ಮಹಿಳೆಯನ್ನು ವಂಚಿಸಿದ ಆರೋಪ ಹೊತ್ತಿರುವ ಪಾಕ್ ಕ್ರಿಕೆಟಿಗನಿಗೆ ಮದುವೆ; ಸೋದರ ಸಂಬಂಧಿ ಜತೆ ವಿವಾಹ

ಮಹಿಳೆಯನ್ನು ವಂಚಿಸಿದ ಆರೋಪ ಹೊತ್ತಿರುವ ಪಾಕ್ ಕ್ರಿಕೆಟಿಗನಿಗೆ ಮದುವೆ; ಸೋದರ ಸಂಬಂಧಿ ಜತೆ ವಿವಾಹ
ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್

ಬಾಬರ್ ಅಜಮ್ ಕೂಡ ಈ ಹಿಂದೆ ವಿವಾದಗಳಲ್ಲಿದ್ದರು. ಮದುವೆಯಾಗುವುದಾಗಿ ನನ್ನನ್ನು ನಂಬಿಸಿ ಬಾಬರ್​ ನನ್ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮಹಿಳೆಯೊಬ್ಬಳು ಆರೋಪ ಹೊರಿಸಿದ್ದಳು.

pruthvi Shankar

|

Jun 02, 2021 | 5:20 PM

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ವಿವಾಹದ ಸಿದ್ಧತೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತನ್ನ ಸೋದರಸಂಬಂಧಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ಕಾರಣ ಬಾಬರ್ ಅಜಮ್ ಪ್ರಸ್ತುತ ಕ್ವಾರಂಟೈನ್​ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಅವರು ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಅವರು ಮದುವೆಯಾಗುವ ಬಗ್ಗೆ ಮಾಹಿತಿ ಇದೆ. ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಬಾಬರ್ ಮತ್ತು ಹುಡುಗಿ ಇಬ್ಬರ ಕುಟುಂಬಗಳು ಒಟ್ಟಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆದರೆ, ಬಾಬರ್ ಅವರ ಭಾವಿ ಪತ್ನಿ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಗೊಂಡಿಲ್ಲ. ಬಾಬರ್ ಅವರ ನಿಶ್ಚಿತಾರ್ಥದ ವಿವರಗಳನ್ನು ಸಹ ರಹಸ್ಯವಾಗಿರಿಸಿದ್ದಾರೆ. ಜಿಯೋ ನ್ಯೂಸ್ ಉರ್ದು ಪ್ರಕಾರ, ಪಾಕಿಸ್ತಾನ ತಂಡದ ಆಟಗಾರರಿಗೆ ಈ ನಿಶ್ಚಿತಾರ್ಥದ ಬಗ್ಗೆ ತಿಳಿದಿತ್ತು ಎಂದು ವರದಿಯಾಗಿದೆ.

ನನ್ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮಹಿಳೆ ಆರೋಪ ತಮಾಷೆಯೆಂದರೆ, ಮೇ 30 ರಂದು ಬಾಬರ್ ಅಜಮ್ ತಂಡದ ಸಹ ಆಟಗಾರ ಮತ್ತು ಪಾಕಿಸ್ತಾನದ ಮಾಜಿ ನಾಯಕ ಅಜರ್ ಅಲಿ, ಬಾಬರ್​ಗೆ ಮದುವೆಯಾಗಲು ಸಲಹೆ ನೀಡಿದ್ದರು. ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ, ಅಭಿಮಾನಿಯೊಬ್ಬರು ಅಜರ್ ಅವರ ಬಳಿ, ನೀವು ಬಾಬರ್ ಅಜಮ್‌ಗೆ ಏನನ್ನು ಹೇಳಲು ಬಯಸುತ್ತೀರಾ ಎಂದು ಕೇಳಿದರು. ಈ ಬಗ್ಗೆ ಉತ್ತರಿಸಿದ್ದ ಅಜರ್, ಮದುವೆಯಾಗು ಎಂದು ಹೇಳಲು ಬಯಸುತ್ತೇನೆ ಎಂದಿದ್ದರು. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕರಾಚಿ ಕಿಂಗ್ಸ್ ಪರ ಬಾಬರ್ ಅಜಮ್ ಆಡಲಿದ್ದಾರೆ. ಈ ಪಂದ್ಯಾವಳಿಯ ಉಳಿದ 20 ಪಂದ್ಯಗಳು ಜೂನ್ 9 ರಿಂದ ಪ್ರಾರಂಭವಾಗಲಿವೆ. ಆದರೂ ವೇಳಾಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ.

ಬಾಬರ್ ಅಜಮ್ ಕೂಡ ಈ ಹಿಂದೆ ವಿವಾದಗಳಲ್ಲಿದ್ದರು. ಮದುವೆಯಾಗುವುದಾಗಿ ನನ್ನನ್ನು ನಂಬಿಸಿ ಬಾಬರ್​ ನನ್ನೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಮಹಿಳೆಯೊಬ್ಬಳು ಆರೋಪ ಹೊರಿಸಿದ್ದಳು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಬಾಬರ್ ನಾನು ನಿರಪರಾಧಿ ಎಂದು ಹೇಳಿಕೊಂಡಿದ್ದರು. ಜೊತೆಗೆ ಮಹಿಳೆ ತನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಾಬರ್ ಆರೋಪಿಸಿದ್ದರು.

ಬಾಬರ್ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ ಬಾಬರ್ ಅಜಮ್ ಎಲ್ಲಾ ಸ್ವರೂಪಗಳಲ್ಲಿ ಪಾಕಿಸ್ತಾನ ತಂಡದ ನಾಯಕರಾಗಿದ್ದಾರೆ. ಅವರು ತಂಡದ ಅತ್ಯಂತ ಯಶಸ್ವಿ ಮತ್ತು ಸ್ಥಿರ ಆಟಗಾರ. ಅವರು ಕೆಲವು ಸಮಯದಿಂದ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಮುಂಬರುವ ಕಾಲದಲ್ಲಿಯೂ ಅವರು ಕಾರ್ಯನಿರತರಾಗಿರುತ್ತಾರೆ. ಅವರ ನಾಯಕತ್ವದಲ್ಲಿ ಪಾಕಿಸ್ತಾನ ಸತತ ನಾಲ್ಕು ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಇದರ ಅಡಿಯಲ್ಲಿ ಪಾಕಿಸ್ತಾನ ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಮತ್ತು ಟಿ 20 ಸರಣಿಗಳನ್ನು ಮತ್ತು ಜಿಂಬಾಬ್ವೆಯಲ್ಲಿ ಟಿ 20 ಮತ್ತು ಏಕದಿನ ಸರಣಿಯನ್ನು ಗೆದ್ದಿದೆ. ಇದಕ್ಕೂ ಮೊದಲು ಪಾಕಿಸ್ತಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಟೆಸ್ಟ್ ಸರಣಿಯಲ್ಲಿ ಬಾಬರ್ ಅಜಮ್ ಅವರ ತಂಡವು ವಿಜೇತರಾಗಿತ್ತು. ಈಗ ಪಾಕಿಸ್ತಾನ ಸೂಪರ್ ಲೀಗ್ ನಂತರ ಬಾಬರ್ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಬೇಕಾಗಿದೆ. ನಂತರ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನಗಳೊಂದಿಗಿನ ಅವರ ಸರಣಿಯನ್ನು ಪ್ರಸ್ತಾಪಿಸಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada