ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್: ಫೈನಲ್​ಗೆ ಅರ್ಹತೆ ಗಿಟ್ಟಿಸಿದ ನ್ಯೂಜಿಲೆಂಡ್

|

Updated on: Feb 02, 2021 | 11:21 PM

ಫೆಬ್ರುವರಿ 2ರವರೆಗಿನ ಸ್ಥಿತಿಯನ್ನು ಗಮನಿಸದ್ದೇಯಾದರೆ ಶೇಕಡಾ 71.7 ಅಂಕಗಳೊಂದಿಗೆ (Percentage of Points) ಭಾರತ ಮೊದಲ ಸ್ಥಾನದಲ್ಲಿದೆ. 70 ಪಿಸಿಟಿ ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್: ಫೈನಲ್​ಗೆ ಅರ್ಹತೆ ಗಿಟ್ಟಿಸಿದ ನ್ಯೂಜಿಲೆಂಡ್
ನ್ಯೂಜಿಲೆಂಡ್ ಕ್ರಿಕೆಟ್ ತಂಡ
Follow us on

ಕೇನ್ ವಿಲಿಯಮ್ಸನ್ ನೇತೃತ್ವದ ನ್ಯೂಜಿಲೆಂಡ್ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನ (ಡಬ್ಲ್ಯುಟಿಸಿ) ಆರಂಭಿಕ ಆವೃತ್ತಿಯ ಫೈನಲ್​ಗೆ ಅರ್ಹತೆ ಗಿಟ್ಟಿಸಿದ ಮೊದಲ ತಂಡವೆನಿಸಿಕೊಂಡಿದೆ. ಕೊವಿಡ್-19 ಭೀತಿಯಿಂದ ಅಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಂದೂಡಿರುವುದರಿಂದ ಈ ಬೆಳವಣಿಗೆ ಸೃಷ್ಟಿಯಾಗಿದೆ.

ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಂದೂಡಿರುವುದು ಆಸ್ಟ್ರೇಲಿಯಾಗೆ ದೊಡ್ಡ ಸಮಸ್ಯೆಯಾಲಿದೆ. ಈಗ ಅದು ಇತರ ದೇಶಗಳ ನಡುವೆ ನಡೆಯುವ ಟೆಸ್ಟ್ ಪಂದ್ಯಗಳ ಫಲಿತಾಂಶಗಳ ಮೇಲೆ ಆತುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಮಂಗಳವಾರದವರೆಗಿನ (ಫೆಬ್ರುವರಿ 2) ಸ್ಥಿತಿಯನ್ನು ಗಮನಿಸಿದ್ದೇಯಾದರೆ ಶೇಕಡಾ 71.7 ಅಂಕಗಳೊಂದಿಗೆ (Percentage of Points, PCT) ಭಾರತ ಮೊದಲ ಸ್ಥಾನದಲ್ಲಿದೆ. 70 ಪಿಸಿಟಿ ಅಂಕಗಳನ್ನು ಹೊಂದಿರುವ ನ್ಯೂಜಿಲೆಂಡ್ ಎರಡನೇ ಸ್ಥಾನದಲ್ಲಿದೆ. ಅದರೆ, ನ್ಯೂಜಿಲೆಂಡ್ ಪ್ರಸಕ್ತ ವರ್ಷದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಆವೃತ್ತಿಯಲ್ಲಿ ತನ್ನ ಪಾಲಿನ ಎಲ್ಲ ಟೆಸ್ಟ್​ಗಳನ್ನು ಅಡಿ ಮುಗಿಸಿರುವುದರಿಂದ ಅದರ ಪಾಯಿಂಟ್ಸ್​ಗಳಲ್ಲಿ ಯಾವುದೇ ಬದಲಾವಣೆಯಾಗದು. ಹಾಗಾಗಿ ಅದು ಫೈನಲ್ ಅಡುವ ಅರ್ಹತೆ ಗಿಟ್ಟಿಸಿದೆ.

ಆಸ್ಟ್ರೇಲಿಯಾ 69.2 ಪಿಟಿಸಿ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ ಅದು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಂದೂಡಿರುವುದರಿಂದ ನ್ಯೂಜಿಲೆಂಡ್ ಅನ್ನು ಹಿಂದಿಕ್ಕುವ ಪ್ರಮೇಯವೇ ಉದ್ಭವಿಸುವುದಿಲ್ಲ.

ಭಾರತ ಮತ್ತು ಇಂಗ್ಲೆಂಡ್ ಶುಕ್ರವಾರದಿಂದ ನಾಲ್ಕು ಟೆಸ್ಟ್​ಗಳ ಸರಣಿಯಲ್ಲಿ ಭಾಗಿಯಾಗಲಿರುವುದರಿಂದ ತಮ್ಮ ಹಣೆಬರಹವನ್ನು ತಾವೇ ನಿರ್ಧರಿಸಿಕೊಳ್ಳಲಿದ್ದಾರೆ. ಇವೆರಡು ರಾಷ್ಟ್ರಗಳಿಗೆ ಪ್ರಸಕ್ತ ಡಬ್ಲ್ಯುಟಿಸಿಯ ಕೊನೆ ಸರಣಿಯಾಗಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಲೊಗೊ

ಹಾಗಾದರೆ ಭಾರತ ಅರ್ಹತೆ ಗಳಿಸಲು ಏನು ಮಾಡಬೇಕಿದೆ?

ಭಾರತದೆದುರು ಒಂದು ಸ್ಪಷ್ಟವಾದ ಸಮೀಕರಣವಿದೆ. ಫೈನಲ್​ಗೆ ಕ್ವಾಲಿಫೈ ಅಗಬೇಕಾದರೆ, ವಿರಾಟ್ ಕೊಹ್ಲಿ ನೇತೃತ್ವದ ಬಾರತೀಯ ತಂಡ ಕನಿಷ್ಟ ಎರಡು ಟೆಸ್ಟ್​ಗಳನ್ನು ಗೆಲ್ಲಬೇಕು ಮತ್ತು 4ರಲ್ಲಿ ಒಂದನ್ನೂ ಸೋಲಬಾರದು. ಹಾಗೆ ನೋಡಿದರೆ, ಭಾರತ 2-1 ಅಂತರದಿಂದ ಸರಣಿ ಗೆದ್ದರೂ ಅರ್ಹತೆ ಗಿಟ್ಟಿಸುತ್ತದೆ.

ಆದರೆ, ಭಾರತವೇನಾದರೂ 2 ಟೆಸ್ಟ್​ಗಳನ್ನು ಸೋತರೆ ಅದು ಡಬ್ಲ್ಯುಟಿಸಿ ಫೈನಲ್ ರೇಸ್​ನಿಂದ ಹೊರಬೀಳುತ್ತದೆ. ಇಂಗ್ಲೆಂಡ್ ಒಂದು ಪಕ್ಷ ಭಾರತವನ್ನು 4-0, 3-1, 3-0, 2-1 ಮತ್ತು 2-0 ಅಂತರದಿಂದ ಸೋಲಿಸಿದರೆ ಅದು ನ್ಯೂಜಿಲೆಂಡ್ ಜೊತೆ ಫೈನಲ್​ನಲ್ಲಿ ಸೆಣಸುವ ಅರ್ಹತೆ ಗಿಟ್ಟಿಸುತ್ತದೆ.

ಟೆಸ್ಟ್​ ಕ್ರಿಕೆಟ್‌ನಲ್ಲಿ ಕ್ರಿಕೆಟ್‌ ದೇವರ ದಾಖಲೆ ಮುರಿಯುವ ಸಾಮರ್ಥ್ಯ ಜೋ ರೂಟ್​ಗಿದೆ, ಅಂಕಿ ಅಂಶ ಅದನ್ನೇ ಹೇಳುತ್ತಿದೆ..!