BREAKING: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ 1983ರ ವಿಶ್ವಕಪ್ ಗೆಲುವಿನ ತಂಡದಲ್ಲಿದ್ದ ಯಶ್ಪಾಲ್ ಶರ್ಮಾ ನಿಧನರಾಗಿದ್ದಾರೆ. ಮಂಗಳವಾರ ಬೆಳಗಿನ ಜಾವ ಇವರಿಗೆ ಹೃದಯಾಘಾತವಾಗಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 70, 80ರ ದಶಕತದಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಇವರು ಸಾಕಷ್ಟು ಕೊಡುಗಡೆ ನೀಡಿದ್ದರು. ಅಲ್ಲದೆ 1983ರ ವಿಶ್ವಕಪ್ನಲ್ಲಿ ಇವರು ಪ್ರಮುಖ ಪಾತ್ರವಹಿಸಿದ್ದರು. 66 ವರ್ಷದ ಪಂಜಾಬ್ ಕ್ರಿಕೆಟರ್ ಯಶ್ಪಾಲ್ ದಿಢೀರ್ ನಿಧನಕ್ಕೆ ಕ್ರಿಕೆಟ್ ಲೋಕ ಸಂತಾಪ ಸೂಚಿಸಿದೆ.
पूर्व क्रिकटेर यशपाल शर्मा के अचानक निधन की खबर सुनकर स्तब्ध हूँ. ’83 में पहली बार इंडिया को वर्ल्ड कप जिताने वाली टीम के सदस्य, यशपाल जी कई साल से इंडिया टीवी के क्रिकेट एक्स्पर्ट थे. उनके जाने से क्रिकेट जगत को भारी नुक़सान हुआ है. विनम्र श्रद्धांजलि. @cricyashpal
— Rajat Sharma (@RajatSharmaLive) July 13, 2021
Very Very Sad News to Share…World Cup Winner @cricyashpal Sh Yashpal Sharma ji had a major Cardiac Arrest in the morning today…Rest In Peace Champion player @indiatvnews
— Samip Rajguru (@samiprajguru) July 13, 2021
ಭಾರತ ತಂಡದಲ್ಲಿ ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಗುರಿತಿಸಿಕೊಂಡಿದ್ದರು. ಭಾರತ ಪರ 37 ಏಕದಿನ ಮತ್ತು 42 ಟೆಸ್ಟ್ ಪಂದ್ಯಗಳಲ್ಲಿ ಯಶ್ಪಾಲ್ ಕಣಕ್ಕಿಳಿದಿದ್ದರು. ಕೆಲ ಸಮಯ ರಾಷ್ಟ್ರೀಯ ತಂಡದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಟೆಸ್ಟ್ನಲ್ಲಿ ಇವರು 2 ಶತಕ, 9 ಅರ್ಧಶತಕ ಬಾರಿಸಿ 1606 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 4 ಅರ್ಧಶತಕ ಸಹಿತ 883 ರನ್ ಬಾರಿಸಿದ್ದರು. 1979 ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ ಕ್ರೀಡಾಂಗಣದಲ್ಲಿ ಯಶ್ಪಾಲ್ ಅವರು ಭಾರತ ಟಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು.
ರಣಜಿಯಲ್ಲಿ ಇವರು ಒಟ್ಟು 160 ಪಂದ್ಯಗಳನ್ನು ಆಡಿದ್ದಾರೆ. 21 ಶತಕದ ಜೊತೆ 8,933 ರನ್ ಬಾರಿಸಿದ್ದು ಅಜೇಯ 201 ರನ್ ಯಶ್ಪಾಲ್ ಅವರ ಗರಿಷ್ಠ ಸ್ಕೋರ್ ಆಗಿದೆ.
Published On - 11:13 am, Tue, 13 July 21