ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್‌ಸಂಗ್ (Samsung) ಕಂಪನಿಯ ಗ್ಯಾಲಕ್ಸಿ M ಸರಣಿಯ ಫೋನ್ಗಳಿಗೆ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆಯಿದೆ. ಈಗಾಗಲೇ ಈ ಸರಣಿಯಡಿಯಲ್ಲಿ ಕಂಪನಿ ಆಕರ್ಷಕ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಿದೆ. ಇದೀಗ ಮತ್ತೊಂದು ಬೊಂಬಾಟ್ ಫೋನನ್ನು ಬಿಡುಗಡೆ ಮಾಡಲು ಸ್ಯಾಮ್‌ಸಂಗ್ ತಯಾರಿ ನಡೆಸಿದೆ. ಅದುವೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಮ್53 5ಜಿ (Samsung Galaxy M53 5G). ಈ ಫೋನ್ ಇದೇ ಏಪ್ರಿಲ್ 22 ರಂದು ದೇಶದಲ್ಲಿ ಅನಾವರಣಗೊಳ್ಳಲಿದೆ. ಅಚ್ಚರಿ ಎಂದರೆ ಇದು ಬರೋಬ್ಬರಿ 108 ಮೆಗಾಫಿಕ್ಸೆಲ್ (108MP Camera) ಸೆನ್ಸಾರ್ ಸಾಮರ್ಥ್ಯದ ಆಕರ್ಷಕ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ 120Hz ರೀಫ್ರೇಶ್ ರೇಟ್ ಹೊಂದಿರಲಿದೆ ಎನ್ನಲಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ವಿಶೇಷತೆ ಏನೆಲ್ಲ ಇರಬಹುದು ಎಂಬುದನ್ನು ನೋಡೋಣ.
ಗ್ಯಾಲಕ್ಸಿ M53 ಫೋನಿನ ಫೀಚರ್ಸ್ ಬಗ್ಗೆ ಕಂಪನಿ ಇದುವರೆಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಆದರೆ, ಮೂಲಗಳ ಪ್ರಕಾರ ಇದು 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್ HD+ S-AMOLEDಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಹಾಗೆಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಅನ್ನು ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಡಿಸ್‌ಪ್ಲೇಯಲ್ಲಿ ಪಂಚ್ ಹೋಲ್ ಕಟ್‌ಔಟ್ ಇರಲಿದೆಯಂತೆ. ಮೀಡಿಯಾ ಟೆಕ್ ಡೈಮೆನ್ಸಿಟಿ 900 ಚಿಪ್‌ಸೆಟ್ ಪ್ರೊಸೆಸರ್ ಬಲ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ನೀಡಲಾಗಿದೆ.
ಈ ಫೋನ್ನಲ್ಲಿ ವಿಶೇಷವಾದ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿರಲಿದೆ ಎನ್ನಲಾಗಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರುವುದು ಖಚಿತವಾಗಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ ಹಾಗೂ ನಾಲ್ಕನೇ ಕ್ಯಾಮೆರಾಗಳು 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ ಎಂದು ನಿರೀಕ್ಷಿಸಲಾಗಿದೆ.
ಇನ್ನು ಗ್ಯಾಲಕ್ಸಿ M53 5G ಫೋನ್ 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದೆ ಎಂದು ಹೇಳಲಾಗುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G ಎಲ್‌ಟಿಇ, ವೈ-ಫೈ, ಬ್ಲೂಟೂತ್ ವಿ 5, ಜಿಪಿಎಸ್/ ಎ-ಜಿಪಿಎಸ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿರುತ್ತದೆ. ಜೊತೆಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಹೊಂದಿರಲಿದೆ ಎನ್ನಲಾಗಿದೆ. ಈ ಫೋನ್ ಬೆಲೆಯು ಭಾರತದಲ್ಲಿ ಸರಿಸುಮಾರು 34,500 ರೂ. ಇರಬಹುದು ಎಂದು ನಿರೀಕ್ಷಿಸಲಾಗಿದೆ.
Realme GT Neo 3: 5 ನಿಮಿಷ 50% ಚಾರ್ಜ್: ಈ ತಿಂಗಳು ಭಾರತಕ್ಕೆ ಕಾಲಿಡಲಿದೆ 150W ಫಾಸ್ಟ್ ಚಾರ್ಜರ್ ಫೋನ್
Best Smartphone: ಭಾರತದಲ್ಲಿ ಭರ್ಜರಿ ಸೇಲ್ ಕಾಣುತ್ತಿದೆ 20,000 ರೂ. ಒಳಗಿನ ಈ ಹೊಸ ಸ್ಮಾರ್ಟ್ಫೋನ್ಗಳು