AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೀಮ್ ಇಂಡಿಯಾದ ಸ್ಟಾರ್ ಆಟಗಾರನ ಸಾರ್ವಕಾಲಿಕ IPL XI ನಲ್ಲಿ ಧೋನಿಗಿಲ್ಲ ಸ್ಥಾನ: ಯಾರೆಲ್ಲಾ ಇದ್ದಾರೆ?

ಕ್ರಿಕ್​ಬಜ್​ನಲ್ಲಿ ಹರ್ಷ ಬೋಗ್ಲೆ ಅವರೊಡನೆ ನಡೆದ ಸಂಭಾಷಣೆಯ ವೇಳೆ ಸೂರ್ಯಕುಮಾರ್ ಯಾದವ್​ ತಮ್ಮ ನೆಚ್ಚಿನ ಐಪಿಎಲ್ ಇಲೆವೆನ್ (IPL XI) ಅನ್ನು ಆಯ್ಕೆ ಮಾಡಿದ್ದಾರೆ.

ಟೀಮ್ ಇಂಡಿಯಾದ ಸ್ಟಾರ್ ಆಟಗಾರನ ಸಾರ್ವಕಾಲಿಕ IPL XI ನಲ್ಲಿ ಧೋನಿಗಿಲ್ಲ ಸ್ಥಾನ: ಯಾರೆಲ್ಲಾ ಇದ್ದಾರೆ?
ಮಹೇಂದ್ರ ಸಿಂಗ್ ಧೋನಿ- 182* ಪಂದ್ಯಗಳು- ಚೆನ್ನೈ ಸೂಪರ್ ಕಿಂಗ್ಸ್​
TV9 Web
| Updated By: Vinay Bhat|

Updated on: Jul 11, 2021 | 1:00 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL)​ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎಂದರೆ ಅದು ಐದು ಬಾರಿ ಚಾಂಪಿಯರ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡ. ಇದುಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್​(CSK) ತಂಡ. ಚೆನ್ನೈ ತಂಡ ಕಳೆದ ಐಪಿಎಲ್ 2020 ರ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಬಿಟ್ಟರೆ ಉಳಿದ ಸೀಸನ್​ನಲ್ಲಿ ಬಲಿಷ್ಠ ತಂಡವಾಗಿತ್ತು. ಚೆನ್ನೈ ಇಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿದೆ ಎಂದರೆ ಅದಕ್ಕೆ ಕಾರಣ ಎಂ. ಎಸ್ ಧೋನಿ (MS Dhoni) ಅವರ ನಾಯಕತ್ವ ಎಂದರೆ ತಪ್ಪಾಗಲಾರದು.

ಹೀಗಾಗಿ ಹೆಚ್ಚಿನ ಭಾರತ ಅಥವಾ ವಿದೇಶಿ ಆಟಗಾರರು ತಮ್ಮ ನೆಚ್ಚಿನ ಪ್ಲೇಯಿಂಗ್ XI ಆಯ್ಕೆ ಮಾಡುವಾಗ ಧೋನಿಯನ್ನು ತಂಡದಲ್ಲಿ ಸೇರಿಸಿಕೊಂಡಿರುವುದನ್ನು ನಾವು ಕಂಡಿದ್ದೇವೆ. ಆದರೆ, ಟೀಮ್ ಇಂಡಿಯಾದ ಯುವ ಸ್ಟಾರ್ ಆಟಗಾರ, ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬ್ಯಾಟ್ಸ್​ಮನ್​ ಸೂರ್ಯಕುಮಾರ್ ಯಾದವ್ ತಮ್ಮ ಸಾರ್ವಕಾಲಿಕ IPL XI ನಲ್ಲಿ ಧೋನಿಯನ್ನು ಕೈಬಿಟ್ಟಿದ್ದಾರೆ. ಧೋನಿಯನ್ನು ಸೇರಿಸಿಕೊಳ್ಳದಿರುವುದು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದೆ.

ಕ್ರಿಕ್​ಬಜ್​ನಲ್ಲಿ ಹರ್ಷ ಬೋಗ್ಲೆ ಅವರೊಡನೆ ನಡೆದ ಸಂಭಾಷಣೆಯ ವೇಳೆ ಸೂರ್ಯಕುಮಾರ್ ಯಾದವ್​ ತಮ್ಮ ನೆಚ್ಚಿನ ಐಪಿಎಲ್ ಇಲೆವೆನ್ ಅನ್ನು ಆಯ್ಕೆ ಮಾಡಿದ್ದಾರೆ. ತಮ್ಮನ್ನು ಮತ್ತು ಮುಂಬೈ ಇಂಡಿಯನ್ಸ್ ತಂಡದನ ನಾಲ್ಕು ಆಟಗಾರರನ್ನು ಒಳಗೊಂಡಿರಬೇಕೆಂಬ ಷರತ್ತಿನ ಮೇಲೆ ಈ ತಂಡವನ್ನು ಸೂರ್ಯ ಆಯ್ಕೆ ಮಾಡಿದ್ದಾರೆ.

ಮೊದಲಿಗರಾಗಿ ತಮ್ಮ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟ್ಸ್​ಮನ್ ಜೋಸ್ ಬಟ್ಲರ್​ರನ್ನು ಸೂರ್ಯ ಆಯ್ಕೆ ಮಾಡಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಬಟ್ಲರ್​ಗೆ ನೀಡಿದ್ದಾರೆ.

ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿಗೆ 3ನೇ ಸ್ಥಾನ ನೀಡಿದ್ದರೆ ತಮ್ಮನ್ನು 4ನೇ ಸ್ಥಾನಕ್ಕೆ ಆರಿಸಿದ್ದಾರೆ. 5ನೇ ಕ್ರಮಾಂಕಕ್ಕೆ ಆರ್​ಸಿಬಿಯ ಸ್ಫೋಟಕ ಬ್ಯಾಟ್ಸ್​ಮನ್​, ಗ್ರೇಟ್ ಫಿನಿಷರ್ ಎಬಿ ಡಿವಿಲಿಯರ್ಸ್ ಅವರನ್ನು ಆರಿಸಿದ್ದಾರೆ. ಆಲ್​ರೌಂಡರ್​ಗಳ ಸ್ಥಾನಕ್ಕೆ ಹಾರ್ದಿಕ್ ಪಾಂಡ್ಯ, ಕೆಕೆಆರ್​ನ ಆ್ಯಂಡ್ರೆ ರಸೆಲ್ ಮತ್ತು ಸಿಎಸ್​ಕೆ ತಂಡದ ರವೀಂದ್ರ ಜಡೇಜಾರನ್ನು ಸೇರಿಸಿಕೊಂಡಿದ್ದಾರೆ.

ಇನ್ನೂ ಬೌಲರ್​ಗಳಾಗಿ ರಶೀದ್ ಖಾನ್, ಜಸ್​ಪ್ರೀತ್ ಬುಮ್ರಾ ಮತ್ತು ಪಂಜಾಬ್ ಕಿಂಗ್ಸ್ ತಂಡದ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿದ್ದಾರೆ. ಇದರಲ್ಲಿ ಎಂ. ಎಸ್ ಧೋನಿಯನ್ನು ಆಯ್ಕೆ ಮಾಡದಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧೋನಿಯನ್ನು ಆಯ್ಕೆ ಮಾಡಿರದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟಿಗನಿಂದ ಡೈವ್ ಹೊಡೆದು ಊಹಿಸಲಾಗದ ಕ್ಯಾಚ್: ಇಲ್ಲಿದೆ ರೋಚಕ ವಿಡಿಯೋ

Ashleigh Barty: ಚೊಚ್ಚಲ ವಿಂಬಲ್ಡನ್ ಗೆದ್ದ ಆಸ್ಟ್ರೇಲಿಯಾದ ಆಶ್ಲೀಗ್ ಬಾರ್ಟಿ ಕ್ರಿಕೆಟರ್ ಎಂಬುದು ನಿಮಗೆ ಗೊತ್ತೇ?