ಗಾಯಗೊಂಡಿರುವ ಒಲ್ಲೀ ಪೋಪ್ ಭಾರತದ ವಿರುದ್ಧ ಮೊದಲ ಟೆಸ್ಟ್ ಆಡುವುದು ಅನುಮಾನ, ದಾವಿದ್ ಮಲನ್​ಗೆ ಅವಕಾಶ ಸಾಧ್ಯತೆ

ಒಂದು ಪಕ್ಷ ಆಗಸ್ಟ್ 4 ಕ್ಕಿಂತ ಮೊದಲು ಪೋಪ್ ಚೇತರಿಸಿಕೊಳ್ಳದಿದ್ದರೆ ಸೀಮಿತ ಓವರ್​ಗಳ ಪಂದ್ಯಗಲ್ಲಿ ಭರ್ಜರಿ ಪ್ರದರ್ಶನಗಳನ್ನು ನೀಡುತ್ತಾ ಈಸಿಬಿ ಆಯ್ಕೆ ಸಮಿತಿಯನ್ನು ಬಹಳ ಇಂಪ್ರೆಸ್ ಮಾಡಿರುವ ದಾವಿದ್ ಮಲನ್ ಅವಕಾಶ ಗಿಟ್ಟಿಸಿವ ಸಾಧ್ಯತೆ ದಟ್ಟವಾಗಿದೆ.

ಗಾಯಗೊಂಡಿರುವ ಒಲ್ಲೀ ಪೋಪ್ ಭಾರತದ ವಿರುದ್ಧ ಮೊದಲ ಟೆಸ್ಟ್ ಆಡುವುದು ಅನುಮಾನ, ದಾವಿದ್ ಮಲನ್​ಗೆ ಅವಕಾಶ ಸಾಧ್ಯತೆ
ಒಲ್ಲೀ ಪೋಪ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 11, 2021 | 1:28 AM

ಗಾಯಾಳುಗಳ ಸಮಸ್ಯೆ ಕೇವಲ ಭಾರತಕ್ಕೆ ಮಾತ್ರ ಅಲ್ಲ, ಇಂಗ್ಲೆಂಡ್​ಗೂ ಆಗುತ್ತಿದೆ. ಆಂಗ್ಲರ ವಿಕೆಟ್​ ಕೀಪರ್-ಬ್ಯಾಟ್ಸ್​ಮನ್ ಒಲ್ಲೀ ಪೋಪ್ ಭಾರತ ವಿರುದ್ಧ ನಡೆಯುವ 5-ಪಂದ್ಯಗಳ ಮೊದಲ ಟೆಸ್ಟ್​​​ನಲ್ಲಿ ಆಡುವುದು ಅನುಮಾನ ಎಂಬ ಮಾಹಿತಿ ಲಭ್ಯವಾಗಿದೆ. 23 ರ ಪ್ರಾಯದ ಪೋಪ್ ಶನಿವಾರದಂದು ಸರ್ರೆ ಪರ ಪಂದ್ಯವೊಂದರಲ್ಲಿ ಆಡುವಾಗ ತೊಡೆಯ ಸ್ನಾಯು ಸೆಳೆತಕ್ಕೆ ಒಳಗಾದರೆಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್​ ಮಂಡಳಿ (ಈಸಿಬಿ) ಪ್ರಕಟಣೆಯೊಂದರಲ್ಲಿ ತಿಳಿಸಿದೆ. ಕೆಂಟ್​ ವಿರುದ್ಧ ನಡೆದ ಡೊಮೆಸ್ಟಿಕ್ ಟಿ20 ಪಂದ್ಯವೊಂದರಲ್ಲಿ ಆಡುವಾಗ ಪೋಪ್ ಗಾಯಗೊಂಡರೆಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

‘ತೊಡೆಯ ಸ್ನಾಯು ಸೆಳೆತಕ್ಕೊಳಗಾಗಿರುವ ಪೋಪ್, ಇಂಡಿಯಾ ಮತ್ತು ಇಂಗ್ಲೆಂಡ್ ನಡುವೆ ಎಲ್​ವಿ ಇನ್ಸೂರನ್ಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಆರಂಭವಾಗುವವರೆಗೆ ಬೇರೆ ಯಾವುದೇ ಪಂದ್ಯ ಆಡುವುದಿಲ್ಲ. ಅವರು ಮೊದಲ ಟೆಸ್ಟ್ ಆರಂಭವಾಗುವ ಮೊದಲು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುವ ಹಾಗೆ ಈಸಿಬಿ ಮತ್ತು ಸರ್ರೆ ಜಂಟಿಯಾಗಿ ಅವರ ರಿಹ್ಯಾಬ್​ಗೋಸ್ಕರ ಕೆಲಸ ಮಾಡಲಿವೆ.’ ಎಂದು ಈಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಎರಡು ದೇಶಗಳ ನಡುವೆ ಮೊದಲ ಟೆಸ್ಟ್ ಟ್ರೆಂಟ್​ ಬ್ರಿಜ್​ನಲ್ಲಿ ಅಗಸ್ಟ್ 4 ರಿಂದ ಆರಂಭವಾಗಲಿದೆ. ಇದುವರೆಗೆ 19 ಟೆಸ್ಟ್​ಗಳಲ್ಲಿ ಕಾಣಿಸಿಕೊಂಡಿರುವ ಪೋಪ್ 882 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಜನೆವೆರಿ 2020ರಲ್ಲಿ ಬಾರಿಸಿದ ಅಜೇಯ 135 ಅವರ ಗರಿಷ್ಠ ಸ್ಕೋರ್ ಆಗಿದೆ. ಆದರೆ ಕಳೆದ 8 ಟೆಸ್ಟ್​​ಗಳಲ್ಲಿ ಅವರು ಒಮ್ಮೆಯೂ 35 ಕ್ಕಿಂತ ಹೆಚ್ಚು ರನ್ ಗಳಿಸುವುದು ಸಾಧ್ಯವಾಗಿಲ್ಲ.

ಒಂದು ಪಕ್ಷ ಆಗಸ್ಟ್ 4 ಕ್ಕಿಂತ ಮೊದಲು ಪೋಪ್ ಚೇತರಿಸಿಕೊಳ್ಳದಿದ್ದರೆ ಸೀಮಿತ ಓವರ್​ಗಳ ಪಂದ್ಯಗಲ್ಲಿ ಭರ್ಜರಿ ಪ್ರದರ್ಶನಗಳನ್ನು ನೀಡುತ್ತಾ ಈಸಿಬಿ ಆಯ್ಕೆ ಸಮಿತಿಯನ್ನು ಬಹಳ ಇಂಪ್ರೆಸ್ ಮಾಡಿರುವ ದಾವಿದ್ ಮಲನ್ ಅವಕಾಶ ಗಿಟ್ಟಿಸಿವ ಸಾಧ್ಯತೆ ದಟ್ಟವಾಗಿದೆ.

ಭಾರತದ ಯುವ ಆರಂಭ ಆಟಗಾರ ಶುಭ್ಮನ್ ಗಿಲ್​ ಸಹ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ, ಅವರ ರಿಪ್ಲೇಸ್​ಮೆಂಟ್​ ಅಗಿ ಒಬ್ಬ ಆರಂಭ ಆಟಗಾರರನನ್ನು ಇಗ್ಲೆಂಡ್​ಗೆ ಕಳಿಸುವಂತೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಕೇಳಿತ್ತು. ಆದರೆ ಗಮನಿಸಬೇಕಿರುವ ಆಂಶವೆಂದರೆ, ಗಿಲ್ ಮತ್ತು ರೋಹಿತ್ ಶರ್ಮ ಅವರನ್ನು ಬಿಟ್ಟು ಇನ್ನೂ ಮೂರು ಆರಂಭ ಆಟಗಾರರು ತಂಡದೊಂದಿಗಿದ್ದಾರೆ-ಮಾಯಾಂಕ್ ಅಗರ್​ವಾಲ್, ಕೆಎಲ್ ರಾಹುಲ್ ಮತ್ತು ಸ್ಟ್ಯಾಂಡ್​ಬೈ ಅಭಿಮನ್ಯು ಈಶ್ವರನ್.

ಆದರೆ, ಮಂಡಳಿಯು ಮತ್ತೊಬ್ಬ ಆಟಗಾರನನ್ನು ಕಳಿಸಿವುದು ಸಾಧ್ಯವಿಲ್ಲ, ಅಲ್ಲಿರುವವರನ್ನೇ ಆರಿಸಿಕೊಳ್ಳ್ಳಿ ಎಂದು ಹೇಳಿದೆ. ಮೂಲಗಳ ಪ್ರಕಾರ ಟೀಮ್ ಮ್ಯಾನೇಜ್ಮೆಂಟ್ ಪೃಥ್ವಿ ಶಾ ಅವರನ್ನು ಬದಲಿ ಆಟಗಾರನಾಗಿ ಕಳಿಸುವಂತೆ ಕೇಳಿತ್ತು. ಶಾ ಪ್ರಸ್ತುತವಾಗಿ ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ಮತ್ತೊಂದು ತಂಡದ ಭಾಗವಾಗಿದ್ದಾರೆ.

ಮೂಲಗಳ ಪ್ರಕಾರ ಈಶ್ವರನ್ ಅವರ ಟೆಕ್ನಿಕ್ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ಅಸಂತೃಪ್ತಿ ವ್ಯಕ್ತಪಡಿಸುತ್ತಿದೆ. ಆದರೆ ಅಗರವಾಲ್ ಮತ್ತು ರಾಹುಲ್ ಟೀಮಿನೊಂದಿಗೆ ಇದ್ದರೂ ಬದಲೀ ಆಟಗಾರನನ್ನು ಕೇಳುತ್ತಿರುವುದು ಮಂಡಳಿ ಮತ್ತು ಮಾಜಿ ಆಟಗಾರರಲ್ಲಿ ಸೋಜಿಗ ಹುಟ್ಟಿಸಿದೆ.

ಇದನ್ನೂ ಓದಿ: ಡಬ್ಲ್ಯೂಟಿಸಿ ಆಡಿದ 45 ದಿನಗಳ ನಂತರ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್​ ಸರಣಿಯನ್ನಾಡುವುದು ಮೂರ್ಖತನ ಮತ್ತು ಹಾಸ್ಯಾಸ್ಪದ: ವೆಂಗ್​ಸರ್ಕಾರ್

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?