ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾವನ್ನು ಶುಕ್ರವಾರ ಘೋಷಿಸಲಾಯಿತು. ಈ ತಂಡದಲ್ಲಿ ಭಾರತದ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಹಾರ್ದಿಕ್ ಪಾಂಡ್ಯ ಅವರನ್ನು ಆಯ್ಕೆ ಮಾಡಲಾಗಿಲ್ಲ. ಈ ಆಟಗಾರ ಪ್ರಸ್ತುತ ಭುಜದ ನೋವಿನಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಬೆನ್ನು ನೋವಿನ ಸಮಸ್ಯೆಯಿಂದಾಗಿ ಅವರು ಈಗಾಗಲೇ ಬೌಲಿಂಗ್ ಕಡಿಮೆ ಮಾಡಿದ್ದಾರೆ. ಐಪಿಎಲ್ -2021 ಮತ್ತು 2020 ರಲ್ಲಿ ಅವರು ತುಂಬಾ ಕಡಿಮೆ ಬೌಲಿಂಗ್ ಮಾಡಿದರು. ಅದೇ ಸಮಯದಲ್ಲಿ, ಇಂಗ್ಲೆಂಡ್ ಸರಣಿಯಲ್ಲಿಯೂ ಚೆಂಡನ್ನು ಅವರ ಕೈಯಲ್ಲಿ ಕಡಿಮೆ ನೋಡಲಾಯಿತು.
ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯಲ್ಲಿಯೂ ಸಹ, ಭಾರತದ ತಂಡದ ನಾಯಕ ವಿರಾಟ್ ಕೊಹ್ಲಿ, ಪಾಂಡ್ಯ ಅವರು ಇಂಗ್ಲೆಂಡ್ ಪ್ರವಾಸಕ್ಕೆ ಅತ್ಯಂತ ಅವಶ್ಯಕವಾಗಿದ್ದಾರೆ. ಹಾಗಾಗಿ ಅವರಿಗೆ ಹೆಚ್ಚಿನ ಬೌಲಿಂಗ್ ನೀಡುತ್ತಿಲ್ಲ ಎಂದಿದ್ದರು. ಪಾಂಡ್ಯ ಇಂಗ್ಲೆಂಡ್ ವಿರುದ್ಧ ಆಡಿದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ ಮತ್ತು ಮೊದಲ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡಿದರು, ಆದರೆ ಆ ನಂತರ ಅವರು ಬೌಲಿಂಗ್ ಮಾಡಲಿಲ್ಲ. ಫೆಬ್ರವರಿ-ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿದ ನಾಲ್ಕು ಪಂದ್ಯಗಳ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡದ ಸಹಾಯಕ ಸಿಬ್ಬಂದಿ ಪಾಂಡ್ಯ ಅವರನ್ನು ಮೇಲ್ವಿಚಾರಣೆ ಮಾಡಿದರು.
ಬೌಲಿಂಗ್ ಭಾರವನ್ನು ಹೊರಲು ಕಷ್ಟ
ಈ ಸಮಯದಲ್ಲಿ ಪಾಂಡ್ಯ ಬೌಲಿಂಗ್‌ನ ಭಾರವನ್ನು ಹೊತ್ತುಕೊಳ್ಳುವ ಸ್ಥಿತಿಯಲ್ಲಿಲ್ಲ. ಅವರ ಬೆನ್ನಿನ ಗಾಯವನ್ನು ಗುಣಪಡಿಸಲಾಗಿದೆ, ಆದರೆ ಈಗ ಅವರು ಭುಜದ ನೋವಿನಿಂದ ಬಳಲುದ್ದಾರೆ. ಈ ಸಮಯದಲ್ಲಿ ಬೌಲಿಂಗ್ ಭಾರವನ್ನು ಅವರು ಬರಿಸಬಲ್ಲರು ಎಂದು ತೋರುತ್ತಿಲ್ಲ.” ಬೆನ್ನಿನ ಗಾಯದಿಂದ ಅವರು ಚೇತರಿಸಿಕೊಂಡಿದ್ದಾರೆ, ಅವರ ಕ್ರಮವೂ ಬದಲಾಗಿದೆ, ಆದರೆ ಈಗ ಅವರ ಭುಜದ ನೋವು ಅವರನ್ನು ಕಾಡುತ್ತಿದೆ. ಆದರಿಂದ ಬಲವಂತವಾಗಿ ಅವರು ಬೌಲಿಂಗ್ ಮಾಡಿದರೆ, ಅದು ಅಪಾಯಕಾರಿಯಾಗಬಹುದು ಎಂಬುದು ಪಾಂಡ್ಯರಿಗೂ ತಿಳಿದಿದೆ. ಈಗ ಅವರು ತಮ್ಮ ಬ್ಯಾಟಿಂಗ್ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ. ಟಿ 20 ವಿಶ್ವಕಪ್ ತೀರ ಹತ್ತಿರದಲ್ಲಿದೆ, ಆದ್ದರಿಂದ ದೊಡ್ಡ ಪಂದ್ಯಾವಳಿಯ ಮೊದಲು ಅವರು ಫಾರ್ಮ್ಗೆ ಬರುವಂತೆ ಹೆಚ್ಚಿನ ಸಮಯವನ್ನು ನೀಡುವುದು ಮುಖ್ಯವಾಗಿದೆ ಆದರಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂಬುದು ವರದಿಯಾಗಿದೆ.
ಐಪಿಎಲ್ -2021 ರಲ್ಲಿ ಬೌಲಿಂಗ್ ಇಲ್ಲ
ಐಪಿಎಲ್ -2021 ರಲ್ಲಿ ಪಾಂಡ್ಯ ಬೌಲ್ ಮಾಡಲಿಲ್ಲ. ಅವರು ಬ್ಯಾಟ್ನೊಂದಿಗೆ ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಐಪಿಎಲ್ -2021 ಮುಂದೂಡುವ ಮೊದಲು, ಪಾಂಡ್ಯ ಏಳು ಪಂದ್ಯಗಳನ್ನು ಆಡಿದ್ದು, 8.66 ರ ಸರಾಸರಿಯಲ್ಲಿ ಕೇವಲ 52 ರನ್ ಗಳಿಸಿದ್ದಾರೆ. ಅವರು ಬೌಲಿಂಗ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಇದು ಸೂಚಿಸುತ್ತದೆ. ಅವರು ಆಗಸ್ಟ್ 30 ರಿಂದ ಸೆಪ್ಟೆಂಬರ್ 2 ರವರೆಗೆ ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಅಂದಿನಿಂದ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. ಭಾರತಕ್ಕಾಗಿ ಇದುವರೆಗೆ 11 ಟೆಸ್ಟ್ ಪಂದ್ಯಗಳನ್ನು ಆಡಿದ ಅವರು 17 ವಿಕೆಟ್‌ಗಳೊಂದಿಗೆ 532 ರನ್ ಗಳಿಸಿದ್ದಾರೆ.