಶ್ವಿನ್​

ವಿರಾಟ್‌ ಕೊಹ್ಲಿ 62 ರನ್‌ ಗಳಿಸಿ ಔಟಾದ ಬಳಿಕ ತಂಡದ ಜವಾಬ್ದಾರಿ ಹೊತ್ತ ಆರ್ ಅಶ್ವಿನ್‌ ಸಣ್ಣ-ಸಣ್ಣ ಜತೆಯಾಟವಾಡುವ ಮೂಲಕ ಇಂಗ್ಲೆಂಡ್‌ ತಂಡಕ್ಕೆ ಬೃಹತ್‌ ಮೊತ್ತದ ಗುರಿ ನೀಡುವಲ್ಲಿ ಭಾರತಕ್ಕೆ ನೆರವಾದರು. ಇಂಗ್ಲೆಂಡ್‌ ಬೌಲರ್‌ಗಳನ್ನು ಬಹಳ ಎಚ್ಚರಿಕೆಯಿಂದ ಎದುರಿಸಿದ ಆರ್‌ ಅಶ್ವಿನ್‌ 148 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 14 ಬೌಂಡರಿಗಳ ನೆರವಿನಿಂದ 106 ರನ್‌ ಗಳಿಸಿದರು.

Chennai test

ರವಿಚಂದ್ರನ್ ಅಶ್ವಿನ್

ರವಿಚಂದ್ರನ್ ಅಶ್ವಿನ್ ಮತ್ತು ಹನುಮ ವಿಹಾರಿ

ಇದನ್ನೂ ಓದಿ:India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ

Published On - 3:09 pm, Mon, 8 March 21

‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು