ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಮೇ 7 ರ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಕೋವಿಡ್ -19 ಪರಿಹಾರಕ್ಕಾಗಿ ನಿಧಿ ಸಂಗ್ರಹವನ್ನು ಪ್ರಾರಂಭಿಸಿದ್ದೇವೆ ಎಂದು ಘೋಷಿಸಿದ್ದರು. ಸ್ವತಃ 2 ಕೋಟಿ ರೂ. ದೇಣಿಗೆ ನೀಡಿದ ನಂತರ, ಅವರು ತಮ್ಮ ಅಭಿಮಾನಿಗಳಿಗೆ ಅದೇ ರೀತಿ ದೇಣಿಗೆ ನೀಡಲು ಮತ್ತು ಕೊರೊನಾ ವೈರಸ್ ವಿರುದ್ಧ ಹೋರಾಡಲು ಸಹಾಯ ಮಾಡುವಂತೆ ಒತ್ತಾಯಿಸಿದರು. ಕೊಹ್ಲಿ ಹಾಗೂ ಅನುಷ್ಕಾ ಅವರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಇಂದು ಒಂದೇ 3.6 ಕೋಟಿಗೂ ಹೆಚ್ಚಿನ ದೇಣಿಗೆ ಸಂಗ್ರಹವಾಗಿದೆ. ಈ ಕಾರಣಕ್ಕೆ ಸಹಾಯ ಮಾಡಿದ ಅಭಿಮಾನಿಗಳಿಗೆ ಅನುಷ್ಕಾ ಮತ್ತು ವಿರಾಟ್ ಧನ್ಯವಾದ ಅರ್ಪಿಸಿದರು.
3.6 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ
ಮೇ 8, ಶನಿವಾರ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು 3.6 ಕೋಟಿಗೂ ಹೆಚ್ಚು ಹಣ ಸಂಗ್ರಹವಾಗಿದೆ ಎಂದು ಅಭಿಮಾನಿಗಳಿಗೆ ಮಾಹಿತಿ ನೀಡಿದರು ಮತ್ತು ಕೊಡುಗೆ ನೀಡಿದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಇಲ್ಲಿಯವರೆಗೆ ದೇಣಿಗೆ ನೀಡಿದ ಎಲ್ಲರಿಗೂ ಕೃತಜ್ಞತೆ. ನಿಮ್ಮ ಕೊಡುಗೆಗೆ ಧನ್ಯವಾದಗಳು. ನಾವು ಅರ್ಧ ದಾರಿಯನ್ನು ದಾಟಿದ್ದೇವೆ, ಮುಂದುವರಿಯೋಣ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.
Grateful to everyone who has donated so far. Thank you for your contribution ?. We have crossed the half way mark, let’s keep going. ??#InThisTogether #ActNow #OxygenForEveryone #TogetherWeCan #SocialForGood@actgrants @ketto pic.twitter.com/YUvGQOSupP
— Anushka Sharma (@AnushkaSharma) May 8, 2021
3.6 crores in less than 24 hours! Overwhelmed with the response. Let’s keep fighting to meet our target and help the country. Thank you.?#InThisTogether #ActNow #OxygenForEveryone #TogetherWeCan #SocialForGood@ketto @actgrants pic.twitter.com/ZCyAlrgOXj
— Virat Kohli (@imVkohli) May 8, 2021
ಎರಡು ಕೋಟಿ ರೂಪಾಯಿ ದೇಣಿಗೆ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿನ್ನೆ ಎರಡು ಕೋಟಿ ರೂಪಾಯಿ ದೇಣಿಗೆ ನೀಡಿವುದರ ಜೊತೆಗೆ ಕೋವಿಡ್ -19 ಪರಿಹಾರಕ್ಕಾಗಿ ಹಣವನ್ನು ಸಂಗ್ರಹಿಸಲು ಅನುಷ್ಕಾ ಮತ್ತು ನಾನು (ವಿರಾಟ್) ಕೆಟ್ಟೊದಲ್ಲಿ ಅಭಿಯಾನವನ್ನು (campaign on Ketto) ಪ್ರಾರಂಭಿಸಿದ್ದೇವೆ ಮತ್ತು ನಿಮ್ಮ ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ. ಜೀವ ಉಳಿಸಲು ಯಾವುದೇ ಪ್ರಮಾಣವು ತುಂಬಾ ಚಿಕ್ಕದಲ್ಲ. ಈ ಹೋರಾಟದಲ್ಲಿ ನಿಮ್ಮ ಸಹಾಯ ಅತ್ಯಗತ್ಯ. ನಮ್ಮ ಈ ಅಭಿಯಾನದಲ್ಲಿ ನೀವು ಕೈಜೋಡಿಸಿ. ನಮ್ಮ ದೇಶವನ್ನು ಸುರಕ್ಷಿತವಾಗಿ ಮತ್ತು ಸದೃಢವಾಗಿಡಲು ನಮ್ಮ ಕೈಲಾದದ್ದನ್ನು ಮಾಡೋಣ ಎಂದು ವಿರಾಟ್ ಕೊಹ್ಲಿ ಸಾರ್ವಜನಿಕರಿಗೆ ಮನವಿ ಮಾಡಿದ್ದರು.
ನಿಧಿಸಂಗ್ರಹವು ಏಳು ದಿನಗಳವರೆಗೆ ನಡೆಯಲ್ಲಿದ್ದು ಸಂಗ್ರಹಿಸಿದ ದೇಣಿಗೆಯನ್ನು ಸಾಂಕ್ರಾಮಿಕ ಸಮಯದಲ್ಲಿ ಆಮ್ಲಜನಕ, ವೈದ್ಯಕೀಯ ಮಾನವಶಕ್ತಿ, ವ್ಯಾಕ್ಸಿನೇಷನ್ ಜಾಗೃತಿ ಮತ್ತು ಟೆಲಿಮೆಡಿಸಿನ್ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸಿಟಿ ಅನುದಾನಕ್ಕೆ ನೀಡಲಾಗುವುದು. ಭಾರತವು ಪ್ರಸ್ತುತ ಕೋವಿಡ್ -19 ರ ಎರಡನೇ ಅಲೆಯ ಮಧ್ಯದಲ್ಲಿದೆ. ದೇಶದಲ್ಲಿ ಶುಕ್ರವಾರ 4.14 ಲಕ್ಷ ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ.