ಸಿಎಂ ಕರೆದಿರೋ ಡಿನ್ನರ್ ಮೀಟಿಂಗ್ ಗುಟ್ಟು ಬಿಚ್ಚಿಟ್ಟ ಗೃಹ ಸಚಿವ ಡಾ. ಜಿ. ಪರಮೇಶ್ವರ್
ರಾಜ್ಯದಲ್ಲಿ ನವೆಂಬರ್ ಕ್ರಾಂತಿ ವಿಚಾರ ಭಾರಿ ಚರ್ಚೆಯಾಗ್ತಿರೋ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ಡಿನ್ನರ್ ಮೀಟಿಂಗ್ ಕರೆದಿರೋದು ಕೂತೂಹಲ ಮೂಡಿಸಿದೆ. ಈ ಬಗ್ಗೆ ಮಾಧ್ಯಮಗಳ ಜೊತೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿದ್ದು, ಸಭೆಯ ಉದ್ದೇಶ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 10: ಸೋಮವಾರ ಸಿಎಂ ಸಿದ್ದರಾಮಮಯ್ಯ (Siddaramaiah) ಆಯೋಜಿಸಿರುವ ಡಿನ್ನರ್ ಮೀಟಿಂಗ್ ವಿಚಾರದ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ. ಸಿಎಂ ಈ ಹಿಂದೆಯೂ ಅನೇಕ ಬಾರಿ ಊಟಕ್ಕೆ ಕರೆದಿದ್ದಾರೆ. ತುಂಬಾ ದಿನ ಆಗಿತ್ತು, ಹೀಗಾಗಿ ಮತ್ತೆ ಕರೆದಿದ್ದಾರೆ. ಸಿಎಂ ಡಿನ್ನರ್ ಕರೆಯುವುದಕ್ಕೆ ಯಾವುದೇ ವಿಶೇಷತೆ ಇಲ್ಲ. ಊಟ ಹಾಕ್ತಾರೆ, ನಾವು ಊಟ ಮಾಡಿಕೊಂಡು ಬರುತ್ತೇವೆ. ಡಿನ್ನರ್ ಸಭೆ ಅಜೆಂಡಾ ಊಟ ಅಷ್ಟೇ. ಇದೊಂದು ಸಾಮಾನ್ಯ ಸಭೆ ಎಂದು ಬೆಂಗಳೂರಿನಲ್ಲಿ ಪರಮೇಶ್ವರ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
