ಶ್ರೀಲಂಕಾದಲ್ಲಿ ನಡೆಯುತ್ತಿರವ ಮಹಿಳೆಯರ ಏಷ್ಯಾಕಪ್ ಇದೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಫೈನಲ್ ಪಂದ್ಯದೊಂದಿಗೆ ಈ ಪಂದ್ಯಾವಳಿ ಕೊನೆಗೊಳ್ಳಲಿದೆ. ದಂಬುಲ್ಲಾದ ರಂಗಿರಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ಈ ಹೈವೋಲ್ಟೇಜ್ ಕದನಕ್ಕೆ ಆತಿಥ್ಯವಹಿಸುತ್ತಿದೆ. ಒಂಡೆದೆ ಶ್ರೀಲಂಕಾ ವನಿತೆಯರ ತಂಡ ಒಮ್ಮೆಯೂ ಏಷ್ಯಾಕಪ್ ಗೆದ್ದಿಲ್ಲ. ಹೀಗಾಗಿ ತವರಿನಲ್ಲಿ ಹಾಗೂ ತಮ್ಮ ಜನರ ಮುಂದೆ ಮೊದಲ ಬಾರಿಗೆ ಏಷ್ಯಾಕಪ್ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿಯುತ್ತಿದ್ದರೆ, ಇನ್ನೊಂದೆಡೆ ಭಾರತ ತಂಡ ಏಷ್ಯನ್ ಚಾಂಪಿಯನ್ ಕಿರೀಟವನ್ನು ತನ್ನೊಂದಿಗೆ ಉಳಿಸಿಕೊಳ್ಳುವುದರೊಂದಿಗೆ 8ನೇ ಬಾರಿ ಪ್ರಶಸ್ತಿ ವಶಪಡಿಸಿಕೊಳ್ಳುವ ಇರಾದೆಯಲ್ಲಿದೆ. ಇನ್ನು ಈ ಪಂದ್ಯದ ಟಾಸ್ ಕೂಡ ಮುಗಿದಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಎರಡು ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದೆ.
ಭಾರತ ತಂಡ: ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಉಮಾ ಛೆಟ್ರಿ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್, ರಾಧಾ ಯಾದವ್, ತನುಜಾ ಕನ್ವರ್ ಮತ್ತು ರೇಣುಕಾ ಠಾಕೂರ್ ಸಿಂಗ್.
ಶ್ರೀಲಂಕಾ ತಂಡ: ವಿಶಾಮಿ ಗುಣರತ್ನೆ, ಚಾಮರಿ ಅಟಪಟ್ಟು (ನಾಯಕಿ), ಹರ್ಷಿತಾ ಸಮರವಿಕ್ರಮ, ಕವಿಶ್ಕಾ ದಿಲ್ಹಾರಿ, ನೀಲಾಕ್ಷಿ ಡಿ ಸಿಲ್ವಾ, ಅನುಷ್ಕಾ ಸಂಜೀವನಿ (ವಿಕೆಟ್ ಕೀಪರ್), ಹಾಸಿನಿ ಪೆರೆರಾ, ಸುಗಂದಿಕಾ ಕುಮಾರಿ, ಇನೋಶಿ ಪ್ರಿಯದರ್ಶಿನಿ, ಉದೇಶಿಕಾ ಪ್ರಬೋಧನಿ, ಸಚಿನಿ ನಿಸಂಸಲಾ.
🚨 Toss 🚨#TeamIndia win the toss and elect to bat in the #Final against Sri Lanka
Follow the Match ▶️ https://t.co/RRCHLLmNEt#WomensAsiaCup2024 | #INDvSL | #ACC pic.twitter.com/T60WCAY7mT
— BCCI Women (@BCCIWomen) July 28, 2024
ನಾವು ಭಾರತ ಮತ್ತು ಶ್ರೀಲಂಕಾ ನಡುವಿನ ಮುಖಾಮುಖಿ ದಾಖಲೆಯ ಬಗ್ಗೆ ಮಾತನಾಡಿದರೆ, ಇದರಲ್ಲಿ ಭಾರತ ಮೇಲುಗೈ ಹೊಂದಿದೆ. ಉಭಯ ತಂಡಗಳ ನಡುವೆ ಒಟ್ಟು 24 ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 19 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ ನಾಲ್ಕು ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದ ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಟೂರ್ನಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ಇದುವರೆಗೆ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಭಾರತ, ಲೀಗ್ ಹಂತದಲ್ಲಿ ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ, ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು 78 ರನ್‌ಗಳಿಂದ ಮತ್ತು ನೇಪಾಳವನ್ನು 82 ರನ್‌ಗಳಿಂದ ಸೋಲಿಸಿತು. ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಸೋಲಿಸಿದ್ದ ಹರ್ಮನ್ ಪಡೆ ಅಜೇಯ ತಂಡವಾಗಿ ಫೈನಲ್ ಪ್ರವೇಶಿತ್ತು. ಪ್ರಸ್ತುತ ತಂಡದ ಆಟಗಾರ್ತಿಯರ ಫಾರ್ಮ್ ನೋಡಿದರೆ, ಈ ಬಾರಿಯೂ ಭಾರತವೇ ಚಾಂಪಿಯನ್ ಆಗುವುದು ಖಚಿತ ಎನ್ನಬಹುದು.
ಮತ್ತೊಂದೆಡೆ, ಶ್ರೀಲಂಕಾ ತಂಡ ಕೂಡ ಇಲ್ಲಿಯವರೆಗೆ ಅಜೇಯವಾಗಿದೆ. ಪಂದ್ಯಾವಳಿಯಲ್ಲಿ ರನ್‌ಗಳ ವಿಷಯದಲ್ಲಿ ಅತಿ ದೊಡ್ಡ ಗೆಲುವನ್ನೂ ಸಾಧಿಸಿದ ದಾಖಲೆ ನಿರ್ಮಿಸಿದೆ. ಶ್ರೀಲಂಕಾ ಗುಂಪು ಹಂತದಲ್ಲಿ ಮಲೇಷ್ಯಾವನ್ನು 144 ರನ್‌ಗಳಿಂದ ಸೋಲಿಸಿತ್ತು. ಇದುವರೆಗೆ ಶ್ರೀಲಂಕಾ ಪರ ಗರಿಷ್ಠ 243 ರನ್ ಗಳಿಸಿರುವ ನಾಯಕಿ ಚಾಮರಿ ಅಟಪಟ್ಟು ಭಾರತದ ಬೌಲರ್ಗಳಿಗೆ ದೊಡ್ಡ ತಲೆನೋವಾಗಿದ್ದಾರೆ. ಭಾರತ ಗೆಲುವು ದಾಖಲಿಸಬೇಕಾದರೆ ಆದಷ್ಟು ಬೇಗ ಚಾಮರಿ ಅಟಪಟ್ಟು ವಿಕೆಟ್ ಪಡೆಯಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Sun, 28 July 24