ಬೆಂಗಳೂರಿಗೆ ಬರಲಿದೆ ಅಮೆರಿಕ ಮೂಲದ AI ಸಂಶೋಧನಾ ಕಂಪನಿ
ಬೆಂಗಳೂರು ಈಗ ಎಐಯಲ್ಲಿ ಸೂಪರ್ ಪವರ್ ಆಗಲಿದೆ. ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಸಂಶೋಧನಾ ಕಂಪನಿಯಾದ ಆಂಥ್ರಾಪಿಕ್ ತನ್ನ ಮೊದಲ ಭಾರತೀಯ ಕಚೇರಿಯನ್ನು ಸ್ಥಾಪಿಸಲು ರಾಜಧಾನಿಯನ್ನು (ಬೆಂಗಳೂರು) ಆಯ್ಕೆ ಮಾಡಿಕೊಂಡಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರು, ಅ.10: ಬೆಂಗಳೂರು ಮೊದಲಿನಿಂದಲ್ಲೂ ಬಹು ಉದ್ದಿಮೆ ಹಾಗೂ ತಂತ್ರಜ್ಞಾನಗಳಿಗೆ ತೆರೆದುಕೊಳ್ಳುತ್ತಿದೆ. ಜಾಗತಿಕ ಮಟ್ಟದ ತಂತ್ರಜ್ಞಾನಕ್ಕೂ ಪೈಪೋಟಿ ನೀಡುತ್ತ ಬಂದಿದೆ. ಇದೀಗ ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಸಂಶೋಧನಾ ಕಂಪನಿಯಾದ ಆಂಥ್ರಾಪಿಕ್ (Anthropic Bengaluru Office) ತನ್ನ ಮೊದಲ ಭಾರತೀಯ ಕಚೇರಿಯನ್ನು ಸ್ಥಾಪಿಸಲು ರಾಜಧಾನಿಯನ್ನು (ಬೆಂಗಳೂರು) ಆಯ್ಕೆ ಮಾಡಿಕೊಂಡಿದೆ ಎಂದು ಕರ್ನಾಟಕದ ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರ ಪ್ರಮುಖ ಕಚೇರಿ ಟೋಕಿಯೊ ನಂತರ ಇಂಡೋ-ಪೆಸಿಫಿಕ್‌ನಲ್ಲಿ ತನ್ನ ಎರಡನೇ ಕಂಪನಿಯನ್ನು ಸ್ಥಾಪಿಸಿಕೊಂಡಿದೆ. ಇದೀಗ ಬೆಂಗಳೂರು ಕೃತಕ ಬುದ್ಧಿಮತ್ತೆಗೆ ಜಾಗತಿಕ ಕೇಂದ್ರವಾಗಿ ಬೆಳೆಯುತ್ತಿದೆ.
ಬೆಂಗಳೂರು ತನ್ನ ನಾವೀನ್ಯತೆ ಪರಿಸರ ಮತ್ತು ಕೌಶಲ್ಯಪೂರ್ಣ ವಿಚಾರಗಳಿಂದ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. ಈ ಮೂಲಕ ಜಾಗತಿಕ ತಂತ್ರಜ್ಞಾನ ನಾಯಕರನ್ನು ಆಕರ್ಷಿಸುತ್ತಲೇ ಇದೆ. ಜಾಗತಿಕವಾಗಿ AI ದೈತ್ಯರು ತನ್ನ ಹೊಸ ಹೊಸ ಸಂಶೋಧನೆಯನ್ನು ಮಾಡಲು ಬೆಂಗಳೂರು ಸೂಕ್ತ ಪರಿಸರ ಎಂದು ನಂಬಿದ್ದಾರೆ. ಇದೀಗ ಬೆಂಗಳೂರು AI ಡೆವಲಪರ್ ಸಮುದಾಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ ಮೂಲಕ ಆಂಥ್ರೊಪಿಕ್ ಕಂಪನಿ ಮೊದಲ ಹೆಜ್ಜೆಯನ್ನು ಬೆಂಗಳೂರಿನಲ್ಲಿ ಇಟ್ಟಿದೆ.
ಸಚಿವ ಪ್ರಿಯಾಂಕ್ ಖರ್ಗೆ ಎಕ್ಸ್ ಪೋಸ್ಟ್
Anthropic, the US-based AI research company, has chosen Bengaluru for its first India office, its second in the Indo-Pacific region after Tokyo.
Global technology leaders continue to choose this city for its unmatched innovation environment and deep talent base.
Bengaluru is…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) October 8, 2025
ಆಂಥ್ರೊಪಿಕ್ ಕಂಪನಿ ಪ್ರಕಾರ, ಬೆಂಗಳೂರಿನಲ್ಲಿ ಪ್ರತಿಭಾನ್ವಿತ ಯುವ ಸಮೂಹ, ನಾವೀನ್ಯತೆ ಪರಿಸರ, ಅಭಿವೃದ್ಧಿ ಹೊಂದುತ್ತಿರುವ AI ಸಮುದಾಯ ಇದೆ. ಈ ಕಾರಣಕ್ಕೆ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ನಗರವು 1 ಲಕ್ಷಕ್ಕೂ ಹೆಚ್ಚು AI ವೃತ್ತಿಪರರಿಗೆ ನೆಲೆಯನ್ನು ಕಲ್ಪಿಸಿದೆ. ಭಾರತದಲ್ಲಿ 50%ದಷ್ಟು AI ಪ್ರತಿಭೆಗಳನ್ನು ಹೊಂದಿದ್ದು, ಈಗಾಗಲೇ AI ಮತ್ತು ಡೀಪ್‌ಟೆಕ್ ಪರಿಸರ ವ್ಯವಸ್ಥೆಗಳಲ್ಲಿ ಜಾಗತಿಕವಾಗಿ 5ನೇ ಸ್ಥಾನದಲ್ಲಿದೆ. ಭಾರತಕ್ಕೆ ಆಂಥ್ರೊಪಿಕ್ ಬರುವುದರಿಂದ ಸ್ಥಳೀಯ AI ಪ್ರತಿಭೆಗಳಿಗೆ ಅವಕಾಶಗಳು, ಉತ್ಪನ್ನ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳನ್ನು ಮತ್ತಷ್ಟು ವಿಸ್ತರಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ORR ಸಂಚಾರ ಸಲಹೆ: ಮೆಟ್ರೋ ಕಾಮಗಾರಿ ನಡೆಯುತ್ತಿದೆ, 45 ದಿನಗಳವರೆಗೆ ಬೆಂಗಳೂರಿನ ಈ ರಸ್ತೆ ಬಂದ್
ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ಟೋಕಿಯೊ ನಂತರ ಬೆಂಗಳೂರು ಏಷ್ಯಾ ಪೆಸಿಫಿಕ್‌ನಲ್ಲಿ ನಮ್ಮ ಎರಡನೇ ಕಚೇರಿಯಾಗಿ ಕಾರ್ಯನಿರ್ವಹಿಸಲಿದೆ, ಇದು ಮುಂಬರುವ ತಿಂಗಳುಗಳಲ್ಲಿ ತೆರೆಯಲಿದೆ. ಇದರಿಂದ ಭಾರತ ವೇಗವಾಗಿ ಬೆಳೆಯುತ್ತಿರುವ AI ಪರಿಸರ ವ್ಯವಸ್ಥೆಗೆ ಸೇವೆ ಸಲ್ಲಿಸಲು ನಮಗೆ ಸಹಾಯ ಮಾಡುತ್ತದೆ. ಜತೆಗೆ ಅಂತರರಾಷ್ಟ್ರೀಯ ಬೇಡಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ. ಟೆಕ್‌ಕ್ರಂಚ್‌ನ ವರದಿಗಳ ಪ್ರಕಾರ, ಆಂಥ್ರೊಪಿಕ್ ಕಂಪನಿಯು ಭಾರತದಲ್ಲಿ ತನ್ನ ಹೆಜ್ಜೆಯನ್ನು ಗುರುತಿಸಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನೊಂದಿಗೆ ಮಾತುಕತೆ ನಡೆಸುತ್ತಿದೆ. ಭಾರತದಲ್ಲಿ 2026ಕ್ಕೆ ತನ್ನ ಕಂಪನಿಯನ್ನು ತೆರೆಯುವ ಸಾಧ್ಯತೆ ಇದೆ ಎಂದು ಹೇಳಿದೆ. ಆಂಥ್ರೊಪಿಕ್ ಸಹ-ಸಂಸ್ಥಾಪಕ ಮತ್ತು ಸಿಇಒ ಡೇರಿಯೊ ಅಮೋಡೆ ಈಗಾಗಲೇ ಭಾರತಕ್ಕೆ ಭೇಟಿ ನೀಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಸೇರಿದಂತೆ ಸಾರ್ವಜನಿಕ ಅಧಿಕಾರಿಗಳು ಮತ್ತು ಉದ್ಯಮ ಪಾಲುದಾರರನ್ನು ಭೇಟಿ ಮಾಡಲಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:14 pm, Fri, 10 October 25




