Vivo V60e: ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ

ವಿವೋ V60e ಕೊನೆಗೂ ಭಾರತದಲ್ಲಿ ಬಿಡುಗಡೆಯಾಗಿದೆ. ವಿವೋ ನಿಂದ ಬಂದ ಈ 200MP ಕ್ಯಾಮೆರಾ ಫೋನ್ ಮಧ್ಯಮ ಬಜೆಟ್ ಬೆಲೆಯಲ್ಲಿ ಲಭ್ಯವಿದೆ. ಇದರ ವಿನ್ಯಾಸವು ಐಫೋನ್ 17 ಗೆ ಹೋಲುತ್ತದೆ. ಈ ವಿವೋ ಫೋನ್ 90W ವೇಗದ ಚಾರ್ಜಿಂಗ್‌ನೊಂದಿಗೆ ದೊಡ್ಡದಾಗ 6,500mAh ಬ್ಯಾಟರಿಯನ್ನು ಹೊಂದಿದೆ.

Vivo V60e: ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ 200MP ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್ ಬಿಡುಗಡೆ
Vivo V60e
Updated By: Vinay Bhat

Updated on: Oct 09, 2025 | 7:11 PM

ಬೆಂಗಳೂರು (ಅ. 09): ಪ್ರಸಿದ್ಧ ವಿವೋ (Vivo) ಕಂಪನಿ ಭಾರತದಲ್ಲಿ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಹೊಸ ಬಜೆಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ವಿವೋ ಫೋನ್ ನೋಡಲು ಥೇಟ್ ಐಫೋನ್ 17 ರಂತೆಯೇ ಕಾಣುತ್ತದೆ. ಇದರ ಹೆಸರು ವಿವೋ V60e. ಈ ಫೋನ್​ನಲ್ಲಿ ಕೇವಲ ಅದ್ಭುತ ಕ್ಯಾಮೆರಾ ಮಾತ್ರವಲ್ಲದೆ ಬಲಿಷ್ಠ ಬ್ಯಾಟರಿ ಮತ್ತು ಇತರ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ವಿವೋ ವಿ60 ಸರಣಿಯ ಅಡಿಯಲ್ಲಿ ಬಿಡುಗಡೆ ಆಗಿರುವ ಈ ಫೋನ್ ಪ್ರೀ-ಆರ್ಡರ್​ಗೆ ಲಭ್ಯವಿದೆ ಮತ್ತು ಶೀಘ್ರದಲ್ಲೇ ಮಾರಾಟಕ್ಕೆ ಬರಲಿದೆ.

ವಿವೋ V60e ಬೆಲೆ ಎಷ್ಟು?

ಈ ವಿವೋ ಫೋನ್ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ: 8GB RAM + 128GB, 8GB RAM + 256GB, ಮತ್ತು 12GB RAM + 256GB. ಇದರ ಆರಂಭಿಕ ಬೆಲೆ 29,999 ರೂ. ಇಂದ ಪ್ರಾರಂಭವಾಗುತ್ತದೆ. ಇತರ ಎರಡು ರೂಪಾಂತರಗಳ ಬೆಲೆ ಕ್ರಮವಾಗಿ 31,999 ರೂ. ಮತ್ತು 33,999 ರೂ. ಆಗಿದೆ. ಈ ಫೋನ್ ಅನ್ನು ಎರಡು ಬಣ್ಣಗಳಲ್ಲಿ ಬಿಡುಗಡೆ ಮಾಡಲಾಗಿದೆ: ಎಲೈಟ್ ಪರ್ಪಲ್ ಮತ್ತು ನೋಬಲ್ ಗೋಲ್ಡ್. ಇದು ವಿವೋದ ಅಧಿಕೃತ ಅಂಗಡಿಯ ಮೂಲಕ ಹಾಗೂ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಗೆ ಲಭ್ಯವಿರುತ್ತದೆ.

ವಿವೋ V60e ಫೀಚರ್ಸ್ ಏನು?

ಈ ವಿವೋ ಫೋನ್ 6.77-ಇಂಚಿನ AMOLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಫೋನ್‌ನ ಡಿಸ್ಪ್ಲೇ 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ, ಈ ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಮತ್ತು 120Hz ರಿಫ್ರೆಶ್ ದರದಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ. ಸ್ಕ್ರೀನ್ ರಕ್ಷಣೆಗಾಗಿ ಡೈಮಂಡ್ ಶೀಲ್ಡ್ ಗ್ಲಾಸ್ ಅನ್ನು ಒದಗಿಸಲಾಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7360 ಟರ್ಬೊ ಪ್ರೊಸೆಸರ್, 12GB ವರೆಗೆ RAM ಮತ್ತು 256GB ವರೆಗೆ ಸಂಗ್ರಹಣೆಯನ್ನು ಬೆಂಬಲಿಸುತ್ತದೆ.

ಇದನ್ನೂ ಓದಿ
ಜಿಮೇಲ್​ನಿಂದ ಝೋಹೊ ಮೇಲ್‌ಗೆ ಬದಲಾಯಿಸುತ್ತಿದ್ದೀರಾ?
ಹೆಚ್ಚುತ್ತಿದೆ ವಾಟ್ಸ್ಆ್ಯಪ್ ಹ್ಯಾಕ್: ತಿಳಿದ ತಕ್ಷಣ ಈ 5 ಹಂತ ಅನುಸರಿಸಿ
ಜಿಯೋದ ಹೊಸ ಫೋನ್ ಕೇವಲ 799 ಕ್ಕೆ ಬಿಡುಗಡೆ
ಭಾರತದಲ್ಲಿ 1GB ಡೇಟಾ ಒಂದು ಕಪ್ ಚಹಾಕ್ಕಿಂತ ಕಡಿಮೆ ಬೆಲೆಗೆ ಲಭ್ಯವಿದೆ: ಮೋದಿ

Zoho Mail: ಜಿಮೇಲ್​ನಿಂದ ಝೋಹೊ ಮೇಲ್‌ಗೆ ಬದಲಾಯಿಸುತ್ತಿದ್ದೀರಾ?: ಎಲ್ಲಾ ಇಮೇಲ್‌ಗಳನ್ನು ವರ್ಗಾಯಿಸುವ ಪ್ರಕ್ರಿಯೆ ಇಲ್ಲಿದೆ

ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದು 200 ಮೆಗಾ ಪಿಕ್ಸೆಲ್ ಮುಖ್ಯ ಅಲ್ಟ್ರಾ ಕ್ಲಿಯರ್ ಕ್ಯಾಮೆರಾವನ್ನು ಹೊಂದಿದೆ, ಇದು OIS (ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್) ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಇದು 30x ಸೂಪರ್ ಜೂಮ್ ಅನ್ನು ಸಹ ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ, ಫೋನ್ ಹಿಂಭಾಗದಲ್ಲಿ 8MP ಸೆಕೆಂಡರಿ ಅಲ್ಟ್ರಾ ವೈಡ್ ಆಂಗಲ್ ಕ್ಯಾಮೆರಾವನ್ನು ಹೊಂದಿದೆ. ಇದು ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 50MP ಕ್ಯಾಮೆರಾವನ್ನು ಹೊಂದಿರುತ್ತದೆ. ಜೊತೆಗೆ ಫೋನ್ ಹಿಂಭಾಗದಲ್ಲಿ ಔರಾ ಲೈಟ್ ಅನ್ನು ನೀಡಲಾಗಿದೆ.

ಈ ವಿವೋ ಫೋನ್ 90W ವೇಗದ ಚಾರ್ಜಿಂಗ್‌ನೊಂದಿಗೆ ದೊಡ್ಡದಾಗ 6,500mAh ಬ್ಯಾಟರಿಯನ್ನು ಹೊಂದಿದೆ. ಆಂಡ್ರಾಯ್ಡ್ 15 ಆಧಾರಿತ FuntouchOS 15 ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಆರು ವರ್ಷಗಳ ಸಾಫ್ಟ್‌ವೇರ್ ನವೀಕರಣಗಳನ್ನು ನೀಡುವುದಾಗಿ ಹೇಳಿಕೊಂಡಿದೆ. ಈ ಫೋನ್ IP68/IP69 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ರಕ್ಷಿಸುತ್ತದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ