IPL 2021: ಆರ್ಸಿಬಿ ತಾಕತ್ತು ಇಡೀ ಪ್ರಪಂಚಕ್ಕೆ ಗೊತ್ತು; ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ನಂ.1! ಸಾಕ್ಷಿ ಸಮೇತ ಸಾಬೀತು
IPL 2021: ಐಪಿಎಲ್ ನಡೆಯುವ ಸಮಯದಲ್ಲಿ ಪ್ರಪಂಚದ ಬೇರೆ ಬೇರೆ ಪ್ರಸಿದ್ಧ ಕ್ರೀಡಾ ತಂಡಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ಇದರಲ್ಲಿ ಆರ್ಸಿಬಿ ನಂ.1 ಸ್ಥಾನ ಪಡೆದುಕೊಂಡಿದೆ.
ಈ ಸೀಸನ್ ಆರ್ಸಿಬಿ ಪಾಲಿಗೆ ಅಭೂತಪೂರ್ವ ಸೀಸನ್ ಆಗಿತ್ತು. ಈ ಹಿಂದೆ ಯಾವ ಸೀಸನ್ನಲ್ಲೂ ಸಿಗದ ಯಶಸ್ಸು ಕೊಹ್ಲಿ ಪಡೆಗೆ ಸಿಕಿತ್ತು. ಆರಂಭದಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲೂ ಗೆಲುವು ದಾಖಲಿಸಿದ ಆರ್ಸಿಬಿ, ಈ ಸಲ ಕಪ್ ಗೆಲ್ಲುವ ಭರಸವೆಯನ್ನೂ ಮೂಡಿಸಿತ್ತು. ಆಡಿದ ಏಳು ಪಂದ್ಯಗಳಲ್ಲಿ ಐದರಲ್ಲಿ ಗೆಲುವು ದಾಖಲಿಸಿದ್ದ ಆರ್ಸಿಬಿ ಭರ್ಜರಿ ಫಾರ್ಮ್ನಲ್ಲಿತ್ತು. ಪ್ಲೇ ಆಫ್ ದೃಷ್ಟಿಯಿಂದ ಆರ್ಸಿಬಿ ಸೇಫ್ ಆಗಿತ್ತು. ಆದ್ರೆ ಅಷ್ಟರಲ್ಲೇ ಐಪಿಎಲ್ಗೆ ಅಪ್ಪಳಿಸಿದ ಕೊರೊನಾ, ಕೊಹ್ಲಿ ಪಡೆ ಮತ್ತು ಆರ್ಸಿಬಿ ಅಭಿಮಾನಿಗಳ ಕನಸಿಗೆ ತಣ್ಣೀರೆರಚಿದೆ.
ಸಾಕ್ಷಿ ಸಮೇತ ಸಾಭೀತಾಗಿದೆ ಈ ಸಲ ಕಪ್ ನಮ್ದೇ ಅನ್ನೋ ಭರವಸೆಯಲ್ಲಿದ್ದ ಆರ್ಸಿಬಿ ಅಭಿಮಾನಿಗಳಿಗೆ ಇನ್ನಿಲ್ಲದ ಬೇಸರವಾಗಿದೆ. ಈ ಸಲ ಕಪ್ ಮಿಸ್ಸಾಯ್ತು.. ಆರ್ಸಿಬಿ ಗೆಲುವಿನ ನಾಗಾಲೋಟ ಮುಂದುವರಿಸಿರುವಾಗಲೇ ಐಪಿಎಲ್ ಮುಂದೂಡಿದ್ದು ಆರ್ಸಿಬಿ ಅಭಿಮಾನಿಗಳಿಗೆ ಬೇಸರ ತರಿಸಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ಅಭಿಮಾನಿಗಳು ನೋವು ತೋಡಿಕೊಳ್ಳುತ್ತಿದ್ದಾರೆ. ಆದರೆ ಇಂತಹ ಸಮಯದಲ್ಲಿ ಆರ್ಸಿಬಿ ಅಭಿಮಾನಿಗಳು ಸಂತಸ ಪಡುವ ವಿಚಾರವೊಂದು ಈಗ ಹೊರಬಿದ್ದಿದೆ. ಆರ್ಸಿಬಿ ತಂಡ ಇಡೀ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂದ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಈಗ ಅದು ಸಾಕ್ಷಿ ಸಮೇತ ಸಾಭೀತಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ನಂ.1! ಐಪಿಎಲ್ ಆರಂಭವಾದ ದಿನದಿಂದ ಅದು ರದ್ದಾಗುವವರೆಗೂ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದ ಹಾಗೂ ಉಳಿದ ತಂಡಗಳಿಗೆ ಹೋಲಿಸಿದಂತೆ ಆರ್ಸಿಬಿ ಇತರ ತಂಡಗಳನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಪೋಸ್ಟ್‌ಗಳಿಗೆ 150.40 ಮಿಲಿಯನ್ ಎಂಗೇಜ್ಮೆಂಟ್ ಸಿಕ್ಕಿದೆ. ಜೊತೆಗೆ 149.94 ಮಿಲಿಯನ್ ಲೈಕ್ಸ್, 452.2 ಸಾವಿರ ಕಾಮೆಂಟ್ಸ್ ಬಂದಿವೆ. ಆರ್ಸಿಬಿ ನಂತರದ ಸ್ಥಾನದಲ್ಲಿರುವ ಚೆನ್ನೈ ಒಟ್ಟಾರೆ 126.09 ಮಿಲಿಯನ್ ಎಂಗೇಜ್ಮೆಂಟ್ಸ್ ಇವೆ.
During #IPL2021 (Apr 9 – May 3) #RCB achieved special milestones on digital. 1) No. 1 IPL team on social media (total engagement across platforms) 2) No. 1 Sports team globally on Instagram (total engagement) 3) No. 1 IPL team on YouTube (total engagement) We Played Bold! pic.twitter.com/9zukq6gRKF
— Ajith Ramamurthy (@Ajith_tweets) May 7, 2021
ವಿಶ್ವದಲ್ಲಿ ಆರ್ಸಿಬಿ ಟಾಪರ್ ಐಪಿಎಲ್ ನಡೆಯುವ ಸಮಯದಲ್ಲಿ ಪ್ರಪಂಚದ ಬೇರೆ ಬೇರೆ ಪ್ರಸಿದ್ಧ ಕ್ರೀಡಾ ತಂಡಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿರುವ ಅಂಕಿ-ಅಂಶಗಳನ್ನು ಗಮನಿಸಿದರೆ ಇದರಲ್ಲಿ ಆರ್ಸಿಬಿ ನಂ.1 ಸ್ಥಾನ ಪಡೆದುಕೊಂಡಿದೆ. ಈ ಬಾರಿಯ ಐಪಿಎಲ್ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ವಿಶ್ವದ ಕ್ರೀಡಾ ತಂಡಗಳ ಪಟ್ಟಿಯನ್ನು ಗಮನಿಸಿದರೆ ಅದರಲ್ಲಿ ಆರ್ಸಿಬಿ ಮೊದಲ ಸ್ಥಾನದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿ, ಬಾರ್ಸಿಲೋನಾ ಎಫ್‌ಸಿ ಮೂರನೇ ಸ್ಥಾನದಲ್ಲಿ ಮತ್ತು ಮುಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿದೆ.
ಯೂಟ್ಯೂಬ್‌ನಲ್ಲೂ ಅಗ್ರ ಸ್ಥಾನ ಐಪಿಎಲ್ ವೇಳೆ ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ಸಾರಿ ವೀಕ್ಷಣೆಗೆ ಒಳಪಟ್ಟ ಐಪಿಎಲ್ ತಂಡಗಳ ಸಾಲಿನಲ್ಲಿಯೂ ಆರ್‌ಸಿಬಿ ಮೊದಲ ಸ್ಥಾನದಲ್ಲಿದೆ. ಆರ್ಸಿಬಿಗೆ 2.6 ಮಿಲಿಯನ್ ಸಬ್ಸ್‌ಕ್ರೈಬರ್ ಇದ್ದರೆ, 93 ವಿಡಿಯೋಗಳಿಗೆ 37.7 ಸಾವಿರ ಎಂಗೇಜ್ಮೆಂಟ್ ಲಭಿಸಿವೆ. ಇನ್ನು ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ (1.8 ಸಬ್ಸ್‌ಕ್ರೈಬರ್), 61 ವಿಡಿಯೋಗಳಿಗೆ 25.6 ಸಾವಿರ ಎಂಗೇಜ್ಮೆಂಟ್ ಲಭಿಸಿದೆ. ಹಾಗೆಯೇ ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನದಲ್ಲಿದೆ.