Younis Khan: ಅವಧಿಗೂ ಮುನ್ನವೇ ಪಾಕ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಗೆ ಯೂನಿಸ್ ಖಾನ್ ರಾಜೀನಾಮೆ!

|

Updated on: Jun 22, 2021 | 5:00 PM

Younis Khan: ಪಾಕಿಸ್ತಾನ ತಂಡದೊಂದಿಗೆ ಅವರ ಒಪ್ಪಂದವು ಟಿ 20 ವಿಶ್ವಕಪ್ 2022 ರವರೆಗೆ ಇತ್ತು. ಆದರೆ ಏಳು ತಿಂಗಳ ಸೇವೆಯ ನಂತರ ಯೂನಿಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

Younis Khan: ಅವಧಿಗೂ ಮುನ್ನವೇ ಪಾಕ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಗೆ ಯೂನಿಸ್ ಖಾನ್ ರಾಜೀನಾಮೆ!
ಯೂನಿಸ್ ಖಾನ್
Follow us on

ಪಾಕಿಸ್ತಾನ ಕ್ರಿಕೆಟ್ ತಂಡವು ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಲಿದೆ. ಆದರೆ ಈ ಪ್ರವಾಸಕ್ಕೂ ಮೊದಲು ತಂಡ ದೊಡ್ಡ ಹಿನ್ನಡೆ ಅನುಭವಿಸಿದೆ. ಪಾಕ್ ಬ್ಯಾಟಿಂಗ್ ಕೋಚ್ ಯೂನಿಸ್ ಖಾನ್ ತಂಡದ ಬ್ಯಾಟಿಂಗ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಈ ಹುದ್ದೆಗೆ ನೇಮಕಗೊಂಡಿದ್ದ ಅವರು ಮುಖ್ಯ ಕೋಚ್ ಮಿಸ್ಬಾ-ಉಲ್-ಹಕ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದರು. ಪಾಕಿಸ್ತಾನ ತಂಡದೊಂದಿಗೆ ಅವರ ಒಪ್ಪಂದವು ಟಿ 20 ವಿಶ್ವಕಪ್ 2022 ರವರೆಗೆ ಇತ್ತು. ಆದರೆ ಏಳು ತಿಂಗಳ ಸೇವೆಯ ನಂತರ ಯೂನಿಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆ ನೀಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ.

ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಾಸಿಮ್ ಖಾನ್ ಯೂನಿಸ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಹಿರಿಯ ಕ್ರಿಕೆಟಿಗರು ದೇಶದ ಭವಿಷ್ಯಕ್ಕೆ ತಮ್ಮ ಕೊಡುಗೆಯನ್ನು ಮುಂದುವರಿಸುತ್ತಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ. ಪಿಸಿಬಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಯೂನಿಸ್ ಖಾನ್ ಅವರಂತಹ ಅನುಭವಿ ತಜ್ಞರನ್ನು ಕಳೆದುಕೊಂಡಿರುವುದು ತುಂಬಾ ದುಃಖಕರವಾಗಿದೆ. ಅನೇಕ ಚರ್ಚೆಗಳ ನಂತರ, ನಾವಿಬ್ಬರೂ ಈ ನಿರ್ಧಾರವನ್ನು ಒಮ್ಮತದಿಂದ ತೆಗೆದುಕೊಂಡಿದ್ದೇವೆ. ನಾನು ಈ ಅಲ್ಪಾವಧಿಯಲ್ಲಿ ಪಾಕಿಸ್ತಾನ ಪುರುಷರ ರಾಷ್ಟ್ರೀಯ ತಂಡಕ್ಕೆ ನೀಡಿದ ಕೊಡುಗೆಗಾಗಿ ಯೂನಿಸ್ ಖಾನ್ ಅವರಿಗೆ ಧನ್ಯವಾದ ಹೇಳಲು ಇಷ್ಟಪಡುತ್ತೇನೆ ಎಂದಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದೊಂದಿಗೆ ಪ್ರಾರಂಭವಾಯಿತು
ನ್ಯೂಜಿಲೆಂಡ್ ಪ್ರವಾಸದೊಂದಿಗೆ ಯೂನಿಸ್ ಖಾನ್ ಬ್ಯಾಟಿಂಗ್ ಕೋಚ್ ಆಗಿ ಪಾದಾರ್ಪಣೆ ಮಾಡಿದರು, ಅಲ್ಲಿ ಪಾಕಿಸ್ತಾನ ತಂಡವು ಟೆಸ್ಟ್ ಎರಡೂ ಪಂದ್ಯಗಳನ್ನು ಕಳೆದುಕೊಂಡಿತು. ಇದರ ನಂತರ ಪಾಕಿಸ್ತಾನವು ದಕ್ಷಿಣ ಆಫ್ರಿಕಾವನ್ನು ತಮ್ಮ ನೆಲದಲ್ಲಿ ಸೋಲಿಸಿತು. ಜೂನ್ 25 ರಂದು ಪಾಕ್ ತಂಡವು ಇಂಗ್ಲೆಂಡ್‌ಗೆ ತೆರಳಲಿದೆ ಅದೂ ಬ್ಯಾಟಿಂಗ್ ಕೋಚ್ ಇಲ್ಲದೆ. ಪಾಕಿಸ್ತಾನ ಜುಲೈ 20 ರಂದು ಇಂಗ್ಲೆಂಡ್ ಪ್ರವಾಸವನ್ನು ಕೊನೆಗೊಳಿಸಲಿದ್ದು, ನಂತರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಿ ಅಲ್ಲಿ ಅವರು ಐದು ಟಿ 20 ಪಂದ್ಯಗಳು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ. ಆದಾಗ್ಯೂ, ಮಂಡಳಿಯು ವೆಸ್ಟ್ ಇಂಡೀಸ್ ಪ್ರವಾಸದ ಮೊದಲು ಹೊಸ ಬ್ಯಾಟಿಂಗ್ ತರಬೇತುದಾರರನ್ನು ನೇಮಿಸುವ ನಿರೀಕ್ಷೆಯಿದೆ.