ಕ್ರಿಸ್ ಗೇಲ್ ಆಡಲಾರಂಭಿಸಿದ ನಂತರ ಪಂಜಾಬ್ ಟೀಮಿನ ದಿಶೆಯೇ ಬದಲಾಗಿದೆ. 41 ವರ್ಷದ ಕೆರೀಬಿಯನ್ ಆಟಗಾರನಿಂದ ಟೀಮಿಗೆ ಹಲವು ರೀತಿಯಲ್ಲಿ ಸಹಾಯವಾಗಿದೆ. 5 ಪಂದ್ಯಗಳನ್ನು ಸತತವಾಗಿ ಸೋತು ಸುಣ್ಣವಾಗಿದ್ದ ರಾಹುಲ್ ಪಡೆ ಸದರಿ ಸೀಸನ್ನಿಂದ ಹೊರಬೀಳುವ ಮೊದಲ ತಂಡವೆನಿಸಿಕೊಳ್ಳುವ ಆತಂಕದಲ್ಲಿತ್ತು. ಆದರೆ ಗೇಲ್ ಆಗಮನ ಪಂಜಾಬ್ ಟೀಮಿನ ಸ್ಥಿತಿಯನ್ನು ರಿವರ್ಸ್ ಮಾಡಿದೆ.
ಟೀಮಿನಲ್ಲಿ ಗೇಲ್ ಉಪಸ್ಥಿತಿ ಮತ್ತು ತಮ್ಮೊಂದಿಗೆ ಅವರು ಕ್ಯಾರಿ ಮಾಡುವ ‘ಯೂನಿವರ್ಸ್ ಬಾಸ್’ ದಾರ್ಷ್ಟ್ಯತೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದೆ. ಈಗಿನ ಮತ್ತು 15 ವರ್ಷಗಳ ಹಿಂದಿನ ಗೇಲ್ ನಡುವೆ ಬಹಳ ವ್ಯತ್ಯಾಸವಿದೆ. ಆದರೆ, ಕ್ಷಿಪ್ರ ಗತಿಯಲ್ಲಿ ರನ್ ಗಳಿಸುವ ಮತ್ತು ಬೌಲರ್ಗಳನ್ನು ಸದೆಬಡಿಯುವ ಕಾಯಕವನ್ನು ಅವರು ಈಗಲೂ ಮುಂದುವರಿಸಿದ್ದಾರೆ. ಅವರು ಆಡಲಾರಂಭಿಸಿದ ನಂತರ ಟೀಮಿಗೆ ಆಗಿರುವ ಮತ್ತೊಂದು ಪ್ರಯೋಜನವೆಂದರೆ. ರಾಹುಲ್ ಮತ್ತು ಮಾಯಾಂಕ್ ಅಗರ್ವಾಲ್ ಮೇಲಿನ
ಕೆಕೆಆರ್ ವಿರುದ್ಧ ಅಡಿದ ಕೊನೆಯ ಪಂದ್ಯದಲ್ಲಿ ಅಗರ್ವಾಲ್ ಆಡಿರಲಿಲ್ಲ, ಆವರ ಸ್ಥಾನದಲ್ಲಿ ಅವಕಾಶ ಪಡೆದ ಮನ್ದೀಪ್ ಸಿಂಗ್ ತಂದೆಯ ಸಾವಿನ ಆಘಾತದ ಹೊರತಾಗಿಯೂ, ಅಜೇಯ 66 ರನ್ಗಳನ್ನು ಬಾರಿಸಿ ಪಂಜಾಬ್ ಗೆಲುವಿಗೆ ಮಹತ್ತರ ಕಾಣಿಕೆ ನೀಡಿದರು. ನಿಕೊಲಾಸ್ ಪೂರನ್ ಅವರ ಪ್ರದರ್ಶನಗಳಲ್ಲಿ ಸ್ಥಿರತೆ ಇಲ್ಲವಾದರೂ ಅವರು ಮ್ಯಾ
ಯುವ ಸ್ಪಿನ್ನರ್ಗಳಾದ ರವಿ ಬಿಷ್ಣೊಯಿ ಮತ್ತು ಮುರುಗನ್ ಅಶ್ವಿನ್ ಲೆಜೆಂಡರಿ ಸ್ಪಿನ್ನರ್ ಮತ್ತು ಟೀಮಿನ ಮೆಂಟರ್ ಆಗಿರುವ ಅನಿಲ್ ಕುಂಬ್ಳೆ ಅವರ ಗರಡಿಯಲ್ಲಿ ಚೆನ್ನಾಗಿ ಪಳಗುತ್ತಿರುವಂತಿದೆ. ಪ್ರತಿ ಪಂದ್ಯದಲ್ಲ್ಲೂ ಆವರಿಂದ ಸುಧಾರಿತ ಪರ್ಫಾರ್ಮನ್ಸ್ ಬರುತ್ತಿದೆ. ಮೊಹಮ್ಮದ್ ಶಮಿಗೆ ಅರ್ಷ್ದೀಪ್ ಸಿಂಗ್ ರೂಪದಲ್ಲಿ ಅತ್ಯುತ್ತಮ ಜೊತೆಗಾರ ಸಿಕ್ಕಿದ್ದಾರೆ. ಯುವ ಪ್ರತಿಭೆ ಡೆತ್ ಓವರ್ಗಳಲ್ಲೂ ನಿರ್ಭಿತಿಯಿಂದ ಬೌಲ್ ಮಾಡಿತ್ತಿದ್ದಾರೆ.
ರಾಯಲ್ಸ್ ಟೀಮಿಗೆ ಪ್ಲೇ ಆಫ್ ಹಂತಕ್ಕೆ ತಲುಪುವ ಅವಕಾಶ ಕ್ಷೀಣವಾಗಿದೆ. ಆದರೆ, ಕಳೆದ ಪಂದ್ಯದಲ್ಲಿ ಟೇಬಲ್ ಲೀಡರ್ ಮುಂಬೈ ಇಂಡಿಯನ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿರುವುದು ಅದರ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ. ಈ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ ಅಮೋಘ ಶತಕ ಬಾರಿಸಿ ತನ್ನನ್ನು ಯಾಕೆ ವಿಶ್ವದ ಅಗ್ರಮಾನ್ಯ ಆಲ್ರೌಂಡರ್ ಅಂತ ಕರೆಯಲಾಗುತ್ತದೆ ಎನ್ನುವುದನ್ನು ಸಾಬೀತು ಮಾಡಿದರು. ಇದೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಸಹ ರನ್ ಗಳಿಸಿದ್ದು ನಾಯಕ ಸ್ಟೀವ್ ಸ್ಮಿತ್ಗೆ ಬ್ಯಾಟಿಂಗ್ ಬಗ್ಗೆ ಉಂಟಾಗಿದ್ದ ಚಿಂತೆಯನ್ನು ದೂರ ಮಾಡಿದೆ.
ಆದರೆ ಖುದ್ದು ನಾಯಕನೇ ಇತ್ತೀಚಿನ ಪಂದ್ಯಗಳಲ್ಲಿ ಕಳಪೆಯಾಗಿ ಅಡಿದ್ದಾರೆ. ಸಾಮಾನ್ಯವಾಗಿ ವಿಶ್ವದರ್ಜೆಯ ಆಟಗಾರರು ಕಳೆದುಹೋದ ಫಾರ್ಮನ್ನು ಬಹಳ ಬೇಗ ಕಂಡು
ಇಂದಿನ ಪಂದ್ಯದಲ್ಲೂ ರಾಬಿನ್ ಉತ್ತಪ್ಪ ಮತ್ತು ಸ್ಟೋಕ್ಸ್ ಇನ್ನಿಂಗ್ಸ್ ಓಪನ್ ಮಾಡಲಿದ್ದಾರೆ. ಜೊಸ್ ಬಟ್ಲರ್ ಬ್ಯಾಟಿಂಗ್ನಲ್ಲಿ ಸ್ಥಿರತೆ ಕಾಣಿಸುತ್ತಿಲ್ಲ. ಬೌಲಿಂಗ್ ವಿಷಯಕ್ಕೆ ಬಂದರೆ, ರಾಯಲ್ಸ್ ಮತ್ತೊಮ್ಮೆ ಜೊಪ್ರಾ ಆರ್ಚರ್ ಅವರನ್ನೇ ನೆಚ್ಚಿಕೊಳ್ಳಲಿದೆ. ಇಂಗ್ಲೀಷ್ ಬೌಲರ್ ಇದುವರೆಗೆ ಆಡಿರುವ 12 ಪಂದ್ಯಗಳಿಂದ 17 ವಿಕೆಟ್ ಪಡೆದಿದ್ದಾರೆ. ಅಂಕಿತ್ ರಜಪೂತ್, ಜಯದೇವ್ ಉನಾಡ್ಕಟ್ ಮತ್ತು ಕಾರ್ತೀಕ್ ತ್ಯಾಗಿ ಮತ್ತು ಶ್ರೇಯಸ್ ಗೋಪಾಲ್ ಇಂಪ್ರೆಸ್ ಮಾಡುತ್ತಿಲ್ಲ.
Published On - 4:40 pm, Fri, 30 October 20