
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಪದಕ ತರುವ ಭರವಸೆಯನ್ನು ಹುಟ್ಟಿಸಿರುವ ನೀರಜ್ ಚೋಪ್ರಾಗೆ ಇಂದು (ಡಿಸೆಂಬರ್ 24) 23 ವರ್ಷ ತುಂಬಿದೆ.

ನೀರಜ್ ಜನಿಸಿದ್ದು ಹರಿಯಾಣದ ಪಾಣಿಪತ್ ಎಂಬ ಹಳ್ಳಿಯಲ್ಲಿ. 11 ನೇ ವಯಸ್ಸಿನಲ್ಲೇ 80 ಕೆ.ಜಿ. ತೂಕ ಹೊಂದಿದ್ದ ನೀರಜ್ ಸಾಧನೆಯ ಹಾದಿ ಬಲು ಕಠಿಣವಾಗಿತ್ತು.

ಮೈದಾನದಲ್ಲಿ ಜಾವೆಲಿನ್ ಎಸೆಯುತ್ತಿರುವುದನ್ನು ನೋಡಿದ ನೀರಜ್ ತಾವು ಸಹ ಈ ಆಟದಲ್ಲಿ ತಮ್ಮ ಕೈಚಳಕ ತೋರಬೇಕೆಂದು ಧೃಡ ಸಂಕಲ್ಪ ಮಾಡಿದರು. ಆ ದಿನದಿಂದ ಪ್ರಾರಂಭವಾದ ನೀರಜ್ ಪಯಣ ಅವರನ್ನು ವಿಶ್ವ ಚಾಂಪಿಯನ್ ಆಗಿ ಮಾಡಿದೆ.

ಎರಡು ವರ್ಷಗಳ ನಂತರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಮೊದಲ ಚಿನ್ನದ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರಾ ಇತಿಹಾಸ ನಿರ್ಮಿಸಿದರು.

ಪ್ರಮುಖ ದಾಖಲೆಗಳನ್ನು ಮಾಡಿರುವ ನೀರಜ್, 2016 ರಲ್ಲಿ ವಿಶ್ವ ಅಥ್ಲೆಟಿಕ್ಸ್ ಯು 20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ 86.48 ಮೀಟರ್ ಜಾವೆಲಿನ್ ಎಸೆದು ವಿಶ್ವ ದಾಖಲೆ ನಿರ್ಮಿಸಿದರು.

2019 ರ ವರ್ಷ ನೀರಜ್‌ಗೆ ನಿರಾಶದಾಯಾಕವಾಗಿತ್ತು. ಮೊಣಕೈ ನೋವಿನಿಂದಾಗಿ ಅವರು ಕ್ರೀಡೆಯಿಂದ ಹೊರಗುಳಿಯಬೇಕಾಯಿತು. ಈ ಸಮಯದಲ್ಲಿ ನೀರಜ್ ಆಟಕ್ಕೆ ಮರಳುವುದು ತುಂಬ ಕಷ್ಟಕರ ಎಂದು ಜನರು ಭಾವಿಸತೊಡಗಿದರು. ಆದಾಗ್ಯೂ, ಗಾಯದಿಂದ ಚೇತರಿಸಿಕೊಂಡ ನೀರಜ್, ದಕ್ಷಿಣ ಆಫ್ರಿಕಾದಲ್ಲಿ ನಡೆದ ದೇಶೀಯ ಪಂದ್ಯಾವಳಿಯಲ್ಲಿ ಸ್ಪರ್ಧಿಸಿ ಒಲಿಂಪಿಕ್ಸ್ಗೆ ಅರ್ಹತೆ ಪಡೆದರು.