ಕೊರೊನಾ ವಿರುದ್ಧ ಹೋರಾಟಕ್ಕೆ ಯುವರಾಜ್ ಸಿಂಗ್ ನೆರವು; ದೇಶಾದ್ಯಂತ 1000 ಆಕ್ಸಿಜನ್ ಸಹಿತ ಹಾಸಿಗೆಗಳ ಪೂರೈಕೆ

|

Updated on: Jun 02, 2021 | 3:35 PM

Yuvraj Singh: ಗಂಭೀರ ಸ್ಥಿತಿಯಲ್ಲಿರುವವರನ್ನು ಬೆಂಬಲಿಸಲು ದೇಶಾದ್ಯಂತ ಒಂದು ಸಾವಿರ ಹಾಸಿಗೆಗಳನ್ನು ಒದಗಿಸಲಾಗುವುದು ಎಂದು ಯುವಿ ಘೋಷಿಸಿದ್ದಾರೆ.

ಕೊರೊನಾ ವಿರುದ್ಧ ಹೋರಾಟಕ್ಕೆ ಯುವರಾಜ್ ಸಿಂಗ್ ನೆರವು; ದೇಶಾದ್ಯಂತ 1000 ಆಕ್ಸಿಜನ್ ಸಹಿತ ಹಾಸಿಗೆಗಳ ಪೂರೈಕೆ
ಯುವರಾಜ್ ಸಿಂಗ್
Follow us on

ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಕೊರೊನಾ ಸಂತ್ರಸ್ತರ ನೆರವಿಗೆ ದಾವಿಸಿದ್ದಾರೆ. ಆಮ್ಲಜನಕ ಮತ್ತು ಹಾಸಿಗೆಗಳ ಕೊರತೆಯಿಂದ ಯಾರೂ ಸಾಯಬಾರದು ಎಂಬ ಉದ್ದೇಶದಿಂದ ಅವರು ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ. ಗಂಭೀರ ಸ್ಥಿತಿಯಲ್ಲಿರುವವರನ್ನು ಬೆಂಬಲಿಸಲು ದೇಶಾದ್ಯಂತ ಒಂದು ಸಾವಿರ ಹಾಸಿಗೆಗಳನ್ನು ಒದಗಿಸಲಾಗುವುದು ಎಂದು ಯುವಿ ಘೋಷಿಸಿದ್ದಾರೆ. ಯುವಿಕನ್ ಎಂಬ ಪ್ರತಿಷ್ಠಾನದ ಆಶ್ರಯದಲ್ಲಿ ಹಾಸಿಗೆಗಳನ್ನು ಒದಗಿಸಲಾಗುವುದು ಎಂದು ಯುವರಾಜ್ ಹೇಳಿದರು.

ವೆಂಟಿಲೇಟರ್ ಹೊಂದಿರುವ ಹಾಸಿಗೆಗಳು
ಯುವಿಕನ್ ಮತ್ತು ಒನ್ ಡಿಜಿಟಲ್ ಎಂಟರ್‌ಟೈನ್‌ಮೆಂಟ್ ಸಹಭಾಗಿತ್ವದಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಎನ್‌ಸಿಆರ್, ಹರಿಯಾಣ, ಪಂಜಾಬ್, ತೆಲಂಗಾಣ, ಕರ್ನಾಟಕ, ಮಧ್ಯಪ್ರದೇಶ, ಕಾಶ್ಮೀರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ಥಾನಗಳಲ್ಲಿ ಆಮ್ಲಜನಕ ಮತ್ತು ವೆಂಟಿಲೇಟರ್ ಹೊಂದಿರುವ ಹಾಸಿಗೆಗಳನ್ನು ಸ್ಥಾಪಿಸಲಾಗುವುದು ಎಂದು ಯುವಿಕನ್ ಅಧಿಕೃತವಾಗಿ ಈ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ದೇಶದಲ್ಲಿ ಕೊರನಾ ವೈರಸ್ ಹರಡುವುದರಿಂದ ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದೇಶಾದ್ಯಂತ ಅನೇಕರು ಸಾವನ್ನಪ್ಪಿದರು, ವಿಶೇಷವಾಗಿ ಆಮ್ಲಜನಕದ ಕೊರತೆಯಿಂದ ತುಂಬಾ ಜನ ಪ್ರಾಣ ಕಳೆದುಕೊಂಡರು. ಅದರೊಂದಿಗೆ ಸರ್ಕಾರಗಳು ಆಮ್ಲಜನಕದ ಪೂರೈಕೆಯತ್ತ ಗಮನ ಹರಿಸಿದವು. ಮತ್ತೊಂದೆಡೆ, ಚಲನಚಿತ್ರ, ಕ್ರೀಡೆ ಮತ್ತು ರಾಜಕೀಯ ಗಣ್ಯರು ಆಮ್ಲಜನಕ ಪೂರೈಕೆ ಮತ್ತು ಆಮ್ಲಜನಕ ಸಾಂದ್ರಕಗಳು ಸೇರಿದಂತೆ ಇತರ ವೈದ್ಯಕೀಯ ಸಾಧನಗಳನ್ನು ಸಹ ದಾನ ಮಾಡುತ್ತಿದ್ದಾರೆ. ಕೊರೊನಾ ಸಂತ್ರಸ್ತರ ನೆರವಿಗೆ ಬಂದವರಲ್ಲಿ ಯುವರಾಜ್ ಕೂಡ ಈಗ ಸೇರಿಕೊಂಡಿದ್ದಾರೆ.