ಕೊಹ್ಲಿ ನಾಯಕತ್ವದ ಕುರಿತು ಅಸಮಾಧಾನ ಹೊರಹಾಕಿದ ಕ್ರಿಕೆಟ್ ಪ್ರೇಮಿಗಳು!

. ಕೊಹ್ಲಿಯ ನಂತರ ಉತ್ತಮ ಪ್ರದರ್ಶನ ತೋರುತ್ತಿದ್ದ ಕರ್ನಾಟಕದ ಕೆ.ಎಲ್​ರಾಹುಲ್​ (66 ಎಸೆತದಲ್ಲಿ 76 ರನ್) ಸಹ ಔಟ್​ ಆಗಿದ್ದು ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಯಿತು.

ಕೊಹ್ಲಿ ನಾಯಕತ್ವದ ಕುರಿತು ಅಸಮಾಧಾನ ಹೊರಹಾಕಿದ ಕ್ರಿಕೆಟ್ ಪ್ರೇಮಿಗಳು!
ವಿರಾಟ್ ಕೊಹ್ಲಿ
Edited By:

Updated on: Nov 29, 2020 | 5:39 PM

ಆಸ್ಟ್ರೇಲಿಯಾ – ಭಾರತ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿಯೂ ಭಾರತ ಸೋಲು ಕಂಡಿದ್ದು ಸರಣಿ ಆಸಿಸ್ ಪಾಲಾಗುವುದು ಖಚಿತವಾಗಿದೆ. ಇತ್ತ ಐಪಿಎಲ್​ ಮುಗಿಸಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಆಟಗಾರರಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಿದ್ದ ಭಾರತ ತಂಡದ ಅಭಿಮಾನಿಗಳು ನಿರಾಶರಾಗಿದ್ದಾರೆ. ಸರಣಿಯ ಮೊದಲ ಪಂದ್ಯ ಸೋತಾಗಲೇ ಕೊಹ್ಲಿಯ ನಾಯಕತ್ವದ ಕುರಿತು ಒಂದಷ್ಟು ಜನ ಅಪಸ್ವರ ತೆಗೆದಿದ್ದರು. ಕೊಹ್ಲಿ ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ತೋರಿದರೂ ನಾಯಕನಾಗಿ ತಂಡವನ್ನು ನಡೆಸಲು ಸೂಕ್ತವಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರು.

ಇಂದು ಎರಡನೇ ಪಂದ್ಯದಲ್ಲಿಯೂ ಭಾರತ ಸೋಲು ಕಂಡಿದ್ದರಿಂದ ನಾಯಕತ್ವದ ಬಗೆಗಿನ ಅಸಮಾಧಾನ ಸೋಷಿಯಲ್ ಮೀಡಿಯಾದಲ್ಲಿ ಕೊಂಚ ಬಿಸಿಯಾಗಿದೆ. ಒಂದೆಡೆ ಧೋನಿ ಅಭಿಮಾನಿಗಳು ಸಹ ನಾಯಕತ್ವದ ಕುರಿತು ಬೇಸರ ಹೊರಹಾಕಿದ್ದಾರೆ.

ಸರಣಿಯ ಎರಡು ಪಂದ್ಯಗಳನ್ನು ಸೋಲುವ ಮೂಲಕ ಭಾರತ ಗೆಲುವನ್ನು ಆಸಿಸ್​ಗೆ ಬಿಟ್ಟುಕೊಟ್ಟಿದೆ. ಈಗ ಕೊಹ್ಲಿ ನಾಯಕನ ಪಟ್ಟವನ್ನು ಬಿಟ್ಟುಕೊಡುವ ಸಮಯ ಎಂದು ಕೆಲವರು ಕುಹಕವಾಡಿದ್ದಾರೆ.

ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿದ್ದರೂ ಗೆಲುವಿನ ಹಾದಿ ಕಠಿಣವಾಯಿತು. ಇದೀಗ ವಿರಾಟ್​ ಕೊಹ್ಲಿ ಮತ್ತು ಕೆ.ಎಲ್​.ರಾಹುಲ್​ ಇಬ್ಬರ ಹೆಸರು ಟ್ವಿಟರ್​ನಲ್ಲಿ ಟ್ರೆಂಡ್ ಕೂಡ ಆಗಿದೆ.