ಚೆನೈಗೆ ಕೇವಲ ಔಪಚಾರಿಕತೆ, ಆದರೆ ಕೊಲ್ಕತಾಗೆ ಗೆಲುವು ಅನಿವಾರ್ಯ

13ನೇ ಅವೃತ್ತಿಯ ಇಂಡಿಯನ್ ಪ್ರಿಮೀಯರ್ ಲೀಗ್ ಕೊನೆಯ ಹಂತ ತಲುಪಿದೆ. ಇನ್ನು ಕೆಲವೇ ಪಂದ್ಯಗಳು ಬಾಕಿಯುಳಿದಿವೆ ಮತ್ತು ಪ್ಲೇ ಆಫ್ ಹಂತ ತಲುಪುವ ಟೀಮುಗಳ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಮೂಡಿಬಂದಿಲ್ಲ. ಬುಧವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಸುಲಭವಾಗಿ ಸೋಲಿಸಿದ ಮುಂಬೈ ಇಂಡಿಯನ್ಸ್ ತನ್ನ ಸ್ಥಾನವನ್ನು ಹೆಚ್ಚು ಕಡಿಮೆ ಭದ್ರಪಡಿಸಿಕೊಂಡಿದೆ. ಆದರೆ, 14 ಪಾಯಿಂಟ್​ಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ 2ನೇ ಸ್ಥಾನದಲ್ಲಿದ್ದರೂ ಆರ್​ಸಿಬಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲಲೇಬೇಕಾದ ಸ್ಥಿತಿಯಲ್ಲಿದೆ. ಈ ಸೀಸನ್​ನ 49ನೇ ಪಂದ್ಯವಿಂದು ಮೂರು […]

ಚೆನೈಗೆ ಕೇವಲ ಔಪಚಾರಿಕತೆ, ಆದರೆ ಕೊಲ್ಕತಾಗೆ ಗೆಲುವು ಅನಿವಾರ್ಯ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಸಾಧು ಶ್ರೀನಾಥ್​

Updated on:Oct 29, 2020 | 6:04 PM

13ನೇ ಅವೃತ್ತಿಯ ಇಂಡಿಯನ್ ಪ್ರಿಮೀಯರ್ ಲೀಗ್ ಕೊನೆಯ ಹಂತ ತಲುಪಿದೆ. ಇನ್ನು ಕೆಲವೇ ಪಂದ್ಯಗಳು ಬಾಕಿಯುಳಿದಿವೆ ಮತ್ತು ಪ್ಲೇ ಆಫ್ ಹಂತ ತಲುಪುವ ಟೀಮುಗಳ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಮೂಡಿಬಂದಿಲ್ಲ. ಬುಧವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಸುಲಭವಾಗಿ ಸೋಲಿಸಿದ ಮುಂಬೈ ಇಂಡಿಯನ್ಸ್ ತನ್ನ ಸ್ಥಾನವನ್ನು ಹೆಚ್ಚು ಕಡಿಮೆ ಭದ್ರಪಡಿಸಿಕೊಂಡಿದೆ. ಆದರೆ, 14 ಪಾಯಿಂಟ್​ಗಳೊಂದಿಗೆ ಪಾಯಿಂಟ್ಸ್ ಟೇಬಲ್​ನಲ್ಲಿ 2ನೇ ಸ್ಥಾನದಲ್ಲಿದ್ದರೂ ಆರ್​ಸಿಬಿ ಇನ್ನುಳಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆಲ್ಲಲೇಬೇಕಾದ ಸ್ಥಿತಿಯಲ್ಲಿದೆ.

ಈ ಸೀಸನ್​ನ 49ನೇ ಪಂದ್ಯವಿಂದು ಮೂರು ಬಾರಿ ಚಾಂಪಿಯನ್​ಶಿಪ್ ಗೆದ್ದು ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇ ಆಫ್ ಹಂತ ಮುಟ್ಟಲು ವಿಫಲವಾಗಿರುವ ಚೆನೈ ಸೂಪರ್ ಕಿಂಗ್ಸ್ ಮತ್ತು ಎರಡು ಬಾರಿ ಪ್ರಶಸ್ತಿ ಗೆದ್ದಿರುವ ಕೊಲ್ಕತಾ ನೈಟ್ ರೈಡರ್ಸ್ ನಡುವೆ ದುಬೈ ಇಂಟರ್​ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮಹೇಂದ್ರಸಿಂಗ್ ಧೋನಿ ಟೀಮಿಗೆ ಇಂದಿನ ಪಂದ್ಯ ಕೇವಲ ಔಪಚಾರಿಕತೆ ಮಾತ್ರ. ಆದರೆ ಕೊಲ್ಕತಾ ಗೆದ್ದರೆ, ಪ್ಲೇ ಆಫ್ ಹಂತ ತಲುಪುವ ಆಸೆ ಜೀವಂತ ಉಳಿಯಲಿದೆ.

[yop_poll id=”25″]

ಇದುವೆರೆಗೆ 12 ಪಂದ್ಯಗಳನ್ನು ಆಡಿರುವ ಚೆನೈ 4ರಲ್ಲಿ ಗೆದ್ದು, 8 ಸೋತು ಟೇಬಲ್​ನ ತಳಭಾಗದಲ್ಲಿದೆ. ಆಡಿರುವ 12ರಲ್ಲಿ 6 ಗೆದ್ದು 6ರಲ್ಲಿ ಸೋತಿರುವ ಕೊಲ್ಕತಾ 12 ಅಂಕಗಳೊಂದಿಗೆ 5 ನೇ ಸ್ಥಾನದಲ್ಲಿದೆ. ಉಳಿದೆರಡು ಪಂದ್ಯಗಳನ್ನು ಗೆದ್ದಲ್ಲಿ ಅದರ ಅಂಕಗಳು 16 ಆಗಲಿದ್ದು, ಟೂರ್ನಿಯಲ್ಲಿ ಮುಂದೆ ಸಾಗುವ ಆಸೆ ಚಿಗುರುತ್ತದೆ.

ಚೆನೈ ಇನ್ನುಳಿದ ಪಂದ್ಯಗಳನ್ನು ಆಡುವುದು ಪ್ರತಿಷ್ಠೆಗೋಸ್ಕರ. ಳೆದ ಪಂದ್ಯದಲ್ಲಿ ಅದು ಬೆಂಗಳೂರನ್ನು ಸುಲಭವಾಗಿ 8 ವಿಕೆಟ್​ಗಳಿಂದ ಸೋಲಿಸಿದ್ದು ಟೀಮಿನ ವಿಶ್ವಾಸವನ್ನು ಹೆಚ್ಚಿಸಿದೆ. ಪುಣೆಯ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಅಜೇಯ ಅರ್ಧಶತಕ ಬಾರಿಸಿ ಗೆಲುವಿನಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು. ಇವತ್ತಿನ ಪಂದ್ಯದಲ್ಲಿ ಟೀಮ್ ಮ್ಯಾನೇಜ್ಮೆಂಟ್ ಹಲವು ಪ್ರಯೋಗಗಳನ್ನು ಮಾಡುವ ನಿರೀಕ್ಷೆಯಿದೆ. ಬೆಂಗಳೂರು ವಿರುದ್ಧ ಆಡಿದ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್​ಗೆ ಅವಕಾಶ ಕಲ್ಪಿಸಲಾಗಿತ್ತು. ಇಂದಿನ ಪಂದ್ಯದಲ್ಲಿ ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ಸಾಯಿ ಕಿಶೋರ್ ಅವರನ್ನು ಆಡಿಸುವ ಸಾಧ್ಯತೆಯಿದೆ. ಮಧ್ಯಮ ವೇಗದ ಬೌಲರ್ ಮೊನು ಕುಮಾರ್ ಅವರನ್ನು ಉಳಿಸಿಕೊಂಡು ಇಮ್ರಾನ್ ತಾಹಿರ್ ಸ್ಥಾನದಲ್ಲಿ ಕೆ ಎಮ್ ಆಸಿಫ್ ಅವರನ್ನಾಡಿಸುವ ನಿರೀಕ್ಷೆಯಿದೆ. ಶೇನ್ ವಾಟ್ಸನ್ ಸದರಿ ಸೀಸನ್​ನಲ್ಲಿ ಪುನಃ ಆಡಲಿಕ್ಕಿಲ್ಲ, ಋತುರಾಜ್ ಜೊತೆ ಫಫ್ ಡಿ ಪ್ಲೆಸ್ಸಿ ಇನ್ನಿಂಗ್ಸ್ ಆರಂಭಿಸಬಹುದು.

ಟಾಪ್ ಆರ್ಡರ್ ಬ್ಯಾಟಿಂಗ್​ನ ಅಸ್ಥಿರ ಪ್ರದರ್ಶನಗಳು ಕೊಲ್ಕತಾ ಟೀಮನ್ನು ಇನ್ನಿಲದಂತೆ ಕಾಡುತ್ತಿವೆ. ಶುಬ್ಮನ್ ಗಿಲ್ ಮಿಂಚಿದರೆ, ನಿತಿಷ್ ರಾಣಾ ಮತ್ತು ತ್ರಿಪಾಠಿ ನಿರಾಶಾದಾಯಕ ಆಟವಾಡುತ್ತಾರೆ. ಈ ಪ್ರಕ್ರಿಯೆ ಹಾಗೆಯೇ ಕೆಳಗಿನ ಕ್ರಮಾಂಕದಲ್ಲೂ ಮುಂದುವರೆಯುತ್ತದೆ. ಇದುವರೆಗೆ 12 ಪಂದ್ಯಗಳಲ್ಲಿ ದಿನೇಶ್ ಕಾರ್ತೀಕ್ ಕೇವಲ ಒಂದರಲ್ಲಿ ಮಾತ್ರ ಉತ್ತಮ ಇನ್ನಿಂಗ್ಸ್ ಆಡಿದ್ದಾರೆ. ಅವರಿಂದ ಮತ್ತೊಂದು ಅಥವಾ ಇನ್ನೆರಡು ಮ್ಯಾಚ್ ವಿನ್ನಂಗ್ ಅಲ್ಲದಿದ್ದರೂ ಗೆಲುವಿಗೆ ಪೂರಕವಾಗಬಹುದಾದ ಕಾಂಟ್ರಿಬ್ಯೂಷನ್ ಬರಲಿಯೆಂಬ ನಿರೀಕ್ಷೆಯನ್ನು ಅವರ ನಂತರ ನಾಯಕತ್ವದ ಹೊಣೆ ಹೊತ್ತಿರುವ ಅಯಾನ್ ಮೊರ್ಗನ್ ಇಟ್ಟುಕೊಂಡಿದ್ದಾರೆ.

ಓಪನರ್ ಗಿಲ್ ಮೊದಲಾರ್ಧದ ಪಂದ್ಯಗಳಲ್ಲಿ ಉತ್ತಮವಾಗಿ ಆಡಿ, ಟೀಮಿನ ಮೇನ್​ಸ್ಟೇ ಅನಿಸಿದ್ದರು. ಆದರೆ, ಎರಡನೇ ಸುತ್ತಿನ ಪಂದ್ಯಗಳಲ್ಲಿ ಫೋಕಸ್ ಕಳೆದುಕೊಂಡವರಂತೆ ಆಡುತ್ತಿದ್ದಾರೆ. ತ್ರಿಪಾಠಿ ತನಗೆ ದೊರೆತ ಅವಕಾಶಗಳನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಐಪಿಎಲ್​ನಂಥ ದೊಡ್ಡ ಕ್ರಿಕೆಟಿಂಗ್ ಈವೆಂಟ್ ಆಟಗಾರರಿಂದ ಸತತವಾಗಿ ಸ್ಥಿರ ಪ್ರದರ್ಶನಗಳನ್ನು ಬಯಸುತ್ತದೆ.

ಸುನಿಲ್ ನರೈನ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಅಡಿಸುವಾಗಿನಿಂದ ಅವರ ಬ್ಯಾಟ್​ನಿಂದ ರನ್​ಗಳು ಸಿಡಿಯುತ್ತಿದ್ದು ಟೀಮಿಗೆ ಪ್ರಯೋಜನವಾಗುತ್ತಿದೆ. ಮೊರ್ಗನ್ ನಾಯಕತ್ವದ ಜವಾಬ್ದಾರಿ ಹೆಗಲಿಗೆ ಬೀಳುವ ಮುನ್ನ ಉತ್ತಮವಾಗಿ ಆಡುತ್ತಿದ್ದರು. ಆದರೆ, ನಂತರದ ಪಂದ್ಯಗಳಲ್ಲಿ ಅವರಿಂದ ಉಲ್ಲೇಖನೀಯ ಆಟ ಬಂದಿಲ್ಲ. ಗಾಯಗೊಂಡು ಕೆಲವು ಪಂದ್ಯಗಳಲ್ಲಿ ಆಡದಿದ್ದ ಆಂದ್ರೆ ರಸ್ಸೆಲ್ ಇಂದು ಆಡುವ ಇಲೆವೆನ್​ನಲ್ಲಿ ಕಾಣಿಸಿಕೊಳ್ಳುವ ಸಂಭವವಿದೆ. ಅವರು ವಾಪಸ್ಸಾಸದರೆ, ಕೊಲ್ಕತಾ ಟೀಮಿಗೆ ಆನೆಬಲ ಬಂದಂತೆ. ಈ ಸೀಸನ್​ನಲ್ಲಿ ಅವರಿಂದ ಹೇಳಿಕೊಳ್ಳುವಂಥ ಪ್ರದರ್ಶನಗಳು ಬಂದಿಲ್ಲವಾದರೂ, ಅವರ ಉಪಸ್ಥಿತಿ ಟೀಮಿನ ನೈತಿಕ ಬಲವನ್ನು ಹೆಚ್ಚಿಸುತ್ತದೆ. ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಪಡೆಯುವ ಸಾಧನೆ ಮಾಡಿದ ವರುಣ್ ಚಕ್ರವರ್ತಿ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಇಂದು ವರುಣ್ ಮತ್ತಷ್ಟು ಉತ್ಸುಕತೆಯಿಂದ ಬೌಲ್ ಮಾಡುವುದು ನಿಶ್ಚಿತ.

ಚೆನೈ ಪ್ರತಿಷ್ಠೆಗಾಗಿ ಆಡಿದರೂ ಕೊಲ್ಕತಾಗೆ ಇಂದಿನ ಪಂದ್ಯ ಬಹಳ ಮಹತ್ವದ್ದು, ಅದು ಗೆಲ್ಲಲೇಬೇಕಾದ ಸ್ಥಿತಿಯಲ್ಲಿದೆ.

Published On - 4:44 pm, Thu, 29 October 20