India vs England 4th Test Day 3: ಭರ್ಜರಿ ಜಯದೊಂದಿಗೆ ಡಬ್ಲ್ಯೂಟಿಸಿ ಫೈನಲ್ ಪ್ರವೇಶಿಸಿದ ಭಾರತ
India vs England 4th Test Live Updates: ಒಂದು ಪಕ್ಷ ಭಾರತದ ಸ್ಪಿನ್ನರ್ಗಳು ಮೂರನೇ ಟೆಸ್ಟ್ನಲ್ಲಿ ತೋರಿದ ಪ್ರದರ್ಶನವನ್ನು ಪುನರಾವರ್ತಿಸಿದರೆ, ಈ ಟೆಸ್ಟ್ ಇಂದೇ ಕೊನೆಗೊಂಡರೂ ಆಶರ್ಯಪಡಬೇಕಿಲ್ಲ.
India vs England 4th Test Day 3 Live | ಅಹಮದಾಬಾದ್: ಭಾರತದ ಹೊಸ ಬೌಲಿಂಗ್ ಸೆನ್ಸೇಷನ್ ಅಕ್ಷರ್ ಪಟೇಲ್ ಮತ್ತು ಅನುಭವಿ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ ತಲಾ 5 ವಿಕಟ್ ಪಡೆಯುವ ಸಾಧನೆ ಮಾಡಿ ಭಾರತಕ್ಕೆ ಸರಣಿ ಗೆಲುವು ಕೊಡಿಸುವುದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ನಲ್ಲಿ ಆಡುವ ಅರ್ಹತೆಯನ್ನೂ ದೊರಕಿಸಿದ್ದಾರೆ. ಇಂದು ಮೊಟೆರಾದ ನರೇಂದ್ರ ಮೋದಿ ಮೈದಾನದಲ್ಲಿ ಕೊನೆಗೊಂಡ ಪಂದ್ಯದಲ್ಲಿ ಭಾರತ ಪ್ರವಾಸಿಗರನ್ನುಇನ್ನೂ 2 ದಿನಗಳ ಆಟ ಬಾಕಿಯಿರುವಂತೆಯೇ ಇನ್ನಿಂಗ್ಸ್ ಮತ್ತು 25 ರನ್ಗಳಿಂದ ಬಗ್ಗು ಬಡಿದು ಸರಣಿಯನ್ನು 3-1 ಅಂತರದಿಂದ ಗೆದ್ದಿತು.
ಭಾರತ ಮತ್ತೊಮ್ಮೆ ಬ್ಯಾಟ್ ಮಾಡುವಂತಾಗಲು 161 ರನ್ ಗಳಿಸಬೇಕಿದ್ದ ಇಂಗ್ಲೆಂಡ್ 135 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಮಧ್ಯಮ ಕ್ರಮಾಂಕದ ಆಟಗಾರ ಡೇನಿಯಲ್ ಲಾರೆನ್ಸ್ ಮಾತ್ರ ಭಾರತದ ಸ್ಪಿನ್ನರ್ಗಳನ್ನು ವಿಶ್ವಾಸದಿಂದ ಎದುರಿಸಿ ಅರ್ಧ ಶತಕ ಬಾರಿಸಿದರು.
ಅಕ್ಷರ್ 48 ರನ್ ನೀಡಿ 5 ವಿಕೆಟ್ ಪಡೆದರೆ, ಅಶ್ವಿನ್ 47 ರನ್ಗಳಿಗೆ 5 ವಿಕೆಟ್ ಪಡೆದರು.
ಇದಕ್ಕೂ ಮೊದಲು, ಭಾರತ 365 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 160 ರನ್ಗಳ ಮುನ್ನಡೆ ಸಾಧಿಸಿತು. ತಮ್ಮ ವೃತ್ತಿಬದುಕಿನ ಮೊದಲ ಶತಕ ದಾಖಲಿಸುವ ಅಂಚಿನ್ನಲ್ಲಿದ್ದ ವಾಷಿಂಗ್ಟನ್ ಸುಂದರ್ (ಅಜೇಯ 96) ಜೊತೆಗಾರರ ವಿವೇಚನೆರಹಿತ ಬ್ಯಾಟಿಂಗ್ನಿಂದಾಗಿ ಅದನ್ನುಗಳಿಸದೆ ಹೋದರು.
ನುರಿತ ಬ್ಯಾಟ್ಸ್ಮನ್ನಂತೆ ಆಡುವ ಸುಂದರ್ಗೆ ಇಂದು ವೃತ್ತಿಬದುಕಿನ ಮೊದಲ ಶತಕ ಬಾರಿಸುವ ಸುವರ್ಣಾವಕಾಶವಿತ್ತು. ಆದರೆ ಇಶಾಂತ್ ಶರ್ಮ ಮತ್ತು ಮೊಹಮ್ಮದ್ ಸಿರಾಜ್, ಬೆನ್ ಸ್ಟೋಕ್ಸ್ ಅವರ ಎಸೆತಗಳನ್ನು ಬ್ಲಾಕ್ ಮಾಡುವ ಬದಲು ತಾವು ಬ್ಯಾಟ್ ಮಾಡಬಲ್ಲೆವು ಎನ್ನುವುದನ್ನು ಸಾಬೀತು ಮಾಡುವ ಪ್ರಯತ್ನ ಮಾಡಿದರು. ಅವರಿಂದ ಅಂಥ ಧೋರಣೆಯನ್ನು ನಿರೀಕ್ಷಿಸಿದ್ದ ಬೆನ್ ನೇರವಾದ ಎಸೆತಗಳನ್ನು ಬೌಲ್ ಮಾಡಿ ಇಶಾಂತ್ರನ್ನು ಎಲ್ ಬಿ ಡಬ್ಲ್ಯು ಮತ್ತು ಸಿರಾಜ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅವರ ಬ್ಯಾಟಿಂಗ್ ವೈಖರಿಯಿಂದ ಶತಕ ತಪ್ಪಿದ್ದಕ್ಕೆ ಹತಾಶರಾದ ಸುಂದರ್ ತೀವ್ರ ಸ್ವರೂಪದ ನಿರಾಶಾಭಾವದೊಂದಿಗೆ ಪೆವಿಯನ್ನತ್ತ ಮರಳಿದರು.
A moment to cherish for #TeamIndia ????
ICC World Test Championship Final – Here we come ???@Paytm #INDvENG pic.twitter.com/BzRL9l1iMH
— BCCI (@BCCI) March 6, 2021
Published On - 3:57 pm, Sat, 6 March 21