ಟೀಮ್ ಇಂಡಿಯಾ (Team India) ಆಟಗಾರರು ಇಂಗ್ಲೆಂಡ್ (India vs England) ಪ್ರವಾಸದಲ್ಲಿದ್ದಾರೆ. ಜುಲೈ 1 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಭಾರತೀಯ ಆಟಗಾರರು ಭರ್ಜರಿ ಸಿದ್ದತೆಯಲ್ಲಿದ್ದಾರೆ. ಇತ್ತ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ (Virat Kohli) ಕೂಡ ಹೆಚ್ಚಿನ ಸಮಯವನ್ನು ನೆಟ್ಸ್ನಲ್ಲಿ ಕಳೆಯುತ್ತಿದ್ದಾರೆ. ಹೀಗೆ ಕಿಂಗ್ ಕೊಹ್ಲಿ ಅಭ್ಯಾಸ ಮುಗಿಸಿ ಮರಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿರಾಟ್ ಕೊಹ್ಲಿಗೆ ತಿಳಿಯದಂತೆ ಈ ವಿಡಿಯೋವನ್ನು ಆರಂಭದಲ್ಲಿ ಚಿತ್ರೀಕರಿಸಲಾಗಿದ್ದು, ಈ ವಿಡಿಯೋ ತುಣುಕು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರ ಶುಭ್‌ಮಾನ್ ಗಿಲ್ ಜೊತೆ ಅಭ್ಯಾಸ ಮುಗಿಸಿ ಮರಳುತ್ತಿರುವುದು ಕಾಣಬಹುದು. ಅಭ್ಯಾಸ ಅವಧಿಯ ನಂತರ ಮಾತನಾಡುತ್ತಾ ಇಬ್ಬರೂ ಆಟಗಾರರು ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುತ್ತಿದ್ದರು. ಈ ವೇಳೆ ಒಬ್ಬ ಕ್ಯಾಮೆರಾಮ್ಯಾನ್ ಕೂಡ ಅವರನ್ನು ಹಿಂಬಾಲಿಸಿದ್ದಾರೆ. ಆದರೆ ಈ ವಿಚಾರ ಕೊಹ್ಲಿಗೆ ತಿಳಿದಿರಲಿಲ್ಲ.
ಆದರೆ ಇದಕ್ಕಿದ್ದಂತೆ ಯಾರೋ ಹಿಂಬಾಲಿಸುತ್ತಿರುದನ್ನು ಗಮನಿಸಿದ ವಿರಾಟ್ ಕೊಹ್ಲಿ ಖಡಕ್ ಲುಕ್ ನೀಡಿದ್ದರು. ಇದೇ ವೇಳೆ ಆತ ಎಡ್ಜ್‌ಬಾಸ್ಟನ್ ಟ್ವಿಟರ್ ಹ್ಯಾಂಡಲ್ ರಿಪೋರ್ಟರ್ ಎಂಬುದು ತಿಳಿಯುತ್ತಿದ್ದಂತೆ ಕೊಹ್ಲಿ ಮುಗುಳು ನಕ್ಕರು. ಇದೀಗ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಎಡ್ಜ್‌ಬಾಸ್ಟನ್ ಟ್ವಿಟರ್ ಹ್ಯಾಂಡಲ್ ನನ್ನ ಜೀವನ ಪರಿಪೂರ್ಣವಾಗಿದೆ ಎಂದು ಬರೆದುಕೊಂಡಿದ್ದಾರೆ.
??????? ???? ??? ????. ?
My life is complete. #Edgbaston | #ENGvIND pic.twitter.com/Ij6kDbnuAA
— Edgbaston (@Edgbaston) June 29, 2022
ಭಾರತ ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲಿದೆ. ಕಳೆದ ವರ್ಷ ಉಭಯ ತಂಡಗಳ ನಡುವೆ ನಡೆದ ಟೆಸ್ಟ್ ಸರಣಿಯ ಭಾಗವಾಗಿರುವ ಈ ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ವರ್ಷ ಈ ಸರಣಿಯಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ ಭಾರತ ತಂಡ 2-1 ಮುನ್ನಡೆ ಸಾಧಿಸಿದೆ.
2-1 ಅಂತರದಿಂದ ಮುನ್ನಡೆ ಹೊಂದಿರುವ ಭಾರತ ತಂಡಕ್ಕೆ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆಲ್ಲುವ ಅವಕಾಶವಿದೆ. ಈ ಸರಣಿ ಗೆದ್ದರೆ 15 ವರ್ಷಗಳ ಬಳಿಕ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ. ಇದಕ್ಕೂ ಮುನ್ನ 2007ರಲ್ಲಿ ಭಾರತ ತಂಡ ಈ ಸಾಧನೆ ಮಾಡಿತ್ತು. ಆಗ ರಾಹುಲ್ ದ್ರಾವಿಡ್ ತಂಡದ ನಾಯಕರಾಗಿದ್ದರು. ಈ ಬಾರಿ ದ್ರಾವಿಡ್ ಕೋಚ್ ಆಗಿರುವುದರಿಂದ ಇತಿಹಾಸ ಪುನರಾರ್ವತನೆಯಾಗುವ ನಿರೀಕ್ಷೆಯಿದೆ.