Ashleigh Barty: ಚೊಚ್ಚಲ ವಿಂಬಲ್ಡನ್ ಗೆದ್ದ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ ಕ್ರಿಕೆಟರ್ ಎಂಬುದು ನಿಮಗೆ ಗೊತ್ತೇ?

| Updated By: Vinay Bhat

Updated on: Jul 11, 2021 | 11:07 AM

ಅನೇಕರಿಗೆ ತಿಳಿದಿರದ ಸಂಗತಿ ಎಂದರೆ ಆಶ್ಲೀಗ್ ಬಾರ್ಟಿ ಅವರು ಓರ್ವ ಕ್ರಿಕೆಟರ್ ಎಂಬುದು. ಹೌದು, ಇವರು 2014 ರಲ್ಲಿ ತನ್ನ ಟೆನ್ನಿಸ್ ವೃತ್ತಿಯಲ್ಲಿ ವಿರಾಮ ಪಡೆದುಕೊಂಡು ಮಹಿಳೆಯರ ಬಿಗ್​ ಬ್ಯಾಶ್ ಲೀಗ್ ನಲ್ಲಿ ಕಣಕ್ಕಿಳಿಯಲು ನಿರ್ಧರಿಸುತ್ತಾರೆ.

Ashleigh Barty: ಚೊಚ್ಚಲ ವಿಂಬಲ್ಡನ್ ಗೆದ್ದ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ ಕ್ರಿಕೆಟರ್ ಎಂಬುದು ನಿಮಗೆ ಗೊತ್ತೇ?
Ash Barty
Follow us on

ವಿಂಬಲ್ಡನ್‌ ಗ್ರ್ಯಾಂಡ್​ಸ್ಲ್ಯಾಮ್ (Wimbledon 2021)​ ಟೆನಿಸ್‌ ಮಹಿಳಾ ವಿಭಾಗದ ಸಿಂಗಲ್ಸ್​​​ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ (Ashleigh Barty) ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಜೆಕ್‌ ಗಣರಾಜ್ಯದ ಕರೋಲಿನಾ ಪಿಸ್ಕೋವಾ ಅವರನ್ನು 6-3, 6-7 (4/7), 6-3 ಅಂತರದಿಂದ ಮಣಿಸಿದ ಅಗ್ರ ಶ್ರೇಯಾಂಕಿತ ಬಾರ್ಟಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದರು.

ವಿಶೇಷ ಎಂದರೆ ಆಸ್ಟ್ರೇಲಿಯಾದ ಇವಾನ್ ಗೂಲಾಗೊಂಗ್ ಅವರು ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡ 50ನೇ ವಾರ್ಷಿಕೋತ್ಸವದಂದೇ 25 ವರ್ಷದ ಆಸೀಸ್‌ ಆಟಗಾರ್ತಿ ಬಾರ್ಟಿ ಈ ಸಾಧನೆ ಮಾಡಿದ್ದಾರೆ.

ಕೊನೆಯ ಬಾರಿಗೆ ಆಸ್ಟ್ರೇಲಿಯಾದ ಇವಾನ್ ಗೂಲಾಗೊಂಗ್ ಕೋಲಿ 1980 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರು. ಬಳಿಕ ಕಳೆದ 41 ವರ್ಷಗಳಿಂದ ಆಸ್ಟ್ರೇಲಿಯಾ ಈ ಪ್ರಶಸ್ತಿಗೋಸ್ಕರ ಕಾಯುತ್ತಿತ್ತು. ಸದ್ಯ ಬಾರ್ಟಿ ಮಹಿಳಾ ಸಿಂಗಲ್ಸ್‌ನಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ಮೂರನೇ ಆಸ್ಟ್ರೇಲಿಯಾದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಆದರೆ, ಅನೇಕರಿಗೆ ತಿಳಿದಿರದ ಸಂಗತಿ ಎಂದರೆ ಆಶ್ಲೀಗ್ ಬಾರ್ಟಿ ಅವರು ಓರ್ವ ಕ್ರಿಕೆಟರ್ ಎಂಬುದು. ಹೌದು, ಇವರು 2014 ರಲ್ಲಿ ತನ್ನ ಟೆನ್ನಿಸ್ ವೃತ್ತಿಯಲ್ಲಿ ವಿರಾಮ ಪಡೆದುಕೊಂಡು ಮಹಿಳೆಯರ ಬಿಗ್​ ಬ್ಯಾಶ್ ಲೀಗ್ ನಲ್ಲಿ ಕಣಕ್ಕಿಳಿಯಲು ನಿರ್ಧರಿಸುತ್ತಾರೆ. ಅದರಂತೆ ಅವರು ಬ್ರಿಸ್ಬೇನ್ ಹೀಟ್ ತಂಡದಲ್ಲಿ ಸ್ಥಾನ ಪಡೆದುಕೊಂಡು ಪಂದ್ಯವನ್ನೂ ಆಡುತ್ತಾರೆ.

ಇವರಿಗೆ ಕ್ರಿಕೆಟ್​ನಲ್ಲಿ ಸಾಕಷ್ಟು ಆಸಕ್ತಿ ಇತ್ತು. ಆದರೆ, ತರಭೇತಿಯ ಕೊರತೆಯಿಂದ ಈ ಕ್ಷೇತ್ರದಲ್ಲಿ ಸಂಪೂರ್ಣ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಆಡಿದ ಒಟ್ಟು 10 ಪಂದ್ಯಗಳಲ್ಲಿ ಇವರ ಗರಿಷ್ಠ ಸ್ಕೋರ್ 39 ರನ್. ಒಟ್ಟಾರೆಯಾಗಿ 69 ರನ್ ಗಳಿಸಿದರಷ್ಟೆ. ಬಳಿಕ ಕ್ರಿಕೆಟ್ ನನ್ನ ಫೀಲ್ಡ್ ಅಲ್ಲ ಎಂದು ಮನವರಿಕೆಯಾಗಿ ಟೆನ್ನಿಸ್​ಗೆ ಕಮ್​ಬ್ಯಾಕ್ ಮಾಡುತ್ತಾರೆ. 2019 ರಲ್ಲಿನ ಸಂದರ್ಶನವೊಂದರಲ್ಲಿ ಆಶ್ಲೀಗ್ ಬಾರ್ಟಿ ಅವರು ನಾನು ಕ್ರಿಕೆಟ್ ಆಡಿದ ಸಂದರ್ಭ ಅದೊಂದು ಅದ್ಭುತ ಕ್ಷಣ ಎಂದು ಹೇಳಿದ್ದರು.

Copa America Final: ಬ್ರೆಜಿಲ್ ಮಣಿಸಿ 28 ವರ್ಷಗಳ ಬಳಿಕ ಚಾಂಪಿಯನ್ ಪಟ್ಟಕ್ಕೇರಿದ ಅರ್ಜೆಂಟಿನಾ

Tokyo Olympics: ನಿಮ್ಮ ದೇಶಕ್ಕೆ ವಾಪಸ್ ಹೋಗಿ, ನಮಗೆ ಒಲಂಪಿಕ್ಸ್ ಬೇಡ; ಹೆಚ್ಚಾಯ್ತು ಜಪಾನಿಗರ ಪ್ರತಿಭಟನೆ

Published On - 11:04 am, Sun, 11 July 21