ಬ್ಯಾಟಿಂಗ್ ಸಾಮ್ರಾಟ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇವತ್ತು ತಮ್ಮ 31ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಪ್ರತೀ ಬಾರಿ ಡಿಫರೆಂಟ್ ಆಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ವಿರಾಟ್ ಈ ಬಾರಿ ಪತ್ನಿ ಅನುಷ್ಕಾ ಜೊತೆ ಭೂತಾನ್ಗೆ ತೆರಳಿದ್ದಾರೆ.
2017ರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್ನಲ್ಲಿ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ರು. ಕಳೆದ ವರ್ಷ ವಿರಾಟ್ ಕೊಹ್ಲಿ ಹರಿದ್ವಾರದಲ್ಲಿರೋ ಅನಂತ್ ಧಾಮ ಆತ್ಮಬೋದ ಆಶ್ರಮದಲ್ಲಿ, ಪರಮ ಶಿವನಿಗೆ ಪೂಜೆ ಸಲ್ಲಿಸೋ ಮೂಲಕ ತಮ್ಮ ಹುಟ್ಟು ಹಬ್ಬವನ್ನ ಆಚರಿಸಿಕೊಂಡಿದ್ರು. ಹೀಗೆ ಪ್ರತಿ ಬಾರಿಯೂ ಡಿಫರೆಂಟ್ ಆಗಿ ಬರ್ತ್ಡೇ ಸೆಲಬ್ರೇಷನ್ ಮಾಡೋ ವಿರಾಟ್ ಈ ವರ್ಷದ ಹುಟ್ಟುಹಬ್ಬವನ್ನ ಭೂತಾನ್ನಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
ಇಂದಿಗೆ 31ನೇ ವಸಂತಕ್ಕೆ ಕಾಲಿಟ್ಟಿರುವ ವಿರಾಟ್ ಈಗಲೇ ದಿಗ್ಗಜ, ಕ್ರಿಕೆಟಿಗ ಅಂತಾ ಕರೆಸಿಕೊಂಡಿದ್ದಾರೆ. 2008ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕೊಹ್ಲಿ ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. ಆವತ್ತಿಗ ಸಚಿನ್ ತೆಂಡುಲ್ಕರ್ ದಾಖಲೆ ಬರೆಯೋದೇ ನನ್ನ ಜಾಯಮಾನ ಅಂತಾ ಘರ್ಜಿಸಿದ್ರೆ, ಇವತ್ತಿಗೆ ವಿರಾಟ್ ದಾಖಲೆ ಮುರಿಯೋದೇ ನನ್ನ ಜಾಯಮಾನ ಅಂತಾ ರನ್ ವೀರನಾಗಿ ಹೋರಹೊಮ್ಮಿದ್ದಾನೆ.